Air India: ಏರ್​ಇಂಡಿಯಾದ 470 ವಿಮಾನಗಳಿಗೆ 6,500ಕ್ಕೂ ಹೆಚ್ಚು ಪೈಲಟ್​ಗಳ ಅಗತ್ಯವಿದೆ: ವರದಿ

ಮುಂಬರುವ ವರ್ಷಗಳಲ್ಲಿ ಏರ್​ಬಸ್ ಮತ್ತು ಬೋಯಿಂಗ್​ನಿಂದ 470 ವಿಮಾನಗಳನ್ನು ನಿರ್ವಹಿಸಲು ಏರ್ ಇಂಡಿಯಾಗೆ 6,500ಕ್ಕೂ ಹೆಚ್ಚು ಪೈಲಟ್​ಗಳು ಬೇಕಾಗುತ್ತಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

Air India: ಏರ್​ಇಂಡಿಯಾದ 470 ವಿಮಾನಗಳಿಗೆ 6,500ಕ್ಕೂ ಹೆಚ್ಚು ಪೈಲಟ್​ಗಳ ಅಗತ್ಯವಿದೆ: ವರದಿ
ಏರ್ ಇಂಡಿಯಾ
Follow us
ನಯನಾ ರಾಜೀವ್
|

Updated on: Feb 17, 2023 | 10:25 AM

ಮುಂಬರುವ ವರ್ಷಗಳಲ್ಲಿ ಏರ್​ಬಸ್ ಮತ್ತು ಬೋಯಿಂಗ್​ನಿಂದ 470 ವಿಮಾನಗಳನ್ನು ನಿರ್ವಹಿಸಲು ಏರ್ ಇಂಡಿಯಾಗೆ 6,500ಕ್ಕೂ ಹೆಚ್ಚು ಪೈಲಟ್​ಗಳು ಬೇಕಾಗುತ್ತಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಫ್ಲೀಟ್ ಮತ್ತು ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುತ್ತಿರುವ ವಿಮಾನಯಾನ ಸಂಸ್ಥೆಯು 370 ವಿಮಾನಗಳನ್ನು ಖರೀದಿಸುವ ಆಯ್ಕೆಯನ್ನು ಒಳಗೊಂಡಿರುವ ಒಟ್ಟು 840 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ಡರ್ ಮಾಡಿದೆ. ಇದು ಯಾವುದೇ ಏರ್​ಲೈನ್​ನಿಂದ ಅತಿದೊಡ್ಡ ವಿಮಾನ ಆರ್ಡರ್ ಇದಾಗಿದೆ.

ಪ್ರಸ್ತುತ, ಏರ್ ಇಂಡಿಯಾ ತನ್ನ 113 ವಿಮಾನಗಳ ಫ್ಲೀಟ್​ ಅನ್ನು ನಿರ್ವಹಿಸಲು ಸುಮಾರು 1,600 ಪೈಲಟ್​ಗಳನ್ನು ಹೊಂದಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅತಿ ದೀರ್ಘಾವಧಿಯ ವಿಮಾನಗಳು ರದ್ದಾದ ಅಥವಾ ವಿಳಂಬವಾಗುವ ಸಾಧ್ಯತೆ ಇದೆ. ಏರ್​ಲೈನ್​ನ ಎರಡು ಅಂಗಸಂಸ್ಥೆಗಳು-ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮತ್ತು ಏರ್​ಏಷ್ಯಾ ಇಂಡಿಯಾ- ಒಟ್ಟಿಗೆ ತಮ್ಮ 54 ವಿಮಾನಗಳನ್ನು ಹಾರಿಸಲು ಸುಮಾರು 850 ಪೈಲಟ್​ಗಳನ್ನು ಹೊಂದಿದ್ದರೆ ಜಂಟಿ ಉದ್ಯಮ ವಿಸ್ತಾರಾ 600ಕ್ಕೂ ಹೆಚ್ಚು ಪೈಲಟ್​ಗಳನ್ನು ಹೊಂದಿದೆ. ಎರಡನೆಯದು 53 ವಿಮಾನಗಳ ಫ್ಲೀಟ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್​, ವಿಸ್ತಾರಾ ಹಾಗೂ ಏರ್​ ಏಷ್ಯಾ ಒಟ್ಟಾಗಿ 220 ವಿಮಾನಗಳ ಸಂಯೋಜಿತ ಫ್ಲೀಟ್​ ಅನ್ನು ನಿರ್ವಹಿಸಲು 3000 ಪೈಲಟ್​ಗಳನ್ನು ಹೊಂದಿವೆ. ಏರ್ ಇಂಡಿಯಾ ಈ 40 ಎ350 ಅನ್ನು ತನ್ನ ಅತಿ ದೀರ್ಘ ಪ್ರಯಾಣದ ಮಾರ್ಗಗಳು ಅಥವಾ 16 ಗಂಟೆಗಳ ಕಾಲ ಹಾರಾಟ ನಡೆಸುವ ವಿಮಾನಗಳಿಗಾಗಿ ಪ್ರಮುಖವಾಗಿ ತೆಗೆದುಕೊಳ್ಳುತ್ತಿದೆ. ಪ್ರತಿ 30 ವಿಮಾನಕ್ಕೆ 15 ಕಮಾಂಡರ್​ಗಳು ಮತ್ತು 15 ಮೊದಲ ಅಧಿಕಾರಿಗಳು ಅಂದರೆ ಅಂದರೆ ಎ350ಗಳಿಗೆ ಸುಮಾರು 1200 ಪೈಲಟ್​ಗಳು ಬೇಕಾಗುತ್ತಾರೆ.

ಒಂದು ಬೋಯಿಂಗ್​ 777ಗೆ 26 ಪೈಲಟ್​ಗಳ ಅಗತ್ಯವಿದೆ. ವಿಮಾನಯಾನವು ಅಂತಹ 10 ವಿಮಾನಗಳನ್ನು ಸೇರಿಸಿದರೆ, ಅದಕ್ಕೆ 260 ಪೈಲಟ್​ಗಳು ಪೈಲಟ್​ಗಳು ಬೇಕಾಗುತ್ತಾರೆ ಆದರೆ 20 ಬೋಯಿಂಗ್ 787ಗೆ ಸುಮಾರು 400 ಪೈಲಟ್​ಗಳು ಬೇಕಾಗುತ್ತಾರೆ, ಅಂತಹ ಪ್ರತಿ ವಿಮಾನಕ್ಕೆ 20 ಪೈಲಟ್​ಗಳು ಬೇಕಾಗುತ್ತಾರೆ, 10 ಮೊದಲ ಕಮಾಂಡರ್​ಗಳು ಮತ್ತು 10 ಅಧಿಕಾರಿಗಳು ಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ