ದೆಹಲಿಯ ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ; ಒಂದೇ ಕುಟುಂಬದ ನಾಲ್ವರು ದುರ್ಮರಣ

ಇಂದು ಮುಂಜಾನೆ ಸುಮಾರು 4.7ಗಂಟೆ ಹೊತ್ತಿಗೆ ಅಗ್ನಿಶಾಮಕದಳದವರಿಗೆ ಕರೆ ಹೋಗಿದೆ. ಅವರು ಬಂದು ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 

ದೆಹಲಿಯ ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ; ಒಂದೇ ಕುಟುಂಬದ ನಾಲ್ವರು ದುರ್ಮರಣ
ಬೆಂಕಿ ಬಿದ್ದ ಕಟ್ಟಡದ ಬಳಿ ನೆರೆದಿರುವ ಜನರು
Edited By:

Updated on: Oct 26, 2021 | 9:37 AM

ದೆಹಲಿಯ ಹಳೇ ಸೀಮಾಪುರಿ ಏರಿಯಾದಲ್ಲಿರುವ ಬಹುಅಂತಸ್ತಿನ ಕಟ್ಟಡವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರೆಲ್ಲ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ.  ಹಳೇ ಸೀಮಾಪುರಿ ಏರಿಯಾದಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಕೊನೇ ಅಂತಸ್ತು ಅಂದರೆ ಮೂರನೇ ಅಂತಸ್ತಿನಲ್ಲಿ ಇಂದು ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು. 

ಮೃತರನ್ನು ಹೌರಿ ಲಾಲ್​, ರೀನಾ, ಅಶು ಮತ್ತು ರಾಧಿಕಾರ ಎಂದು ಗುರುತಿಸಲಾಗಿದೆ. ಇದರಲ್ಲಿ ಹೌರಿ ಲಾಲ್​ 59 ವರ್ಷದವರಾಗಿದ್ದು, ಶಾಸ್ತ್ರಿ ಭವನ್​​ನಲ್ಲಿ ಫ್ಯೂನ್​ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ರೀನಾ ಕಸಗುಡಿಸುವ ಕೆಲಸದವರಾಗಿದ್ದರು. ಉಳಿದವರಿಬ್ಬರು ಅವರ ಮಕ್ಕಳಾಗಿದ್ದಾರೆ. ಇಂದು ಮುಂಜಾನೆ ಸುಮಾರು 4.7ಗಂಟೆ ಹೊತ್ತಿಗೆ ಅಗ್ನಿಶಾಮಕದಳದವರಿಗೆ ಕರೆ ಹೋಗಿದೆ. ಅವರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ಕರೇ ರಸ್ತೆಯಲ್ಲಿರುವ ಲೋವರ್​ ಪರೇಲ್​​ ಏರಿಯಾದಲ್ಲಿರುವ ಅವಿಜ್ಞಾ ಪಾರ್ಕ್ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿತ್ತು. ಅದರ 19ನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿತ್ತು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ಹಾರಿದ ವ್ಯಕ್ತಿ ಮೃತಪಟ್ಟಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಬೆಂಗಳೂರು ಮೂಲದ ಉಗ್ರ ಮೊಹಮ್ಮದ್ ತಾಕೀರ್ ಬಂಧನ, ಉಗ್ರನ ನೆಟ್​ವರ್ಕ್​​ ತಿಳಿದ್ರೆ ಬೆಚ್ಚಿ ಬೀಳ್ತಿರಾ

ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ’, ಅಂತ್ಯಸಂಸ್ಕಾರಕ್ಕೆ ಸಿಎಂ ಬೊಮ್ಮಾಯಿ ಬರಬೇಕು; ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Published On - 9:29 am, Tue, 26 October 21