Cabinet Reshuffle: ಸಂಪುಟ ಸೇರಿದ 43 ಹೊಸ ಸಚಿವರಿಗೆ ಶುಭ ಹಾರೈಸಿ, ಗ್ರೂಪ್​ ಫೋಟೋ ಶೇರ್​ ಮಾಡಿದ ಪ್ರಧಾನಿ ಮೋದಿ..

ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, ಸಂಪುಟವನ್ನು ಹೊಸದಾಗಿ ಸೇರಿದವರಿಗೆ ಶುಭ ಕೋರಿದ್ದಾರೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನೆಲ್ಲ ಒಡನಾಡಿಗಳಿಗೆ ಅಭಿನಂದನೆಗಳು ಎಂದಿದ್ದಾರೆ.

Cabinet Reshuffle: ಸಂಪುಟ ಸೇರಿದ 43 ಹೊಸ ಸಚಿವರಿಗೆ ಶುಭ ಹಾರೈಸಿ, ಗ್ರೂಪ್​ ಫೋಟೋ ಶೇರ್​ ಮಾಡಿದ ಪ್ರಧಾನಿ ಮೋದಿ..
ನೂತನವಾಗಿ ಸೇರ್ಪಡೆಯಾದ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on: Jul 07, 2021 | 9:49 PM

ದೆಹಲಿ: ಅಂತೂ ಬಹುದಿನಗಳಿಂದ ಬಾಕಿ ಉಳಿದಿದ್ದ ಕೇಂದ್ರ ಸಂಪುಟ ಮರು ರಚನೆ ಕಾರ್ಯ ಮುಕ್ತಾಯವಾಗಿದೆ. ಇಂದು 43 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಬಾರಿ ಕೇಂದ್ರ ಸಂಪುಟ ವಿಸ್ತರಣೆಗೂ ಮೊದಲು ಪ್ರಧಾನಿ ಮೋದಿ ಸಾಲುಸಾಲು ಸಭೆ ನಡೆಸಿದ್ದರು. ಪ್ರತಿ ಖಾತೆಯ ಸಚಿವರೊಟ್ಟಿಗೂ ಮಾತುಕತೆ ನಡೆಸಿದ್ದರು. ಅಂತೆಯೇ ಇಂದು ಹಲವು ಪ್ರಮುಖ ಸಚಿವರ ರಾಜೀನಾಮೆಯೂ ಆಗಿದೆ..ಹೊಸ ಮುಖಗಳು ಕ್ಯಾಬಿನೆಟ್​ ಸೇರಿವೆ. ಇಷ್ಟೆಲ್ಲ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಒಂದು ಗ್ರೂಪ್​ ಫೋಟೋ ಶೇರ್ ಮಾಡಿಕೊಂಡು, ಹೊಸಬರಿಗೆ ಶುಭ ಹಾರೈಸಿದ್ದಾರೆ. Govt 4 Growth (ಅಭಿವೃದ್ಧಿಗಾಗಿ ಸರ್ಕಾರ) ಎಂಬ ಹ್ಯಾಷ್​ಟ್ಯಾಗ್ ಕೊಟ್ಟಿದ್ದಾರೆ.

ಎಲ್ಲ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನನ್ನೆಲ್ಲ ಸಹೋದ್ಯೋಗಿ ಮಿತ್ರರಿಗೆ ಅಭಿನಂದನೆಗಳು. ಅವರ ಮಂತ್ರಿಮಂಡಲದ ಅವಧಿಗೆ ನನ್ನ ಶುಭ ಹಾರೈಕೆಗಳು. ನಾವೆಲ್ಲರೂ ಒಟ್ಟಾಗಿ ಈ ದೇಶದ ಜನರ ಆಕಾಂಕ್ಷೆಗಳನ್ನು ಪೂರೈಸಬೇಕು. ಸಮೃದ್ಧ, ಬಲಿಷ್ಠ ಭಾರತ ಕಟ್ಟಬೇಕು ಎಂದು ಹೇಳಿದ್ದಾರೆ.

ಹಾಗೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಟ್ವೀಟ್ ಮಾಡಿ, ಎಲ್ಲ ನೂತನ ಸಚಿವರಿಗೆ ಅಭಿನಂದನೆಗಳು. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ಕಟ್ಟೋಣ. ದೇಶದ ಅಭಿವೃದ್ಧಿಯೇ ಎಲ್ಲರ ಗುರಿಯಾಗಿರಲಿ ಎಂದಿದ್ದಾರೆ. ಹಾಗೇ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, ಸಂಪುಟವನ್ನು ಹೊಸದಾಗಿ ಸೇರಿದವರಿಗೆ ಶುಭ ಕೋರಿದ್ದಾರೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನೆಲ್ಲ ಒಡನಾಡಿಗಳಿಗೆ ಅಭಿನಂದನೆಗಳು. ಸರ್ಕಾರದ ಕಲ್ಯಾಣ ನೀತಿಗಳು ಎಲ್ಲರೂ ಸೇರಿ ಜನರಿಗೆ ತಲುಪಿಸೋಣ. ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸೋಣ ಎಂದಿದ್ದಾರೆ. ಇನ್ನು ಸಚಿವ ನಿತಿನ್ ಗಡ್ಕರಿ ಸೇರಿ ಅನೇಕ ಪ್ರಮುಖ ನಾಯಕರು ಟ್ವೀಟ್ ಮಾಡಿ ಹೊಸಬರಿಗೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ: Cabinet Reshuffle: ನರೇಂದ್ರ ಮೋದಿ ಸಚಿವ ಸಂಪುಟ ಸೇರಿದ ನೂತನ ಸಚಿವರ ಕಿರು ಪರಿಚಯ

PM Narendra Modi extends best wishes to 43 new inductees of his Cabinet

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ