ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದ ಪರಮ್ ಬೀರ್ ಸಿಂಗ್; 6 ಗಂಟೆಗಳ ಕಾಲ ನಡೆದ ವಿಚಾರಣೆ

Param Bir Singh ಪ್ರಸ್ತುತ ಮಹಾರಾಷ್ಟ್ರದ ಹೋಂಗಾರ್ಡ್ಸ್‌ನ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಸಿಂಗ್, ಸಂಜೆ 6.15ರ ಸುಮಾರಿಗೆ ಅಧಿಕೃತ ವಾಹನದಲ್ಲಿ ಅಪರಾಧ ವಿಭಾಗದ ಘಟಕ-11ರಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.

ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದ ಪರಮ್ ಬೀರ್ ಸಿಂಗ್; 6 ಗಂಟೆಗಳ ಕಾಲ ನಡೆದ ವಿಚಾರಣೆ
ಪರಮ್​ ಬೀರ್ ಸಿಂಗ್​
Edited By:

Updated on: Nov 25, 2021 | 8:21 PM

ಮುಂಬೈ: ಸುಲಿಗೆ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್(Param Bir Singh) ಗುರುವಾರ ನಗರದ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದರು. ಅಲ್ಲಿ ಅವರನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಲಾಯಿತು. ಸಿಂಗ್ ಅವರು ಕ್ರೈಂ ಬ್ರಾಂಚ್(crime branch) ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ. “ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅವರು ತನಿಖೆಯಲ್ಲಿ ಸಹಕರಿಸುವುದನ್ನು ಮುಂದುವರಿಸುತ್ತಾರೆ” ಎಂದು ಅವರ ವಕೀಲರು ಹೇಳಿದರು. ಪ್ರಸ್ತುತ ಮಹಾರಾಷ್ಟ್ರದ ಹೋಂಗಾರ್ಡ್ಸ್‌ನ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಸಿಂಗ್, ಸಂಜೆ 6.15ರ ಸುಮಾರಿಗೆ ಅಧಿಕೃತ ವಾಹನದಲ್ಲಿ ಅಪರಾಧ ವಿಭಾಗದ ಘಟಕ-11ರಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.ನಗರ ನ್ಯಾಯಾಲಯದಿಂದ ಘೋಷಿತ ಅಪರಾಧಿ ಎಂದು ಘೋಷಿಸಲ್ಪಟ್ಟ ಐಪಿಎಸ್ ಅಧಿಕಾರಿ ವಿರುದ್ಧ ನಗರದ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುಲಿಗೆ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದರು.

ಸದ್ಯಕ್ಕೆ ಸಿಂಗ್ ಅವರನ್ನು ಮತ್ತೆ ಕರೆದಿಲ್ಲ ಆದರೆ ಅಗತ್ಯವಿದ್ದಾಗ ಕರೆಯಲಾಗುವುದು  ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬುಧವಾರ, ಸಿಂಗ್ ಚಂಡೀಗಢದಲ್ಲಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸುಲಿಗೆ ತನಿಖೆಗೆ ಶೀಘ್ರದಲ್ಲೇ ಸೇರಬಹುದು ಎಂದು ವರದಿಯಾಗಿದೆ.

ಸಿಂಗ್ ಅವರು ಮಹಾರಾಷ್ಟ್ರದಲ್ಲಿ ಸುಲಿಗೆ ಮತ್ತು ಭ್ರಷ್ಟಾಚಾರದ ಐದು ಪ್ರತ್ಯೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ  ಅವರ ಹೆಸರೂ ಇದೆ.

ತಾನು “ದೇಶದಲ್ಲಿಯೇ ಇದ್ದೇನೆ” ಎಂದು ಅವರು ಈ ಹಿಂದೆ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಮಹಾರಾಷ್ಟ್ರ ಪೊಲೀಸರನ್ನು ಹೊರತುಪಡಿಸಿ ಯಾವುದೇ ಸಂಸ್ಥೆಯಿಂದ ನಡೆಯುವ ತನಿಖೆಗೆ ಸಹಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಪರಮ್ ಬೀರ್ ಸಿಂಗ್​​ನ್ನು ಸೇವೆಯಿಂದ ಅಮಾನತು ಮಾಡಲು ನಿರ್ಧಾರ?

ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸೇವೆಯಿಂದ ಅಮಾನತು  ಮಾಡಲು ಮಹಾರಾಷ್ಟ್ರ ಸರ್ಕಾರದ ನಿರ್ಧಾರಿಸಿದ್ದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯಿಂದ ಅಂತಿಮ ತೀರ್ಮಾನ ಮಾತ್ರ ಬಾಕಿ ಎಂದು  ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್