Indian Railway: ಭಾರತೀಯ ರೈಲುಗಳಿಗೆ ಹೇಗೆ ಹೆಸರಿಡುತ್ತಾರೆ? ಇಲ್ಲಿದೆ ರೋಚಕ ಕತೆ!
Indian Railways Naming: ಆದರೆ ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಡುರೊಂಟೊ ಎಕ್ಸ್‌ಪ್ರೆಸ್, ಈ ಮೂರು ರೈಲುಗಳ ಹೆಸರಿನ ಹಿಂದೆ ರೋಚಕವಾದ ಇತಿಹಾಸವಿದೆ. ಹಾಗಾದರೆ, ಈ ರೈಲುಗಳಿಗೆ ಹೇಗೆ ಹೆಸರಿಸಲಾಗಿದೆ? ಈ ಹೆಸರುಗಳು ಏನನ್ನು ಸೂಚಿಸುತ್ತವೆ? ಇವೆಲ್ಲದರ ಮಾಹಿತಿ ಈ ಕೆಳಗಿನಂತಿದೆ.
ಭಾರತೀಯ ರೈಲುಗಳು, ರೈಲ್ವೇ ಸಚಿವಾಲಯದ (Indian Railway Ministry) ಅಡಿಯಲ್ಲಿ ಶಾಸನಬದ್ಧ (Statutory) ಸಂಸ್ಥೆಯಾಗಿದೆ. ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಪ್ರತಿದಿನ ಸಾವಿರಾರು ರೈಲುಗಳನ್ನು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಸಂಚರಿಸುತ್ತವೆ.ವಿಶ್ವದ ಅತೀ ಉದ್ದದ ರೈಲ್ವೆ ಮಾರ್ಗದ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯನ್ನು ಹೊಂದಿರುವ ಹೆಗ್ಗಳಿಕೆ ಇರುವ ಈ ರಾಷ್ಟ್ರದಲ್ಲಿ ರೈಲುಗಳಿಗೆ ಹೇಗೆ ಹೆಸರಿಸಲಾಗುತ್ತದೆ ಎಂಬ ಕುತೂಹಲಕಾರಿ ಸಂಗತಿ ಇಲ್ಲಿದೆ.
ದೂರ ಪ್ರಯಾಣ ಮಾಡುವ ರೈಲುಗಳಿಗೆ ಆ ರೈಲು ತಲುಪುವ ಕೊನೆಯ ಸ್ಥಳದ ಹೆಸರನ್ನು ಸಾಮಾನ್ಯವಾಗಿ ಇಡಲಾಗಿದೆ. ಆದರೆ ರಾಜಧಾನಿ ಎಕ್ಸ್‌ಪ್ರೆಸ್ (Rajdhani Express), ಶತಾಬ್ದಿ ಎಕ್ಸ್‌ಪ್ರೆಸ್ (Shatabdi Express) ಮತ್ತು ಡುರೊಂಟೊ ಎಕ್ಸ್‌ಪ್ರೆಸ್ (Duronto Express), ಈ ಮೂರು ರೈಲುಗಳ ಹೆಸರಿನ ಹಿಂದೆ ರೋಚಕವಾದ ಇತಿಹಾಸವಿದೆ. ಹಾಗಾದರೆ, ಈ ರೈಲುಗಳಿಗೆ ಹೇಗೆ ಹೆಸರಿಸಲಾಗಿದೆ? ಈ ಹೆಸರುಗಳು ಏನನ್ನು ಸೂಚಿಸುತ್ತವೆ? ಇವೆಲ್ಲದರ ಮಾಹಿತಿ ಈ ಕೆಳಗಿನಂತಿದೆ.
1) ಶತಾಬ್ದಿ ಎಕ್ಸ್‌ಪ್ರೆಸ್:
ಈ ಚೇರ್ ಕಾರ್ ರೈಲು (AC ಚೇರ್ ಕಾರ್ ಸೀಟುಗಳನ್ನು ಪ್ರತಿ ಸಾಲಿನಲ್ಲಿ 3X2 ರೀತಿಯಲ್ಲಿ ಜೋಡಿಸಲಾಗಿರುತ್ತದೆ) 1989 ರಲ್ಲಿ ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರು ಅವರ 100 ನೇ ಜನ್ಮದಿನದಂದು ಆರಂಭಿಸಲಾಯಿತು. ಆದ್ದರಿಂದ ಇದನ್ನು ಶತಾಬ್ದಿ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ. ಶತಾಬ್ದಿ ಎಂದರೆ ಶತಮಾನ. ರೈಲು 400-800 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಲೋಮೀಟರ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ಇದು ಭಾರತೀಯ ರೈಲ್ವೇಯಿಂದ ನಡೆಸಲ್ಪಡುವ ದೂರದ (Long-Distance) ರೈಲು.
2) ರಾಜಧಾನಿ ಎಕ್ಸ್‌ಪ್ರೆಸ್:
ಇದು ದೆಹಲಿ ಮತ್ತು ಇತರ ರಾಜ್ಯಗಳ ರಾಜಧಾನಿಗಳ ನಡುವೆ ಚಲಿಸುವ ಭಾರತದ ಉನ್ನತ ಶ್ರೇಣಿಯ ರೈಲುಗಳಲ್ಲಿ ಒಂದಾಗಿದೆ. ಹಿಂದಿಯಲ್ಲಿ ರಾಜಧಾನಿ ಎಂದರೆ ರಾಜಧಾನಿ ನಗರ, ಅದಕ್ಕಾಗಿಯೇ ರೈಲಿಗೆ ರಾಜಧಾನಿ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ರೈಲಿನ ಗರಿಷ್ಠ ವೇಗ, ಗಂಟೆಗೆ 140 ಕಿಲೋಮೀಟರ್. ಇದು ಹವಾನಿಯಂತ್ರಿತ ರೈಲು (Air Conditioned) ಮತ್ತು ನಿಮ್ಮ ಟಿಕೆಟ್ ದರದಲ್ಲೇ ಆಹಾರದ ಖರ್ಚು ಸೇರಿರುತ್ತದೆ. ಹಾಗಾಗಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ನೀವು ಪ್ರಯಾಣ ಮಾಡಲು ಟಿಕೆಟ್ ಖರೀದಿಸಿದರೆ ಆಹಾರಕ್ಕೆಂದ ಪ್ರತ್ಯೇಕ ಹಣವನ್ನು ನೀಡುವ ಅಗತ್ಯವಿಲ್ಲ.
3) ಡುರೊಂಟೊ ಎಕ್ಸ್‌ಪ್ರೆಸ್:
ಬಂಗಾಳಿ ಭಾಷೆಯಲ್ಲಿ ಡುರೊಂಟೊ ಎಂದರೆ ‘ತಡೆರಹಿತ’ ಎಂದರ್ಥ. ಆದ್ದರಿಂದ, ರೈಲಿಗೆ ಡುರೊಂಟೊ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ ಏಕೆಂದರೆ ಇದು ತನ್ನ ಪ್ರಯಾಣದ ಸಮಯದಲ್ಲಿ ಕನಿಷ್ಠ ಸಂಖ್ಯೆಯ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು ದೂರದ ಊರುಗಳಿಗೆ ಚಲಿಸುತ್ತದೆ. ಇದು ಗಂಟೆಗೆ ಗರಿಷ್ಠ 140 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.
ಇದನ್ನೂ ಓದಿ: ಏರ್ಇಂಡಿಯಾದ 470 ವಿಮಾನಗಳಿಗೆ 6,500ಕ್ಕೂ ಹೆಚ್ಚು ಪೈಲಟ್ಗಳ ಅಗತ್ಯವಿದೆ: ವರದಿ
ಈ ರೈಲುಗಳ ಹೊರತಾಗಿ, ರೈಲಿನ ಅಂತಿಮ ಬಿಂದುಗಳು ಮತ್ತು ರೈಲು ವರ್ಗದ ಹೆಸರನ್ನು ಭಾರತೀಯ ರೈಲ್ವೇ ರೈಲುಗಳಿಗೆ ಇಡುವುದು ಸಾಮಾನ್ಯವಾಗಿದೆ. ಉದಾಹರಣೆಗೆ, ಬೆಂಗಳೂರು-ಚೆನ್ನೈ ಮೇಲ್, ಪೂರ್ಣ-ಹೈದರಾಬಾದ್ ಪ್ಯಾಸೆಂಜರ್, ಚೆನ್ನೈ-ಜೈಪುರ ಎಕ್ಸ್‌ಪ್ರೆಸ್, ಹೌರಾ-ಮುಂಬೈ ಮೇಲ್, ಇತ್ಯಾದಿ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Fri, 17 February 23