ನಿಯಮಿತ ಆರೋಗ್ಯ ತಪಾಸಣೆಗೆಂದು ದೆಹಲಿಯ ಆಸ್ಪತ್ಪೆಯೊಂದಕ್ಕೆ ಭೇಟಿ ನೀಡಿದಾಗ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಖುದ್ದು ಮುಖರ್ಜಿಯವರೇ ಸೋಂಕಿನ ಬಗ್ಗೆ ಧೃಡೀಕರಿಸಿರುವರಲ್ಲದೆ ತಮ್ಮನ್ನು ಇತ್ತೀಚಿಗೆ ಭೇಟಿಯಾದವರೆಲ್ಲ ತಪ್ಪದೆ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
2012 ರಿಂದ 2017 ರವರೆಗೆ ಭಾರತದ ರಾಷ್ಟ್ರಪತಿಗಳಾಗುವ ಮುಂಚೆ ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ವಿವಿಧ ಖಾತೆಗಳ ಸಚಿವರಾಗಿದ್ದ ಮುಖರ್ಜಿಯವರು, ಸೋಮವಾರದಂದು ಟ್ವೀಟ್ ಮಾಡಿ ಸೋಂಕಿತರಾಗಿರುವ ಬಗ್ಗೆ ಹೇಳಿದ್ದಾರೆ.
“ಆಸ್ಪತ್ರೆಗೆ ಬೇರಾವುದೋ ಪರೀಕ್ಷಣೆಗೆಂದು ಇವತ್ತು ಹೋದಾಗ ನನಗೆ ಕೊವಿಡ್-19 ಸೋಂಕಿರುವುದು ಪತ್ತೆಯಾಗಿದೆ. ಕಳೆದ ವಾರ ನನ್ನನ್ನು ಭೇಟಿಯಾದವರೆಲ್ಲಾ ದಯವಿಟ್ಟು ಕುಟುಂಬದಿಂದ ದೂರವಿರಿ ಹಾಗೂ ಕೂಡಲೇ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ@CitiznMukherjee,” ಎಂದು ಮಾಜಿ ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.
ಮುಖರ್ಜಿ ಸೋಂಕಿತರಾಗಿರುವುದು ಗೊತ್ತಾದ ಕೂಡಲೇ ಹಲವಾರು ಗಣ್ಯರು ಟ್ವೀಟ್ ಮಾಡಿ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ. ಅವರಲ್ಲಿ ಮೊದಲಿಗರೆಂದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
“ಆರೋಗ್ಯದ ಮೇಲಿ ಗಮನವಿರಲಿ ಸರ್, ನಿಮ್ಮ ಶೀಘ್ರ ಚೇತರಿಕೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ@CitiznMukherjee.” @Arvind Kejriwal”.
ಕೇಂದ್ರ ಸಚಿವ ಪಿಯುಷ್ ಗೋಯೆಲ್ ಸಹ ಮಾಜಿ ರಾಷ್ಟ್ರಪತಿಗಳು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ.
“ಶ್ರೀ ಪ್ರಣಬ್ ಮುಖರ್ಜಿಯವರು ತ್ವರಿತವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತಿದ್ದೇನೆ. ವೈರಸ್
ಸೋಂಕಿನಿಂದ ಯಶಸ್ವೀಯಾಗಿ ಅವರು ಮುಕ್ತರಾಗುವ ಬಗ್ಗೆ ನನಗೆ ವಿಶ್ವಾಸವಿದೆ. ದೇವರು ಅವರಿಗೆ ಆರೋಗ್ಯ ಮತ್ತು ಶಕ್ತಿ ಒದಗಿಸಲಿ ಎಂದು ಹಾರೈಸುತ್ತೇನೆ@PiyushGoyal”
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಸಹ ಪ್ರಣಬ್ ಮುಖರ್ಜಿಯವರಿಗೆ ಶುಭ ಹಾರೈಸಿದ್ದಾರೆ.
“ಮಾಜಿ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ಕೊವಿಡ್-19 ಸೋಂಕಿನಿಂದ ಶೀಘ್ರ ಗುಣಮುಖರಾಗಿ ಉತ್ತಮ ಆರೋಗ್ಯ ವಾಪಸ್ಸು ಪಡೆಯಲಿ ಎಂದು ಹಾರೈಸುತ್ತೇನೆ@DKShivakumar”