ನಾನು ಪಾಕ್ ಪತ್ರಕರ್ತರನ್ನು ಭೇಟಿಯಾಗಿಲ್ಲ, ಈ ಆರೋಪಗಳು ಸುಳ್ಳು: ಹಮೀದ್ ಅನ್ಸಾರಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 7:30 PM

ಕೆಲವು ಮಾಧ್ಯಮಗಳು ಮತ್ತು ಬಿಜೆಪಿಯ ವಕ್ತಾರರು ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳಿನ ಕಂತೆ ಎಂದು ಅನ್ಸಾರಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಇರಾನ್ ರಾಯಭಾರಿ ಆಗಿದ್ದಾಗ...

ನಾನು ಪಾಕ್ ಪತ್ರಕರ್ತರನ್ನು ಭೇಟಿಯಾಗಿಲ್ಲ, ಈ ಆರೋಪಗಳು ಸುಳ್ಳು: ಹಮೀದ್ ಅನ್ಸಾರಿ
ಹಮೀದ್ ಅನ್ಸಾರಿ
Follow us on

ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (Hamid Ansari) ತಮ್ಮ ಮೇಲಿನ ಆರೋಪಗಳಿಗೆ ಬುಧವಾರ ಪ್ರತಿಕ್ರಿಯಿಸಿದ್ದಾರೆ. ಕೆಲವು ಮಾಧ್ಯಮಗಳು ಮತ್ತು ಬಿಜೆಪಿಯ(BJP) ವಕ್ತಾರರು ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳಿನ ಕಂತೆ ಎಂದು ಅನ್ಸಾರಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಇರಾನ್ ರಾಯಭಾರಿ ಆಗಿದ್ದಾಗ ತಾನು ಭಾರತಕ್ಕೆ ಬಂದು ಗೂಢಾಚಾರಿಕೆ ನಡೆಸಿದ್ದೆ ಎಂದು ಹೇಳಿರುವ ಪಾಕ್ ಪತ್ರಕರ್ತನನ್ನು ನಾನು ಭೇಟಿಯಾಗಿಲ್ಲ ಎಂದು ಅನ್ಸಾರಿ ಹೇಳಿದ್ದಾರೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನನ್ನ ಭೇಟಿಗಳ ಬಗ್ಗೆ ಸಭೆಗಳ ಬಗ್ಗೆ ತಿಳಿದಿರುತ್ತದೆ.ಹಾಗಾಗಿ ಈ ಆರೋಪಗಳೆಲ್ಲವೂ ಸುಳ್ಳು ಎಂಬುದು ಗೊತ್ತಾಗುತ್ತದೆ. ಪಾಕಿಸ್ತಾನದ ಪತ್ರಕರ್ತ ಭಾರತಕ್ಕೆ ಬಂದಿದ್ದಾಗ ಮಾಡಿದ್ದರೆನ್ನಲಾದ  ಗೂಢಚರ್ಯೆ ಬಗ್ಗೆ ಮಾಧ್ಯಮಗಳ ವರದಿ, ಆಗ ಉಪರಾಷ್ಟ್ರಪತಿಯಾಗಿದ್ದ ಅನ್ಸಾರಿಯವರ ಆಹ್ವಾನ, ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳ ಹಂಚಿಕೆ, ಭಯೋತ್ಪಾದನೆ ನಿಗ್ರಹ ನೀತಿ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಮಂಗಳವಾರ ಬಿಜೆಪಿ ಒತ್ತಾಯಿಸಿತ್ತು.

ಭಯೋತ್ಪಾದನೆ ಬಗ್ಗೆ ದೆಹಲಿಯಲ್ಲಿ ನಡೆದ ಸಭೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಆಹ್ವಾನಿಸಲಾಗಿತ್ತು ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅನ್ಸಾರಿ, ಉಪ ರಾಷ್ಟ್ರಪತಿ ವಿದೇಶಿ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸುವುದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕವೇ ಆಗಿದೆ. ಸಂಘಟಕರು ಈ ಪಟ್ಟಿಯನ್ನು ಪಡೆಯುವುದು ಸಾಮಾನ್ಯ ಸಂಗತಿ. ನಾನು ಅವರನ್ನು ಯಾವತ್ತೂ ಆಹ್ವಾನಿಸಲಿಲ್ಲ ಅಥವಾ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.

ಇರಾನ್ ಗೆ ರಾಯಭಾರಿಯಾಗಿದ್ದಾಗ ನನ್ನ ಎಲ್ಲ ಕೆಲಸಗಳ ಆಗುಹೋಗುಗಳು ಸರ್ಕಾರಕ್ಕೆ ಗೊತ್ತಿರುತ್ತದೆ ಎಂದು ಅನ್ಸಾರಿ ಹೇಳಿದ್ದಾರೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಪತ್ರಿಕಾಗೋಷ್ಠಿ ನಡೆಸಿ ಯುಪಿಎ ಸರ್ಕಾರದ ಅವಧಿಯಲ್ಲಿ ಮಿರ್ಜಾ ಐದು ಬಾರಿ ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಅವರು ಸೂಕ್ಷ್ಮ ವಿಚಾರಗಳನ್ನು ಭಾರತದಿಂದ ಸಂಗ್ರಹಿಸಿ ಅದನ್ನು ಪಾಕಿಸ್ತಾನದ ಐಎಸ್ಐ ನೀಡಿದ್ದಾರೆ ಎಂದು ಹೇಳುವ ವಾದ ಬಗ್ಗೆ ಅನ್ಸಾರಿ ಮತ್ತು ಕಾಂಗ್ರೆಸ್ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದರು. ತನ್ನನ್ನು ಅನ್ಸಾರಿ ಅವರು ಭಾರತಕ್ಕೆ ಆಹ್ವಾನಿಸಿದ್ದರು. ನಾನು ಅವರನ್ನು ಭೇಟಿಯಾಗಿದ್ದೆ ಎಂದು ಮಿರ್ಜಾ ಹೇಳಿದ್ದರು.

Published On - 6:58 pm, Wed, 13 July 22