ರಾಜಸ್ಥಾನದ ಅಜ್ಮೀರ್(Ajmer) ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಗುರುವಾರ ರಾತ್ರಿ ಗ್ಯಾಸ್ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯ ನಂತರ, ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ನಾಲ್ವರು ಸಜೀವ ದಹನವಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್‌ನಲ್ಲಿದ್ದ ಪೆಟ್ರೋಲಿಯಂ ಉತ್ಪನ್ನ ಹೊರೆಚೆಲ್ಲಿದ್ದು ಆ ಮೂಲಕ ಸಾಗುತ್ತಿದ್ದ ಇನ್ನೆರಡು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ.
ಅಕ್ಕಪಕ್ಕದ ಕೆಲವು ಮನೆಗಳು ಮತ್ತು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಟ್ಯಾಂಕರ್ ಮತ್ತು ಟ್ರೇಲರ್‌ಗೆ ಬೆಂಕಿ ಹೊತ್ತಿಕೊಂಡ ನಂತರ ರಸ್ತೆಯನ್ನು ನಿರ್ಬಂಧಿಸಲಾಗಿದೆ.
अजमेर ब्यावर रोड पर गुरुवार की देर रात हादसा हुआ, इसमें पेट्रोलियम गैस ले जा रहे दो टैंकरों में आमने सामने की टक्कर हो गई, इस हादसे में एक टैंकर में बैठे 3 लोगों की झुलसकर मौत हो गई, जबकि दूसरे टैंकर में बैठे 3 लोग गंभीर रूप से ज़ख्मी हुए हैं।#Rajasthan #Ajmer #accident pic.twitter.com/je2vm21QQe
— TV9 Rajasthan (@TV9Rajasthan) February 17, 2023
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ.
ಉಪವಿಭಾಗಾಧಿಕಾರಿ ಮೃದುಲ್ ಸಿಂಗ್, ಸದರ್ ಸರ್ಕಲ್ ಇನ್ಸ್‌ಪೆಕ್ಟರ್ ಚೆನಾರಾಮ್ ಬೇಡಾ, ಸರ್ಕಲ್ ಆಫೀಸರ್ ಮಸೂದ ಈಶ್ವರ್ ಸಿಂಗ್ ಯಾದವ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮುಂಬೈ: ಮಹಿಳೆಯ ಫೋನ್ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಅಗ್ನಿ ಅವಘಡದ ನಂತರ ಅಜ್ಮೀರ್ ಜಿಲ್ಲಾಧಿಕಾರಿ ಅಂಶದೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚುನಾರಾಮ್ ಜಾಟ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ