ಗೂಗಲ್ ಮ್ಯಾಪ್ಸ್ನಲ್ಲಿ ನಿಮ್ಮೂರ ಮಾರ್ಗವನ್ನೂ ಸೇರಿಸಬಹುದು! ಹೇಗೆ ಎಂದು ತಿಳಿಯಲು ಇಲ್ಲಿ ನೋಡಿ
WWW ಎಂದು ಎಲ್ಲರಿಗೂ ಪರಿಚಿತವಾದ ವರ್ಲ್ಡ್ವೈಡ್ ವೆಬ್ ಇಂದಿಗೆ (ಮಾರ್ಚ್ 12) 32 ವರ್ಷಗಳನ್ನು ಪೂರೈಸಿಕೊಂಡಿದೆ. ಟಿಮ್ ಬರ್ನರ್ಸ್ ಲೀ ಸಿದ್ಧಪಡಿಸಿದ ವರ್ಲ್ಡ್ವೈಡ್ ವೆಬ್ ಮೂರು ದಶಕಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ.
ಗೂಗಲ್ ಮ್ಯಾಪ್ಸ್ಗೆ ನೂತನ ಅಪ್ಡೇಟ್ಸ್ಗಳನ್ನು ನೀಡಲಾಗಿದೆ. ಜನರು ತಾವು ನಿಗದಿತವಾಗಿ ಭೇಟಿ ಮಾಡುವ ಸ್ಥಳೀಯ ಲೊಕೇಶನ್ಗಳ ರಿವ್ಯೂ, ಫೊಟೋಗಳನ್ನು ಸೇರಿಸಲು ಗೂಗಲ್ ಅವಕಾಶ ನೀಡಿದೆ. ಈ ಮೂಲಕ, ಗೂಗಲ್ನಲ್ಲಿ ಇಲ್ಲದ ಅಥವಾ ಗೂಗಲ್ನಲ್ಲಿ ಇದುವರೆಗೆ ಕಾಣಿಸದೇ ಇರುವ ರಸ್ತೆಗಳನ್ನು ಬಳಕೆದಾರರೇ ಸೇರಿಸಬಹುದಾಗಿದೆ. ಬಳಕೆದಾರರು ಗೆರೆ ಎಳೆದು ಮತ್ತು ಹೆಸರು ದಾಖಲಿಸಿ ರಸ್ತೆಯನ್ನು ಸೇರಿಸಬಹುದಾಗಿದೆ. ಜತೆಗೆ, ತಪ್ಪಾಗಿ ಕಾಣುವ ರಸ್ತೆಗಳನ್ನು ಮರುಜೋಡಣೆಯೂ ಮಾಡಬಹುದು.
ಇದನ್ನೆಲ್ಲಾ ಮಾಡೋದು ಹೇಗೆ ಎಂದು ತಿಳಿಯಲು ಇಲ್ಲಿ ಓದಿ:
- ಈ ಕೆಲಸವನ್ನು ಮಾಡಲು ಬಳಕೆದಾರರು ತಮ್ಮ ಡೆಸ್ಕ್ಟಾಪ್ನಲ್ಲಿ (ಕಂಪ್ಯೂಟರ್) ಗೂಗಲ್ ಮ್ಯಾಪ್ಸ್ ಅಪ್ಲಿಕೇಷನ್ ಹೊಂದಿರಬೇಕು
- ಮೊತ್ತಮೊದಲು ತಮ್ಮ ಡೆಸ್ಕ್ಟಾಪ್ಗಳ ಮೂಲಕ maps.google.comಗೆ ಭೇಟಿ ನೀಡಬೇಕು
- ಅಲ್ಲಿ ನಿಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲವಾದರೆ, ಆಗ ಸೈಡ್ ಮೆನು ಬಟನ್ ಕ್ಲಿಕ್ ಮಾಡಬೇಕು
- ಅಲ್ಲಿ edit the map ಆಯ್ಕೆ ಕ್ಲಿಕ್ ಮಾಡಬೇಕು, ಬಳಿಕ missing road ಆರಿಸಿಕೊಳ್ಳಬೇಕು
- ರಸ್ತೆ ಹಾದುಹೋಗಿರುವಂತೆ ಗೆರೆ ಎಳೆಯಬೇಕು. ಹೀಗೆ ಜೋಡಿಸಿದ ಹೊಸ ರಸ್ತೆಗೆ ಹೆಸರನ್ನು ಕೂಡ ಸೂಚಿಸಬಹುದು
- ರಸ್ತೆಗಳನ್ನು ಸೇರಿಸಿ, ಅಥವಾ ತಪ್ಪಾಗಿ ಗುರುತಾಗಿರುವ ರಸ್ತೆ ಸರಿಪಡಿಸಿ ಬಳಿಕ ಹೆಸರು ದಾಖಲಿಸಬಹುದು. ಈ ಆಯ್ಕೆಯನ್ನು ಗೂಗಲ್ ನೀಡುತ್ತಿದೆ
World Wide Webಗೆ 32 ವರ್ಷ! ತಂತ್ರಜ್ಞಾನ ಲೋಕದಲ್ಲಿ ಮತ್ತೊಂದು ಸಂತಸದ ವಿಚಾರವಿದೆ. WWW ಎಂದು ಎಲ್ಲರಿಗೂ ಪರಿಚಿತವಾದ ವರ್ಲ್ಡ್ವೈಡ್ ವೆಬ್ ಇಂದಿಗೆ (ಮಾರ್ಚ್ 12) 32 ವರ್ಷಗಳನ್ನು ಪೂರೈಸಿಕೊಂಡಿದೆ. ಟಿಮ್ ಬರ್ನರ್ಸ್ ಲೀ ಸಿದ್ಧಪಡಿಸಿದ ವರ್ಲ್ಡ್ವೈಡ್ ವೆಬ್ ಮೂರು ದಶಕಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಅಕ್ಟೋಬರ್ 1990ರಲ್ಲಿ ಮೊದಲ ವೆಬ್ ಬ್ರೌಸರ್ನ್ನು ಬರೆದರು. ಅಥವಾ ಅದನ್ನು ಬ್ರೌಸರ್ ಎಡಿಟರ್ ಎನ್ನಬಹುದು. WorldWideWeb ಎಂದು ಕರೆಯಲ್ಪಟ್ಟ ಬ್ರೌಸರ್, 1990ರ ಸಮಯದಲ್ಲಿ ವೆಬ್ ನೋಡುವ ಅವಕಾಶ ನೀಡಿದ್ದ ಏಕೈಕ ಬ್ರೌಸರ್ ಆಗಿತ್ತು. ಬಳಿಕ ಈ ಬ್ರೌಸರ್ ಎಡಿಟರ್ನ್ನು ನೆಕ್ಸಸ್ (Nexus) ಎಂದು ಹೆಸರಿಸಲಾಯಿತು. ಈಗ WorldWideWebನ್ನು ಸ್ಪೇಸ್ ಮೂಲಕ ಅಂದರೆ World Wide Web ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Udupi Ramachandra Rao: ಭಾರತದ ಹಿರಿಯ ವಿಜ್ಞಾನಿ ಯುಆರ್ ರಾವ್ಗೆ ವಿಶೇಷ ಡೂಡಲ್ ಮೂಲಕ ಗೌರವ ಸಮರ್ಪಿಸಿದ ಗೂಗಲ್
Netflix Mobile+ 299 Plan: ನೆಟ್ಫ್ಲಿಕ್ಸ್ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?
Published On - 7:01 pm, Fri, 12 March 21