Lockdown ಇದ್ದರೂ ಮತಿಗೇಡಿ ಉಗ್ರರ ಅಟ್ಟಹಾಸ, ನಾಲ್ವರು ಯೋಧರು ಹುತಾತ್ಮ

|

Updated on: May 03, 2020 | 10:15 AM

ಶ್ರೀನಗರ: ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಕರ್ನಲ್, ಮೇಜರ್ ಮತ್ತು ಭಾರತೀಯ ಸೇನೆಯ ಇಬ್ಬರು ಜವಾನರು ಮತ್ತು ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ. ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದ ಚಂಜ್‌ಮುಲ್ಲಾ ಪ್ರದೇಶದಲ್ಲಿ ನಿನ್ನೆ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಮನೆಯ ನಾಗರಿಕರನ್ನು ಒತ್ತೆಯಾಳಾಗಿ ಮಾಡಿಕೊಳ್ಳಲು ಭಯೋತ್ಪಾದಕರು ಕರೆದೊಯ್ಯುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸೇನೆ ಮತ್ತು ಜಮ್ಮು […]

Lockdown ಇದ್ದರೂ ಮತಿಗೇಡಿ ಉಗ್ರರ ಅಟ್ಟಹಾಸ, ನಾಲ್ವರು ಯೋಧರು ಹುತಾತ್ಮ
Follow us on

ಶ್ರೀನಗರ: ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಕರ್ನಲ್, ಮೇಜರ್ ಮತ್ತು ಭಾರತೀಯ ಸೇನೆಯ ಇಬ್ಬರು ಜವಾನರು ಮತ್ತು ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ.

ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದ ಚಂಜ್‌ಮುಲ್ಲಾ ಪ್ರದೇಶದಲ್ಲಿ ನಿನ್ನೆ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಮನೆಯ ನಾಗರಿಕರನ್ನು ಒತ್ತೆಯಾಳಾಗಿ ಮಾಡಿಕೊಳ್ಳಲು ಭಯೋತ್ಪಾದಕರು ಕರೆದೊಯ್ಯುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಐವರು ಸೈನ್ಯ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ನಾಗರಿಕರನ್ನು ಸ್ಥಳಾಂತರಿಸಲು ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಪ್ರವೇಶಿಸಿತು ನಾಗರಿಕರನ್ನು ಸೇಫ್ ಮಾಡಿದ್ದಾರೆ ಎಂದು ವರದಿಯಾಗಿದೆ.