Sharad Yadav Passes Away ಮಾಜಿ ಕೇಂದ್ರ ಸಚಿವ ಶರದ್ ಯಾದವ್‌ ನಿಧನ

| Updated By: ರಮೇಶ್ ಬಿ. ಜವಳಗೇರಾ

Updated on: Jan 12, 2023 | 11:37 PM

Sharad Yadav Passes Away ಕೇಂದ್ರ ಮಾಜಿ ಸಚಿವ ಶರದ್ ಯಾದವ್ (75) ನಿಧನರಾಗಿದ್ದಾರೆ.

Sharad Yadav Passes Away ಮಾಜಿ ಕೇಂದ್ರ ಸಚಿವ ಶರದ್ ಯಾದವ್‌ ನಿಧನ
ಶರದ್ ಯಾದವ್
Follow us on

ಹಿರಿಯ ಸಮಾಜವಾದಿ ನಾಯಕ,  ಮಾಜಿ ಕೇಂದ್ರ ಸಚಿವ ಶರದ್ ಯಾದವ್‌ (75)(Sharad Yadav) ನಿಧನರಾಗಿದ್ದಾರೆ. ಶರದ್ ಯಾದವ್‌ ನಿಧನದ ಬಗ್ಗೆ ಪುತ್ರಿ ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಶರದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜನವರಿ 12)ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

 

ಎಲ್ಲಾ ಪ್ರಯತ್ನದ ಹೊರತಾಗಿಯೂ ಯಾದವ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಇಂದು(ಜ.12) ರಾತ್ರಿ 10:19ಕ್ಕೆ ಸಾವನ್ನಪ್ಪಿದ್ದಾರೆ ಎಂದು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆ ತಿಳಿಸಿದೆ. 1947ರ ಜುಲೈ 1ರಂದು ಜನಿಸಿದ್ದ ಶರದ್ ಯಾದವ್‌, ಬಿಹಾರ ಸಿಎಂ ನಿತೀಶ್‌ ಕುಮಾರ್‌ಗೆ ಅತ್ಯಂತ ಆಪ್ತರಾಗಿದ್ದರು.

2003ರಿಂದ 2016ರವರೆಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮಧ್ಯಪ್ರದೇಶದ ಜಬಲ್ಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದ ಶರದ್ ಯಾದವ್‌, ಲೋಕಸಭೆ ಸದಸ್ಯರಾಗಿ 7 ಸಲ, ರಾಜ್ಯಸಭೆ ಸದಸ್ಯರಾಗಿ 4 ಸಲ ಆಯ್ಕೆಯಾಗಿದ್ದರು.

ವಿ.ಪಿ.ಸಿಂಗ್‌, ವಾಜಪೇಯಿರವರ ಸರ್ಕಾರದಲ್ಲಿ ಕೇಂದ್ರದ ಜವಳಿ ಮತ್ತು ಆಹಾರ ಸಂಸ್ಕರಣಾ, ಕಾರ್ಮಿಕ ಇಲಾಖೆ, ನಾಗರಿಕ ವಿಮಾನಯಾನ, ಆಹಾರ ಸಚಿವರಾಗಿದ್ದರು.

1997ರಲ್ಲಿ ಲಾಲು ಪ್ರಸಾದ್ ಯಾದವ್ ಜನತಾ ದಳದಿಂದ ಬೇರ್ಪಟ್ಟು ತಮ್ಮದೇ ಆದ ರಾಷ್ಟ್ರೀಯ ಜನತಾ ದಳವನ್ನು ಸ್ಥಾಪಿಸಿದ್ದರು. ಅದಾದ ನಂತರ ನಿತೀಶ್ ಕುಮಾರ್ ಜೊತೆಗೆ ಶರದ್ ಯಾದವ್ ಸುದೀರ್ಘ ರಾಜಕೀಯ ಪಯಣ ಮಾಡಿದ್ದರು. ಇಬ್ಬರ ನಡುವಿನ ಬಿರುಕಿನ ನಂತರ, ಶರದ್ ಯಾದವ್ ಅವರು ಲೋಕ ತಾಂತ್ರಿಕ ಜನತಾ ದಳ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಆ ಪಕ್ಷವನ್ನು ಲಾಲು ಪ್ರಸಾದ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು. ಇದರೊಂದಿಗೆ 1997ರಲ್ಲಿ ಬೇರ್ಪಟ್ಟಿದ್ದ ಈ ನಾಯಕರು 25 ವರ್ಷದ ನಂತರ ಒಂದಾಗಿದ್ದರು.

Published On - 11:15 pm, Thu, 12 January 23