ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ (Bharat Jodo Yatra) ಮುಂದಿನ ಚುನಾವಣೆಗೆ ಸಹಾಯ ಮಾಡುವ ಬದಲು ವಿವಾದಗಳ ವೇದಿಕೆಯಾಗಿ ಮಾರ್ಪಾಡಾಗುತ್ತಿದೆ. ಭಾರತ್ ಜೋಡೋ ಯಾತ್ರೆ ವೇಳೆ ಕೇಂದ್ರದ ಮಾಜಿ ಸಚಿವರೊಬ್ಬರು ರಾಹುಲ್ ಗಾಂಧಿ ಶೂ ಲೇಸ್ ಕಟ್ಟುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕುರಿತು ಬಿಜೆಪಿಯ ಅಮಿತ್ ಮಾಳವೀಯ ಟೀಕೆ ಮಾಡಿದ್ದು, ಕಾಂಗ್ರೆಸ್ಸಿಗೆ ತೀವ್ರ ಮುಜುಗರ ಉಂಟಾಗಿದೆ.
ಅಮಿತ್ ಮಾಳವೀಯ ಅವರು ಹಂಚಿಕೊಂಡ ವಿಡಿಯೋ ಒಂದರಲ್ಲಿ ಮಾಜಿ ಸಚಿವ ಜಿತೇಂದ್ರ ಸಿಂಗ್ ಅಹಿರ್ವಾರ್ ರಾಹುಲ್ ಗಾಂಧಿ ಎದುರು ಮಂಡಿಯೂರಿ ಕುಳಿತಿರುವುದನ್ನು ಕಾಣಬಹುದು.
ಇದಕ್ಕೆ ಪ್ರತ್ಯುತ್ತರ ನೀಡಿದ ಜಿತೇಂದ್ರ ಸಿಂಗ್ ಅವರು, ನಾನು ನನ್ನ ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದೆ ರಾಹುಲ್ ಗಾಂಧಿಯವರದ್ದಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಕೋವಿಡ್ ನಿಯಮ ಪಾಲಿಸಿ ಇಲ್ಲವೇ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರ ಪತ್ರ
ಬಿಜೆಪಿ ಮಾಡಿರುವ ಟ್ವೀಟ್ ಸಂಪೂರ್ಣ ಸುಳ್ಳು, ಪಾದಯಾತ್ರೆ ಸಮಯದಲ್ಲಿ ನನ್ನ ಶೂ ಲೇಸ್ ಕಳಚಿತ್ತು ಹಾಗಾಗಿ ನೀವು ಶೂ ಲೇಸ್ ಕಟ್ಟಿಕೊಳ್ಳಿ ಎಂದು ಸ್ವಲ್ಪ ಸಮಯ ರಾಹುಲ್ ಅಲ್ಲೇ ನಿಂತಿದ್ದರಷ್ಟೇ ಎಂದರು.
ಟ್ವೀಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿ ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.
Former union minister Bhanwar Jitendra Singh goes down on his knee to tie Rahul Gandhi’s shoe lace. The arrogant entitled brat instead of helping himself is seen patting his back…
इसी परिपाटी की बात कर रहे थे खड़गे जी? कांग्रेस में पिद्दियों की कमी नहीं है। pic.twitter.com/FtHCCwNTwu
— Amit Malviya (@amitmalviya) December 21, 2022
ಭಾರತ್ ಜೋಡೋ ಯಾತ್ರೆ ಬುಧವಾರ ರಾಜಸ್ಥಾನದಿಂದ ಹರಿಯಾಣಕ್ಕೆ ಪ್ರವೇಶ ಪಡೆದಿದೆ. ಈ ವೇಳೆ ಭನ್ವರ್ ಜಿತೇಂದ್ರ ಸಿಂಗ್ ಕೂಡ ರಾಹುಲ್ ಗಾಂಧಿ ಜೊತೆಗೆ ಪಕ್ಷದ ಇತರ ನಾಯಕರೊಂದಿಗೆ ಪಾದಯಾತ್ರೆ ಮಾಡುತ್ತಿದ್ದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅವರ ಮಾಜಿ ಉಪ ಸಚಿನ್ ಪೈಲಟ್ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ ಅವರು ಶ್ರೀ ಗಾಂಧಿಯವರೊಂದಿಗೆ ಬಿಜೆಪಿ ಆಡಳಿತವಿರುವ ಹರಿಯಾಣಕ್ಕೆ ಕಾಲಿಟ್ಟರು. ರಾಜ್ಯದ ಗಡಿಯುದ್ದಕ್ಕೂ ಯಾತ್ರೆಯನ್ನು ಹರಿಯಾಣದ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ರಣದೀಪ್ ಸಿಂಗ್ ಸುರ್ಜೆವಾಲಾ, ಕುಮಾರಿ ಸೆಲ್ಜಾ ಮತ್ತು ದೀಪೇಂದರ್ ಸಿಂಗ್ ಹೂಡಾ ಸ್ವಾಗತಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ