ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಲಕ್ಷ್ಮಿಕಾಂತ್ ಪರ್ಸೆಕರ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 22, 2022 | 6:59 PM

ಲಕ್ಷ್ಮಿಕಾಂತ್ ಅವರು 2014 ರಿಂದ 2017ರ ಅವಧಿಗೆ ಗೋವಾದ ಮುಖ್ಯಮಂತ್ರಿಯಾಗಿದ್ದರು. ಆ ಸ್ಥಾನದಲ್ಲಿದ್ದ್ದ ದಿವಂಗತ ಮನೋಹರ್ ಪರಿಕ್ಕರ್ ಅವರನ್ನು ನರೇಂದ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಮಂತ್ರಿ ಅಗಿ ಆರಿಸಿಕೊಂಡಿದ್ದರಿಂದ ಲಕ್ಷ್ಮಿಕಾಂತ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು.

ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಲಕ್ಷ್ಮಿಕಾಂತ್ ಪರ್ಸೆಕರ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ!
ಲಕ್ಷ್ಮಿಕಾಂತ ಪರ್ಸೆಕರ್
Follow us on

ಶಿಸ್ತಿನ ಪಕ್ಷವೆಂದು ಗುರುತಿಸಿಕೊಳ್ಳುವ ಬಿಜೆಪಿಯಲ್ಲಿ ನಾಯಕರು ಪಕ್ಷವನ್ನು ಬಿಟ್ಟು ಹೊರಹೋಗುವ ಪರ್ವ ಮುಂದುವರಿದಿದೆ. ಉತ್ತರ ಪ್ರದೇಶದಲ್ಲಿ ಕೆಲ ಸಚಿವರು ಮತ್ತು ಶಾಸಕರು ಪಕ್ಷವನ್ನು ತ್ಯಜಿಸಿದ ಬೆನ್ನಲ್ಲೇ ಗೋವಾನಲ್ಲೂ ಅಂಥ ಬೆಳವಣಿಗೆ ಶುರುವಿಟ್ಟುಕೊಂಡಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಈ ಪುಟ್ಟ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ಲಕ್ಷ್ಮಿಕಾಂತ್ ಪರ್ಸೆಕರ್ ತಮಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಬಿಜೆಪಿಯನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಶನಿವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ಲಕ್ಷ್ಮಿಕಾಂತ್, ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಪಕ್ಷದಲ್ಲಿ ಮುಂದುವರಿಯುವುದು ತನಗಿಷ್ಟವಿಲ್ಲ, ಶನಿವಾರ ಸಾಯಂಕಾಲದೊಳಗೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ 65-ವರ್ಷ ವಯಸ್ಸಿನ ಲಕ್ಷ್ಮಿಕಾಂತ್ ಹೇಳಿದ್ದಾರೆ. ಲಕ್ಷ್ಮಿಕಾಂತ್ ಗೋವಾ ಬಿಜೆಪಿಯ ಕೋರ್ ಕಮಿಟಿ ಸದಸ್ಯ ಮತ್ತು ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ. ನಿನ್ನೆಯಷ್ಟೇ ಇದೇ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಬಿಜೆಪಿ ತೊರೆದಿದ್ದಾರೆ.

ಹಿಂದೆ ಅಂದರೆ, 2002 ಮತ್ತು 201ರಲ್ಲಿ ಲಕ್ಷ್ಮಿಕಾಂತ್ ಸ್ಪರ್ಧಿಸಿದ್ದ ಮ್ಯಾಂಡ್ರೆಮ್ ಕ್ಷೇತ್ರದ ಟಿಕೆಟ್ ಅನ್ನು ಹಾಲಿ ಶಾಸಕ ದಯಾನಂದ ಸೋಪ್ಟೆ ಅವರಿಗೆ ಬಿಜೆಪಿ ನೀಡಿದೆ. 2017 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಪ್ಟೆ, ಲಕ್ಷ್ಮಿಕಾಂತ್ ಅವರನ್ನು ಸೋಲಿಸಿದ್ದರು. ಅದರೆ 2019 ರಲ್ಲಿ ಅವರು ಇತರ 9 ಕಾಂಗ್ರೆಸ್ ನಾಯಕರೊಂದಿಗೆ ಬಿಜೆಪಿ ಸೇರಿದ್ದರು.

‘ಸದ್ಯಕ್ಕಂತೂ ನಾನು ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇನೆ, ಮುಂದೇನು ಮಾಡಬೇಕು ಅನ್ನೋದನ್ನು ಇನ್ನೂ ನಿರ್ಧರಿಸಿಲ್ಲ,’ ಎಂದು ಲಕ್ಷ್ಮಿಕಾಂತ್ ಹೇಳಿದರು. ಸೋಪ್ಟೆ ಅವರು ಮ್ಯಾಂಡ್ರೆಮ್ ನಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ, ಅವರ ಧೋರಣೆಯಿಂದ ಕಾರ್ಯಕರ್ತರಲ್ಲಿ ತೀವ್ರ ಸ್ವರೂಪದ ಅಸಮಾಧಾನ ಮನೆ ಮಾಡಿದೆ ಎಂದು ಅವರು ಹೇಳಿದರು.

ಲಕ್ಷ್ಮಿಕಾಂತ್ ಅವರು 2014 ರಿಂದ 2017ರ ಅವಧಿಗೆ ಗೋವಾದ ಮುಖ್ಯಮಂತ್ರಿಯಾಗಿದ್ದರು. ಆ ಸ್ಥಾನದಲ್ಲಿದ್ದ್ದ ದಿವಂಗತ ಮನೋಹರ್ ಪರಿಕ್ಕರ್ ಅವರನ್ನು ನರೇಂದ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಮಂತ್ರಿ ಅಗಿ ಆರಿಸಿಕೊಂಡಿದ್ದರಿಂದ ಲಕ್ಷ್ಮಿಕಾಂತ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು.

ಮುಂದಿನ ತಿಂಗಳು 14 ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಪಕ್ಷವು 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೋವಾ ವಿಧಾನ ಸಭೆಯಲ್ಲಿ 40 ಸ್ಥಾನಗಳಿವೆ.

ಮನೋಹರ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಸಹ ಶುಕ್ರವಾರ ಬಿಜೆಪಿಯನ್ನು ತೊರೆದಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅವರ ತಂದೆ 25 ವರ್ಷಗಳಿಂದ ಸತತವಾಗಿ ಪ್ರತಿನಿಧಿಸಿದ್ದ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಪಲ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದ ನಂತರ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು.

ಇದನ್ನೂ ಓದಿ:   ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ತೊರೆದ ಮನೋಹರ್ ಪರಿಕ್ಕರ್ ಪುತ್ರ, ಪಣಜಿಯಿಂದ ಸ್ಪರ್ಧಿಸುವುದಾಗಿ ಘೋಷಣೆ

Published On - 6:47 pm, Sat, 22 January 22