ರೈಲಿನಲ್ಲಿ ನಮಾಜ್ ಮಾಡಿದ ನಾಲ್ವರು ಮುಸ್ಲಿಮರು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡಬಹುದೇ?

ನಾಲ್ವರು ಮುಸ್ಲಿಂ ಸಮುದಾಯದ ವ್ಯಕ್ತಿಗಳು ರೈಲಿನಲ್ಲಿ ನಮಾಜ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ (Uttar Pradesh) ಮಾಜಿ ಶಾಸಕ ದೀಪ್ಲಾಲ್ ಭಾರ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ರೈಲಿನಲ್ಲಿ ನಮಾಜ್ ಮಾಡಿದ ನಾಲ್ವರು ಮುಸ್ಲಿಮರು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡಬಹುದೇ?
Four Muslims who offered Namaz in the train
Updated By: ಅಕ್ಷಯ್​ ಪಲ್ಲಮಜಲು​​

Updated on: Oct 22, 2022 | 4:30 PM

ಉತ್ತರ ಪ್ರದೇಶ: ನಾಲ್ವರು ಮುಸ್ಲಿಂ ಸಮುದಾಯದ ವ್ಯಕ್ತಿಗಳು ರೈಲಿನಲ್ಲಿ ನಮಾಜ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ (Uttar Pradesh) ಮಾಜಿ ಶಾಸಕ ದೀಪ್ಲಾಲ್ ಭಾರ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಖಡ್ಡಾ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ನಮಾಜ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಕ್ಟೋಬರ್ 20ರಂದು ಈ ಘಟನೆ ನಡೆದಿದೆ, ದೀಪ್ಲಾಲ್ ಭಾರ್ತಿ ಸತ್ಯಾಗ್ರಹ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಾಲ್ವರು ನಮಾಜ್ ಮಾಡುವುದನ್ನು ಕಂಡಿದ್ದರೆ, ಇದರಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಈ ವ್ಯಕ್ತಿಗಳು ಸ್ಲೀಪರ್ ಕೋಚ್‌ನಲ್ಲಿ ನಮಾಜ್ ಮಾಡಿದ್ದಾರೆ. ಇತರ ಪ್ರಯಾಣಿಕರು ರೈಲಿನಲ್ಲಿ ಒಳಗೆ ಬರಲು ಮತ್ತು ಹೊರಗೆ ಹೋಗಲು ಸಾಧ್ಯವಾಗದೇ ತುಂಬಾ ತೊಂದರೆಯನ್ನು ಅನುಭವಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಮಾಜ್ ಮಾಡಬಹುದು? ಇದು ತಪ್ಪು ಎಂದು ದೀಪ್ಲಾಲ್ ಭಾರ್ತಿ ಹೇಳಿದ್ದಾರೆ.

ಇದನ್ನು ಓದಿ: Uttar Pradesh: ಅಪಘಾತದಲ್ಲಿ ಗಾಯಗೊಂಡ ಮಗುವಿನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಧಿಕಾರಿ, ವಿಡಿಯೋ ವೈರಲ್

ಬೋಗಿಯ ಎರಡು ಬದಿಗಳಲ್ಲಿ ಇಬ್ಬರು ಜನರು ಭೋಗಿಯ ಒಳಗೆ ಪ್ರವೇಶಿಸಲು ಮತ್ತು ಹೊರಹೋಗದಂತೆ ತಡೆಯುತ್ತಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ದೀಪಲಾಲ್ ಭಾರ್ತಿ ಅವರು ಭಾರತೀಯ ರೈಲ್ವೇ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

Published On - 4:15 pm, Sat, 22 October 22