ಮಿನಿ ಟ್ರಕ್ ಅಪಘಾತವಾಗಿ (Mini Truck Accident) ನಾಲ್ವರು ಮೃತಪಟ್ಟು, ಇನ್ನೂ ಹಲವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ನಡೆದಿದೆ. ಮಿನಿ ಟ್ರಕ್ನಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಈ ವಾಹನ ಪಲ್ಟಿಯಾಗಿ ದುರ್ಘಟನೆ ನಡೆದಿದೆ. ಈ ವಾಹನದಲ್ಲಿ ಸುಮಾರು 30 ಜನರಿದ್ದರು ಎನ್ನಲಾಗಿದ್ದು, ಮೃತರೆಲ್ಲ ಮಹಾರಾಷ್ಟ್ರದ ಉತ್ತರ ಜಿಲ್ಲೆಯಾದ ಜಲಗಾಂವ್ನ ಚಾಲಿಸ್ಗಾಂವ್ ತಾಲೂಕಿನ ಮುಂಡ್ಖೇಡಾದ ನಿವಾಸಿಗಳೆಂದು ಗೊತ್ತಾಗಿದೆ. ಮೃತಪಟ್ಟವರಲ್ಲಿ ಒಬ್ಬ ವ್ಯಕ್ತಿಯ ಗುರುತು ಮಾತ್ರ ಪತ್ತೆಯಾಗಿದ್ದು, ಇನ್ನು ಮೂವರ ಹೆಸರು, ಪರಿಚಯ ಗೊತ್ತಾಗಿಲ್ಲ.
ಇವರೆಲ್ಲ ಮಿನಿ ಟ್ರಕ್ನಲ್ಲಿ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ವಾಪಸ್ ಬರೋವಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ವಾಹನ ಪಲ್ಟಿಯಾಗಿದೆ. ಗಾಯಗೊಂಡವರನ್ನೆಲ್ಲ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಅದರಲ್ಲಿ ಇನ್ನೂ ನಾಲ್ಕು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Russia Ukraine War: ನಾನು ನವೀನ್ ಒಳ್ಳೆಯ ಸ್ನೇಹಿತರಾಗಿದ್ದೇವು; ವಿದ್ಯಾರ್ಥಿನಿ ವರ್ಷಿತಾ ಹೇಳಿಕೆ
Published On - 9:53 am, Mon, 7 March 22