ಎಲ್ಲರೂ ಚುನಾವಣೆ ಎದುರಿಸೋಣ: ಸುಪ್ರೀಂಕೋರ್ಟ್ ಆದೇಶದ ನಂತರ ಉದ್ಧವ್ ಠಾಕ್ರೆ

|

Updated on: May 12, 2023 | 6:19 PM

ದೇಶದಲ್ಲಿ 'ನಂಗಾ ನಾಚ್' ನಡೆಯುತ್ತಿದೆ. ನೀವು ಅದನ್ನು ನಿಲ್ಲಿಸಬೇಕು. ಮಹಾರಾಷ್ಟ್ರದ ಹೆಸರನ್ನು ಪ್ರಪಂಚದಾದ್ಯಂತ ಕೆಸರಿನಲ್ಲಿ ಎಳೆಯಲಾಗುತ್ತಿದೆ. ಇದು ಸಂಭವಿಸಬಾರದು ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ ಠಾಕ್ರೆ.

ಎಲ್ಲರೂ ಚುನಾವಣೆ ಎದುರಿಸೋಣ: ಸುಪ್ರೀಂಕೋರ್ಟ್ ಆದೇಶದ ನಂತರ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us on

ಮುಂಬೈ: ಶಿವಸೇನಾದ (Shiva sena) ಎರಡು ಬಣಗಳ ನಡುವಿನ ಜಟಾಪಟಿಯಲ್ಲಿ ಸುಪ್ರೀಂಕೋರ್ಟ್ (Supeme Court) ತೀರ್ಪು ನೀಡಿದ ಒಂದು ದಿನದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಶುಕ್ರವಾರ ತಮ್ಮ ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಮತ್ತು ಅವರ ಮಿತ್ರ ಪಕ್ಷ ಬಿಜೆಪಿಗೆ ಹೊಸ ಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದಾರೆ. ನಾವೆಲ್ಲರೂ ಹೊಸ ಚುನಾವಣೆಯನ್ನು ಎದುರಿಸೋಣ, ಜನರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿ, ನಾನು ರಾಜೀನಾಮೆ ನೀಡಿದಂತೆ ಮುಖ್ಯಮಂತ್ರಿ (ಏಕನಾಥ್ ಶಿಂಧೆ) ಕೂಡ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ವರ್ಷ ಬಂಡಾಯವೆದ್ದಿದ್ದ ಶಿವಸೇನಾ ಶಾಸಕರ ಅನರ್ಹತೆಗೆ ವಿಧಾನಸಭೆ ಸ್ಪೀಕರ್ ಕರೆ ನೀಡದಿದ್ದಲ್ಲಿ ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ.

ನಾವು ಈ ಹಿಂದೆ ಸುಪ್ರೀಂಕೋರ್ಟ್‌ಗೆ ಹೋದಂತೆ, ಸ್ಪೀಕರ್ ಕಾಲಮಿತಿಯೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ. ಸದ್ಯಕ್ಕೆ ಸ್ಪೀಕರ್ ವಿದೇಶದಲ್ಲಿದ್ದಾರೆ. ಅವರು ಹಿಂತಿರುಗಿದಾಗ, ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಠಾಕ್ರೆ ಹೇಳಿದರು.

ದೇಶದಲ್ಲಿ ‘ನಂಗಾ ನಾಚ್’ ನಡೆಯುತ್ತಿದೆ . ನೀವು ಅದನ್ನು ನಿಲ್ಲಿಸಬೇಕು. ಮಹಾರಾಷ್ಟ್ರದ ಹೆಸರನ್ನು ಪ್ರಪಂಚದಾದ್ಯಂತ ಕೆಸರಿನಲ್ಲಿ ಎಳೆಯಲಾಗುತ್ತಿದೆ. ಇದು ಸಂಭವಿಸಬಾರದು ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ ಠಾಕ್ರೆ.

ಆಗಿನ ರಾಜ್ಯಪಾಲರ ಕಾನೂನುಬಾಹಿರ ನಿರ್ಧಾರದಿಂದ ಲಾಭ ಪಡೆದರೂ ಶಿಂಧೆ ಅವರು ಅದೇ ಸ್ಥಾನ ಉಳಿಸಿಕೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಒಂದು ದಿನದ ನಂತರ ಠಾಕ್ರೆ ಮಾತನಾಡಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದಕ್ಕಾಗಿ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಾಧೀಶರ ದೊಡ್ಡ ಸಮಿತಿಯು ಅದರ ಮೇಲೆ ತೀರ್ಪು ನೀಡುವವರೆಗೆ ಆ ಅಧಿಕಾರ ಸ್ಪೀಕರ್‌ಗೆ ಇರುತ್ತದೆ.

ಇದನ್ನೂ ಓದಿ:  ಸಾಂವಿಧಾನಿಕ ಪೀಠದ ಆದೇಶವನ್ನು ಕೇಂದ್ರ ಸರ್ಕಾರ ಧಿಕ್ಕರಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್

ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ಅದು ತಿರಸ್ಕರಿಸಿತು. ಏಕೆಂದರೆ ಅಸೆಂಬ್ಲಿಯಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸುವ ಬದಲು ಠಾಕ್ರೆ ರಾಜೀನಾಮೆ ನೀಡಿದ್ದರು. ಆದಾಗ್ಯೂ, ಠಾಕ್ರೆ ಅವರು ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸುವಲ್ಲಿ ಅವರು  ತಪ್ಪು ಮಾಡಿದ್ದಾರೆ ಎಂದು ಶಿಂಧೆ ಅವರ ಬಣಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಆಗಿನ ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿಯನ್ನು ನ್ಯಾಯಾಲಯವು ಬಲವಾಗಿ ಖಂಡಿಸಿತು.

ಮಾಜಿ ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಕರೆ ನೀಡಿದ ಠಾಕ್ರೆ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಒಬ್ಬರ ವಿರುದ್ಧ ಕ್ರಮ ಕೈಗೊಂಡರೆ, ಇನ್ನೊಬ್ಬರು ಕಾನೂನುಬಾಹಿರವಾಗಿ ಏನನ್ನೂ ಮಾಡುವುದಿಲ್ಲ ಎಂದುಕ್ರೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ