Sharad Yadav Obituary: ಚಿಕ್ಕ ಹಳ್ಳಿಯಿಂದ ದೆಹಲಿ ವರೆಗೆ ಶರದ್ ಯಾದವ್ ರಾಜಕೀಯ ಹಾದಿ

| Updated By: ರಮೇಶ್ ಬಿ. ಜವಳಗೇರಾ

Updated on: Jan 13, 2023 | 12:25 AM

Sharad Yadav Obituary: ಚಿಕ್ಕ ಹಳ್ಳಿಯಲ್ಲಿ ರೈತ ಕುಟುಂಬದಿಂದ ಬಂದ ಶರದ್ ಯಾದವ್ ನಡೆದು ಬಂದ ರಾಜಕೀಯ ಹಾದಿ ಇಲ್ಲಿದೆ.

Sharad Yadav Obituary: ಚಿಕ್ಕ ಹಳ್ಳಿಯಿಂದ ದೆಹಲಿ ವರೆಗೆ ಶರದ್ ಯಾದವ್ ರಾಜಕೀಯ ಹಾದಿ
ಶರದ್ ಯಾದವ್‌
Follow us on

ದೆಹಲಿ: ಕೇಂದ್ರ ಮಾಜಿ ಸಚಿವ, ರಾಷ್ಟ್ರೀಯ ಜನತಾ ದಳ ವರಿಷ್ಠ ಶದರ್ ಯಾದವ್(Sharad Yadav )ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ಯಾದವ್ ಚಿಕಿತ್ಸೆ ಫಲಕಾರಿಯಾಗದೇ ಇಂದು(ಜ.12) ಕೊನೆಯುಸಿರೆಳೆದಿದ್ದಾರೆ. ಇನ್ನು ಇವರ ಶಿಕ್ಷಣ ಹಾಗೂ ನಡೆದು ಬಂದ ರಾಜಕೀಯ ಹಾದಿಯನ್ನು ನೋಡುವುದಾದರೆ, 1947ರ ಜುಲೈ 1ರಂದು ಮಧ್ಯಪ್ರದೇಶ ರಾಜ್ಯದ ಹೋಶಂಗಾಬಾದ್ ಜಿಲ್ಲೆಯ ಬಾಬಾಯಿ ಗ್ರಾಮದಲ್ಲಿ ಜನಿಸಿದ್ದರು. ನಂದ್ ಕಿಶೋರ್ ಯಾದವ್, ತಾಯಿ ಸುಮಿತ್ರಾ ಯಾದವ್ ದಂಪತಿಯ ಪುತ್ರ ಶರದ್ ಯಾದವ್,  1989ರ ಫೆಬ್ರವರಿ 15ರಂದು ಶರದ್ ಯಾದವ್ ಅವರು ರೇಖಾ ಯಾದವ್ ಅವರನ್ನು ವಿವಾಹವಾಗಿದ್ದು ಅವರಿಗೆ ಒಬ್ಬ ಮಗ (ಶಂತನು ಬುಂದೇಲ) ಮತ್ತು ಮಗಳು(ಸುಭಾಷಿಣಿ ರಾಜಾ ರಾವ್) ಇದ್ದಾರೆ. ಇನ್ನು ಲೋಕಸಭೆ ಸದಸ್ಯರಾಗಿ 7 ಸಲ ಹಾಗೂ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Sharad Yadav Passes Away ಮಾಜಿ ಕೇಂದ್ರ ಸಚಿವ ಶರದ್ ಯಾದವ್‌ ನಿಧನ

ಜಬಲ್ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಜಬಲ್ಪುರದ ರಾಬರ್ಟ್ಸನ್ ಮಾಡೆಲ್ ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದಿದ್ದರು. ಶಾಲೆಯಲ್ಲಿದ್ದಾಗಲೇ ರಾಜಕೀಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶರದ್ ಯಾದವ್ ಅವರು, ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರಿಂದ ಪ್ರಭಾವಿತರಾಗಿ್ದ್ದರು. ನಂತರ ಭಾರತೀಯ ಜನತಾ ದಳಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.

2003ರಿಂದ 2016ರವರೆಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶರದ್ ಯಾದವ್, ಮಧ್ಯಪ್ರದೇಶದ ಜಬಲ್ಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದರು.ಲೋಕಸಭೆ ಸದಸ್ಯರಾಗಿ 7 ಸಲ, ರಾಜ್ಯಸಭೆ ಸದಸ್ಯರಾಗಿ 4 ಸಲ ಆಯ್ಕೆಯಾಗಿದ್ದು, ವಿ.ಪಿ.ಸಿಂಗ್‌, ವಾಜಪೇಯಿರವರ ಸರ್ಕಾರದಲ್ಲಿ ಕೇಂದ್ರದ ಜವಳಿ ಮತ್ತು ಆಹಾರ ಸಂಸ್ಕರಣಾ, ಕಾರ್ಮಿಕ ಇಲಾಖೆ, ನಾಗರಿಕ ವಿಮಾನಯಾನ, ಆಹಾರ ಸಚಿವರಾಗಿದ್ದರು.

ಇನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿತೀಶ್ ಕುಮಾರ್ ಸಹಕಾರದಿಂದ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ನಿತೀಶ್‌ ಕುಮಾರ್‌ ಅವರ ಜೊತೆಗಿನ ಸಂಬಂಧ ಹಾಳಾಗಿದ್ದರಿಂದ ಅವರು 2018ರಲ್ಲಿ ತಮ್ಮದೇ ಆದ ಲೋಕತಾಂತ್ರಿಕ್‌ ಜನತಾ ದಳ ಸ್ಥಾಪಿಸಿದ್ದರು. ಬಳಿಕ ಮಾರ್ಚ್ 2022 ರಲ್ಲಿ ಎಲ್‌ಜೆಡಿಯನ್ನು ಆರ್‌ಜೆಡಿ ಜೊತೆ ವಿಲೀನಗೊಳಿಸಿದ್ದರು. ಈ ಮೂಲಕ ಮೂರು ದಶಕಗಳ ಬಳಿಕ ಲಾಲು ಪ್ರಸಾದ್ ಮತ್ತು ಶರದ್ ಯಾದವ್ ಒಂದಾಗಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ