ಪ್ರಕಾಶ್​ ಜಾವಡೇಕರ್​, ರವಿಶಂಕರ್​ ಪ್ರಸಾದ್​ಗೆ ಶೀಘ್ರದಲ್ಲೇ ಸಿಗಲಿದೆ ಹೊಸ ಹುದ್ದೆ; ಜೆ.ಪಿ.ನಡ್ಡಾರಿಂದ ಘೋಷಣೆ?

| Updated By: Lakshmi Hegde

Updated on: Jul 11, 2021 | 4:59 PM

ಜು.7ರಂದು ಒಟ್ಟು 43 ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮೊದಲಿದ್ದ 12 ಮಂದಿ ರಾಜೀನಾಮೆ ನೀಡಿದ್ದರು. ಅಲ್ಲೀಗ ಪ್ರಕಾಶ್​ ಜಾವಡೇಕರ್​ ಜಾಗಕ್ಕೆ ಅನುರಾಗ್ ಠಾಕೂರ್ ಬಂದಿದ್ದರೆ, ರವಿಶಂಕರ್​ ಪ್ರಸಾದ್​ ಬದಲಿಗೆ ಅಶ್ವಿನಿ ವೈಷ್ಣವ್​ ಬಂದಿದ್ದಾರೆ.

ಪ್ರಕಾಶ್​ ಜಾವಡೇಕರ್​, ರವಿಶಂಕರ್​ ಪ್ರಸಾದ್​ಗೆ ಶೀಘ್ರದಲ್ಲೇ ಸಿಗಲಿದೆ ಹೊಸ ಹುದ್ದೆ; ಜೆ.ಪಿ.ನಡ್ಡಾರಿಂದ ಘೋಷಣೆ?
ಪ್ರಕಾಶ್ ಜಾವಡೇಕರ್​ ಮತ್ತು ರವಿಶಂಕರ್ ಪ್ರಸಾದ್​
Follow us on

ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ರಾಜೀನಾಮೆ ನೀಡಿರುವ ರವಿಶಂಕರ್ ಪ್ರಸಾದ್​ ಮತ್ತು ಪ್ರಕಾಶ್​ ಜಾವಡೇಕರ್​ ಶೀಘ್ರದಲ್ಲೇ ಪಕ್ಷದೊಳಗಿನ ಮಹತ್ವದ ಹುದ್ದೆಗಳನ್ನು ಪಡೆಯಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. ಇದರಲ್ಲಿ ಪ್ರಕಾಶ್​ ಜಾವಡೇಕರ್​ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾಗಿದ್ದರು ಮತ್ತು ರವಿಶಂಕರ್​ ಪ್ರಸಾದ್ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರಾಗಿದ್ದರು. ಜು.7ರಂದು ನಡೆದ ಕ್ಯಾಬಿನೆಟ್​ ಮರುರಚನೆ ವೇಳೆ ಇವರಿಬ್ಬರೂ ಸೇರಿ ಒಟ್ಟು 12 ಮಂದಿ ರಾಜೀನಾಮೆ ನೀಡಿದ್ದರು. ಇಂಥ ದಿಗ್ಗಜ ಸಚಿವರುಗಳೇ ರಾಜೀನಾಮೆ ನೀಡಿದ್ದು ಅಚ್ಚರಿ ಹುಟ್ಟಿಸಿತ್ತು.

ಇದೀಗ ಬಿಜೆಪಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ, ರವಿಶಂಕರ್​ ಪ್ರಸಾದ್ ಹಾಗೂ ಪ್ರಕಾಶ್​ ಜಾವಡೇಕರ್ ಇಬ್ಬರೂ ಪಕ್ಷದಲ್ಲಿ ಮಹತ್ವದ ಸಾಂಸ್ಥಿಕ ಹುದ್ದೆಗಳನ್ನು ಪಡೆಯಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಥವಾ ಉಪಾಧ್ಯಕ್ಷ ಸ್ಥಾನಗಳು ಸಿಗಬಹುದು..ಅದರೊಂದಿಗೆ ಮುಂದಿನ ವರ್ಷ ಚುನಾವಣೆ ನಡೆಯುಲಿರುವ ರಾಜ್ಯಗಳ ಉಸ್ತುವಾರಿಯೂ ಇವರ ಹೆಗಲಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶೀಘ್ರವೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಜು.7ರಂದು ಒಟ್ಟು 43 ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮೊದಲಿದ್ದ 12 ಮಂದಿ ರಾಜೀನಾಮೆ ನೀಡಿದ್ದರು. ಅಲ್ಲೀಗ ಪ್ರಕಾಶ್​ ಜಾವಡೇಕರ್​ ಜಾಗಕ್ಕೆ ಅನುರಾಗ್ ಠಾಕೂರ್ ಬಂದಿದ್ದರೆ, ರವಿಶಂಕರ್​ ಪ್ರಸಾದ್​ ಬದಲಿಗೆ ಅಶ್ವಿನಿ ವೈಷ್ಣವ್​ ಬಂದಿದ್ದಾರೆ. ಇವರಿಬ್ಬರೂ ಪಕ್ಷದಲ್ಲಿ ಹಿರಿಯರಾಗಿದ್ದು, ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಇದನ್ನೂ ಓದಿ: ಯುರೋಪ್​ನಲ್ಲಿ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಆಯ್ಕೆ; ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರಲ್ಲಿದ್ದಾರೆ ಬಿಯರ್ ಉದ್ಯಮಿಗಳು, ವಿಜ್ಞಾನಿಗಳು

ಕೇಂದ್ರಮಂತ್ರಿಯಾಗುತ್ತಿದ್ದಂತೆ ಮಧ್ಯಪ್ರದೇಶಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ..!