ಪ್ರಧಾನಿ ಮೋದಿಯ ಸಲಹೆಗಾರರಾಗಿ ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ನೇಮಕ

ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ಹಿರಿಯ ಅಧಿಕಾರಿ ಹರಿ ರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.

ಪ್ರಧಾನಿ ಮೋದಿಯ ಸಲಹೆಗಾರರಾಗಿ ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ನೇಮಕ
ತರುಣ್ ಕಪೂರ್
Edited By:

Updated on: May 02, 2022 | 3:09 PM

ದೆಹಲಿ: ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ (Tarun Kapoor) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ಸೋಮವಾರ ಹೊರಡಿಸಿದ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಕಪೂರ್, ಹಿಮಾಚಲ ಪ್ರದೇಶ (Himachal Pradesh) ಕೇಡರ್‌ನ 1987-ಬ್ಯಾಚ್‌ನ ಐಎಎಸ್ ಅಧಿಕಾರಿ,2021 ನವೆಂಬರ್ 30 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕ್ಯಾಬಿನೆಟ್ ನೇಮಕಾತಿ ಸಮಿತಿಯು ಕಪೂರ್ ಅವರನ್ನು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ (PMO), ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಯಲ್ಲಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲು ಅನುಮೋದಿಸಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ. ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ಹಿರಿಯ ಅಧಿಕಾರಿ ಹರಿ ರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.

ಹರಿ ರಂಜನ್ ರಾವ್ ಅವರು ಮಧ್ಯಪ್ರದೇಶ ಕೇಡರ್‌ನ 1994-ಬ್ಯಾಚ್‌ನ ಎಲ್‌ಎಎಸ್ ಅಧಿಕಾರಿಯಾಗಿದ್ದಾರೆ ಮತ್ತು ಪ್ರಸ್ತುತ ದೂರಸಂಪರ್ಕ ಇಲಾಖೆಯಲ್ಲಿ ಯುನಿವರ್ಸಲ್ ಸರ್ವೀಸಸ್ ಆಬ್ಲಿಗೇಶನ್ ಫಂಡ್‌ನಲ್ಲಿ ನಿರ್ವಾಹಕರಾಗಿದ್ದಾರೆ. ಅದೇ ವೇಳೆ ರಾವ್ ಅವರ ಬ್ಯಾಚ್‌ಮೇಟ್ ಬಿಹಾರ ಕೇಡರ್‌ನ ಅತಿಶ್ ಚಂದ್ರ ಪ್ರಸ್ತುತ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಭಾರತೀಯ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD)ಆಗಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Mon, 2 May 22