Virbhadra Singh: ಹಿಮಾಚಲ ಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್ ನಿಧನ

| Updated By: ಆಯೇಷಾ ಬಾನು

Updated on: Jul 08, 2021 | 7:26 AM

ವೀರಭದ್ರ ಸಿಂಗ್, ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸದರಾಗಿದ್ದರು. ಹಾಗೂ ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

Virbhadra Singh: ಹಿಮಾಚಲ ಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್ ನಿಧನ
ವೀರಭದ್ರ ಸಿಂಗ್
Follow us on

ಶಿಮ್ಲಾ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್(87) ದೀರ್ಘಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಗುರುವಾರ ಮುಂಜಾನೆ 3.40ಕ್ಕೆ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಐಜಿಎಂಸಿ) ಕೊನೆಯುಸಿರೆಳೆದರು ಎಂದು ಹಿರಿಯ ವೈದ್ಯಕೀಯ ಅಧೀಕ್ಷಕ ಡಾ.ಜಾನಕ್ ರಾಜ್ ತಿಳಿಸಿದ್ದಾರೆ.

ವೀರಭದ್ರ ಸಿಂಗ್ ಸೋಮವಾರ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಅವರ ಆರೋಗ್ಯ ಗಂಭೀರವಾಗಿತ್ತು. ಐಜಿಎಂಸಿಯ ನಿರ್ಣಾಯಕ ಆರೈಕೆ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಉಸಿರಾಟದ ತೊಂದರೆಯ ನಂತರ ಹೃದಯಶಾಸ್ತ್ರ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಇಷ್ಟೆಲ್ಲಾ ಹರ ಸಾಹಸ ಮಾಡಿದರು ವೀರಭದ್ರ ಸಿಂಗ್ ಉಳಿಯಲಿಲ್ಲ.

ವೀರಭದ್ರ ಸಿಂಗ್, ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸದರಾಗಿದ್ದರು. ಹಾಗೂ ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ವೀರಭದ್ರ ಸಿಂಗ್ರಿಗೆ ಜೂನ್ 11 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಹಾಗೂ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಈ ರೀತಿ ಪಾಸಿಟಿವ್ ಬಂದಿತ್ತು. ಈ ಹಿಂದೆ ಏಪ್ರಿಲ್ 12 ರಂದು ಅವರಿಗೆ ಪಾಸಿಟಿವ್ ವರದಿ ಬಂದಿತ್ತು. ಏಪ್ರಿಲ್ 12 ರಂದು ಪಾಸಿಟಿವ್ ವರದಿ ಬಳಿಕ ಅವರನ್ನು ಚಂಡೀಗಘಡದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಸಿಂಗ್ ಅವರು ಏಪ್ರಿಲ್ 30 ರಂದು ಕೊರೊನಾದಿಂದ ಗುಣಮುಖರಾಗಿ ಚಂಡೀಗ ಘಡದ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿ ಮನೆಗೆ ತೆರಳಿದ್ದರು. ಆದರೆ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯ ಮತ್ತು ಉಸಿರಾಟದ ತೊಂದರೆಯಿಂದ ಮತ್ತೆ ಐಜಿಎಂಸಿಗೆ ದಾಖಲಾದ್ರು. ಅಂದಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಅವರ ಜೀವನದ ಹೋರಾಟ ಅಂತ್ಯಗೊಂಡಿದೆ.

ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಮತ್ತು ಮಗ ವಿಕ್ರಮಾದಿತ್ಯ ಸಿಂಗ್ ಕೂಡ ರಾಜಕಾರಣಿಗಳು. .ಎಸ್.ಪ್ರತಿಭಾ ಮಾಜಿ ಸಂಸದರಾಗಿದ್ದರೆ, ವಿಕ್ರಮಾದಿತ್ಯ ಶಿಮ್ಲಾ ಗ್ರಾಮೀಣ ಶಾಸಕರಾಗಿದ್ದಾರೆ. ಇನ್ನು ಕುಟುಂಬಸ್ಥರು ಸಿಂಗ್ ಅವರ 87 ನೇ ಹುಟ್ಟುಹಬ್ಬವನ್ನು ಹೊಲಿ ಲಾಡ್ಜ್‌ನಲ್ಲಿರುವ ತಮ್ಮ ನಿವಾಸದಲ್ಲಿ ಜೂನ್ 23 ರಂದು ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿದ್ದರು. ಆ ಸಮಯದಲ್ಲಿ, ಶ್ರೀ ವೀರಭದ್ರ ಐಜಿಎಂಸಿಯಲ್ಲಿದ್ದರು.

ಇದನ್ನೂ ಓದಿ: ಧೋನಿಯ 40 ನೇ ಹುಟ್ಟುಹಬ್ಬದಂದು ಅವರೊಂದಿನ ಭಾವನಾತ್ಮಕ ಸಂಬಂಧವನ್ನು ಟ್ವೀಟ್​ ಮೂಲಕ ಹಂಚಿಕೊಂಡ ಸುರೇಶ್ ರೈನಾ

Published On - 7:11 am, Thu, 8 July 21