ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕಾರು ಅಪಘಾತ

Mehbooba Mufti: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಕಾರು ಇಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್ ಪ್ರದೇಶದಲ್ಲಿ ಅಪಘಾತಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕಾರು ಅಪಘಾತ

Updated on: Jan 11, 2024 | 3:51 PM

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಅವರ ಕಾರು ಇಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್ ಪ್ರದೇಶದಲ್ಲಿ ಅಪಘಾತಗೊಂಡಿದೆ. ಅವರಿಗೆ ಯಾವುದೇ ತೊಂದರೆಯಾಗಿಲ್ಲ, ಆದರೆ ಅವರ ವಾಹನದ ಚಾಲಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕಾರಿನ ಚಾಲಕನ ಕಾಲಿಗೆ ಗಾಯಗಳಾಗಿವೆ. ಇತ್ತೀಚಿಗೆ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಸಂತ್ರಸ್ತರನ್ನು ಭೇಟಿ ಮಾಡಲು ಮಫ್ತಿ ಖಾನಬಾಲ್‌ಗೆ ತೆರಳುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿದೆ.

ಮೆಹಬೂಬಾ ಮುಫ್ತಿ ಅವರ ಮಗಳು ಇಲ್ತಿಜಾ ಮುಫ್ತಿ ಅವರು ಈ ಬಗ್ಗೆ ಎಕ್ಸ್​​ನಲ್ಲಿ ಟ್ವೀಟ್​​ ಮಾಡಿದ್ದಾರೆ. ಕಾರು ಇಂದು ಅನಂತನಾಗ್ ಮಾರ್ಗದಲ್ಲಿ ಭೀಕರ ಅಪಘಾತ ಹೊಂದಿದೆ. ದೇವರ ದಯೆಯಿಂದಾಗಿ ಆಕೆ ಮತ್ತು ಆಕೆಯ ಭದ್ರತಾ ಅಧಿಕಾರಿಗಳು ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ. ಕಾರಿನ ಮುಂಭಾಗ ಪೂರ್ತಿ ಹಾನಿಗೊಳಲಾಗಿದೆ ಎಂದು ಹೇಳಿದ್ದಾರೆ.

 

Published On - 3:40 pm, Thu, 11 January 24