ಅಕ್ರಮ ಮರಳುಗಾರಿಕೆ ಪ್ರಕರಣ: ಇಡಿಯಿಂದ ಪಂಜಾಬ್ ಮಾಜಿ ಸಿಎಂ ಚನ್ನಿ ವಿಚಾರಣೆ

ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಈ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಇದೇ ಪ್ರಕರಣದಲ್ಲಿ ಹಣ ವರ್ಗಾವಣೆ ಆರೋಪದಡಿಯಲ್ಲಿ ಇಡಿ ಬಂಧಿಸಿತ್ತು.

ಅಕ್ರಮ ಮರಳುಗಾರಿಕೆ ಪ್ರಕರಣ: ಇಡಿಯಿಂದ ಪಂಜಾಬ್ ಮಾಜಿ ಸಿಎಂ ಚನ್ನಿ ವಿಚಾರಣೆ
ಚರಣ್​ಜಿತ್ ಸಿಂಗ್ ಚನ್ನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 14, 2022 | 3:21 PM

2018 ರಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ (Illegal sand mining case) ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಜಾರಿ ನಿರ್ದೇಶನಾಲಯ (ED) ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಗುರುವಾರ ಬೆಳಗ್ಗೆ ಇಡಿ ಅಧಿಕಾರಿಗಳ ಮುಂದೆ ಚನ್ನಿ ಹಾಜರಾಗಿದ್ದು, ಮತ್ತೊಮ್ಮೆ ಅವರಿಗೆ ಸಮನ್ಸ್ ನೀಡಬಹುದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ . ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಈ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಇದೇ ಪ್ರಕರಣದಲ್ಲಿ ಹಣ ವರ್ಗಾವಣೆ ಆರೋಪದಡಿಯಲ್ಲಿ ಇಡಿ ಬಂಧಿಸಿತ್ತು. ಇಡಿ ಮುಂದೆ ಚನ್ನಿ ಹಾಜರಾದ ನಂತರ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು, “ನನ್ನ ಹೋರಾಟ ಪಂಜಾಬ್‌ಗಾಗಿಯೇ ಹೊರತು ಮರಳಿಗಾಗಿ ಅಲ್ಲ. ಭೂ, ಮರಳು ಮತ್ತು ಮದ್ಯದ ಮಾಫಿಯಾವನ್ನು ನಡೆಸಿದವರು ಖಜಾನೆಯನ್ನು ಲೂಟಿ ಮಾಡುವ ಮೂಲಕ ಸ್ವಾರ್ಥಿ ಹಿತಾಸಕ್ತಿಗಳಿಗಾಗಿ ಪಂಜಾಬ್‌ಗೆ ಅವಕಾಶ ಮಾಡಿಕೊಟ್ಟರು.ಈಗಿನ ಆರ್ಥಿಕ ಸನ್ನಿವೇಶದಲ್ಲಿ ಅದು ಪಂಜಾಬ್ ಅಥವಾ ಮಾಫಿಯಾ! ಹೋರಾಟ ಮುಂದುವರೆಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಮಾರ್ಚ್ 31 ರಂದು ಇಡಿ ತನ್ನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಇನ್ನೂ ಜೈಲಿನಲ್ಲಿರುವ ಹನಿ ಮಂಗಳವಾರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಹನಿಯಿಂದ ವಶಪಡಿಸಿಕೊಂಡ 10 ಕೋಟಿ ರೂಪಾಯಿ ಚನ್ನಿಗೆ ಸೇರಿರಬಹುದು ಎಂದು ಇಡಿ ಮೂಲಗಳು ಹೇಳಿವೆ. ನವನ್‌ಶಹರ್ ಜಿಲ್ಲೆಯ ರಾಹೋನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 18 ಮತ್ತು 19 ರಂದು ಇಡಿ ಲೂಧಿಯಾನ, ಮೊಹಾಲಿ, ಪಠಾಣ್‌ಕೋಟ್, ರೂಪ್ ನಗರ ಮತ್ತು ಫತೇಘರ್ ಸಾಹಿಬ್‌ನ 10 ಸ್ಥಳಗಳಲ್ಲಿ ಶೋಧ ನಡೆಸಿತು.

ಹನಿಯ ಪಾಲುದಾರ ಕುದರ್ಥದೀಪ್ ಸಿಂಗ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ನಂತರ ಪೊಲೀಸರು ಖುಲಾಸೆಗೊಳಿಸಿದ್ದರು. ಈ ದಾಳಿಗಳಲ್ಲಿ ಇಡಿ ಹನಿಗೆ ಸೇರಿದೆ ಎನ್ನಲಾದ ರೂ 10 ಕೋಟಿ ನಗದು, ಮರಳು ಗಣಿಗಾರಿಕೆಗೆ ಸಂಬಂಧಿಸಿದ ಹಲವು ದೋಷಾರೋಪ ದಾಖಲೆಗಳು, ಆಸ್ತಿ ವಹಿವಾಟಿನ ದಾಖಲೆಗಳು, ಮೊಬೈಲ್ ಫೋನ್‌ಗಳು, 21 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶ ಪಡಿಸಿಕೊಂಡಿದೆ. ಹನಿ ಮತ್ತು ಕು ಕುದರ್ಥದೀಪ್ ಸಿಂಗ್ ಪ್ರೊವೈಡರ್ಸ್ ಓವರ್‌ಸೀಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ.

ವಶಪಡಿಸಿಕೊಂಡ ಹಣವನ್ನು ಮರಳು ಗಣಿಗಾರಿಕೆ ಚಟುವಟಿಕೆಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ವರ್ಗಾವಣೆಯ ಮೂಲಕ ಗಳಿಸಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಹನಿ ವಿರುದ್ಧದ ಆರೋಪಪಟ್ಟಿಯಲ್ಲಿ ಇಡಿ ಹೇಳಿತ್ತು.  ಹನಿ ಅವರನ್ನು ಫೆಬ್ರವರಿ 3 ರಂದು ಇಡಿಯ ಜಲಂಧರ್ ಕಚೇರಿಗೆ ಕರೆಸಲಾಯಿತು. ಅಲ್ಲಿ ಅವರನ್ನು ತಡರಾತ್ರಿಯವರೆಗೆ ವ್ಯಾಪಕವಾಗಿ ಪ್ರಶ್ನಿಸಲಾಯಿತು. ನಂತರ ಜಲಂಧರ್‌ನಲ್ಲಿರುವ ಕಚೇರಿಯಲ್ಲಿ ರಾತ್ರಿ 11:55 ಕ್ಕೆ ಬಂಧಿಸಲಾಯಿತು.

ಮಾರ್ಚ್ 7, 2018 ರಂದು ಆಗಿನ ಸಿಎಂ ಅಮರಿಂದರ್ ಸಿಂಗ್ ಅವರು ಫಿಲ್ಲೌರ್ ಮತ್ತು ರಾಹೋನ್‌ನ ಸಟ್ಲೆಜ್ ದಂಡೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಎತ್ತಿ ತೋರಿಸಿದರು. ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರಗಳ ನಂತರ ರಾಹೋನ್ ಪೊಲೀಸರು ಎಫ್‌ಐಆರ್ ದಾಖಲಿಸಿದರು. ತಪಾಸಣೆ ನಂತರ ಆರು ಗಣಿಗಳಿಗೆ ಸಂಬಂಧಿಸಿದ 26 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕುದರ್ಥದೀಪ್ ಸಿಂಗ್ ಹೆಸರಿದ್ದರೂ ಅವರನ್ನು ಬಂಧಿಸಲಾಗಿಲ್ಲ. ಅವರು ಜಾಮೀನು ಪಡೆದ ನಂತರ ಮಾತ್ರ ಪೊಲೀಸರ ಮುಂದೆ ಹಾಜರಾಗಿದ್ದರು ಮತ್ತು ನಂತರದ ವಿಚಾರಣೆಯಲ್ಲಿ ‘ನಿರಪರಾಧಿ’ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧರಮ್ ಸಂಸದ್​​ನಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ವ್ಯಕ್ತಪಡಿಸಲಾಗಿಲ್ಲ: ಸುಪ್ರೀಂಕೋರ್ಟ್​ನಲ್ಲಿ ದೆಹಲಿ ಪೊಲೀಸ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್