AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: ಮಹಿಳೆಯ ಫೋನ್ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್, ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಅಪರ್ಣಾ ವಿನಯನ್ ಎಂಬ ಮಹಿಳೆ ತನ್ನ ಮನೆಗೆ ಪ್ರವೇಶಿಸುವ ಮೊದಲು ತನ್ನ ಫೋನ್ ಅನ್ನು ಶೂ ರ್ಯಾಕ್‌ನಲ್ಲಿ ಇರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.ಸ್ವಲ್ಪ ಸಮಯದ ನಂತರ, ಡೆಲಿವರಿ ಬಾಯ್ ಕಾರಿಡಾರ್‌ಗೆ ಪ್ರವೇಶಿಸಿದ್ದಾನೆ

ಮುಂಬೈ: ಮಹಿಳೆಯ ಫೋನ್ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಫೋನ್ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Feb 17, 2023 | 1:55 PM

Share

ಫೆಬ್ರವರಿ 14 ರಂದು ಮಲಾಡ್‌ನ(Malad )ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ಸ್ವಿಗ್ಗಿ ಪುಡ್ ಡೆಲಿವರಿ ಮಾಡುವ ವ್ಯಕ್ತಿಯೊಬ್ಬ (Swiggy delivery boy) ಮಹಿಳೆಯ ಫೋನ್ ಕದ್ದಿದ್ದಾನೆ. ಡೆಲಿವರಿ ಬಾಯ್‌ಗೆ ಹೆಸರು ಜಯರಾಮ್ ಯೆಗ್ದೆ. ಮಲಾಡ್ ವೆಸ್ಟ್‌ನ ಅಶೋಕ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಸಂಜೆ 6.45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಕಳ್ಳತನಕ್ಕೆ ಸಂಬಂಧಿಸಿದಂತೆ ಮಹಿಳೆ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ.

ಅಪರ್ಣಾ ವಿನಯನ್ ಎಂಬ ಮಹಿಳೆ ತನ್ನ ಮನೆಗೆ ಪ್ರವೇಶಿಸುವ ಮೊದಲು ತನ್ನ ಫೋನ್ ಅನ್ನು ಶೂ ರ್ಯಾಕ್‌ನಲ್ಲಿ ಇರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.ಸ್ವಲ್ಪ ಸಮಯದ ನಂತರ, ಡೆಲಿವರಿ ಬಾಯ್ ಕಾರಿಡಾರ್‌ಗೆ ಪ್ರವೇಶಿಸಿದ್ದಾನೆ. ಪಕ್ಕದ ಫ್ಲಾಟ್‌ನಲ್ಲಿ ಆರ್ಡರ್ ಅನ್ನು ತಲುಪಿಸಿದ ನಂತರ, ರ್ಯಾಕ್‌ನಲ್ಲಿ ಇರಿಸಿದ್ದ ಫೋನ್ ಅನ್ನು ಡೆಲಿವರಿ ಬಾಯ್ ಕಸಿದುಕೊಂಡು ಪರಾರಿಯಾಗುತ್ತಿರುವುದು ವಿಡಿಯೊದಲ್ಲಿದೆ. ಕಳೆದ ರಾತ್ರಿ 6.45 ರ ಸುಮಾರಿಗೆ ಜಯರಾಮ್ ಯೆಗ್ಡೆ ಎಂಬ ಸ್ವಿಗ್ಗಿ ಡೆಲಿವರಿ ವ್ಯಕ್ತಿ ಡೆಲಿವರಿಗಾಗಿ ಮುಂಬೈನ ಮಲಾಡ್ ವೆಸ್ಟ್‌ನಲ್ಲಿರುವ ಅಶೋಕ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದ. ಹಿಂತಿರುಗುವಾಗ ಅವನು ನನ್ನ ಫೋನ್ ಕದ್ದನು. ದಯವಿಟ್ಟು ಈ ಸಿಸಿಟಿವಿ ಫೂಟೇಜ್ ವಿಡಿಯೊ ನೋಡಿ ಎಂದು ಅಪರ್ಣಾ ವಿನಯನ್ ಟ್ವೀಟ್ ಮಾಡಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು, “ಅಗತ್ಯ ಕ್ರಮಕ್ಕಾಗಿ ಸಾಧ್ಯವಾದಷ್ಟು ಬೇಗ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಷಯವನ್ನು ವರದಿ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ. ಸ್ವಿಗ್ಗಿ ಕೂಡ ಇದು ಗಂಭೀರ ವಿಷಯ ಎಂದು ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: CM KCR Birthday Celebrations: ಕೆಸಿಆರ್ ಹುಟ್ಟುಹಬ್ಬ- ಬ್ರೈಲ್ ಲಿಪಿಯಲ್ಲಿ ಬ್ರೈಲ್ ಲಿಪಿಯಲ್ಲಿ ಇತಿಹಾಸ, ಜನಾನುರಾಗಿ ನಾಯಕನಿಗೆ ಶುಭಾಶಯ ಮಹಾಪೂರ

“ಇದು ಗಂಭೀರ ಸಂಗತಿ ದಯವಿಟ್ಟು ಸಂಬಂಧಿತ ಆರ್ಡರ್ ಐಡಿಯೊಂದಿಗೆ ನಮಗೆ ಸಹಾಯ ಮಾಡಿ ಇದರಿಂದ ನಾವು ಇದನ್ನು ಈಗಿನಿಂದಲೇ ಕ್ರಮ ತೆಗೆದುಕೊಳ್ಳುತ್ತೇವೆ ” ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ