AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯನ್ನು ಇಂಪ್ರೆಸ್​ ಮಾಡಲು ಪಾಸ್​ಪೋರ್ಟ್​ ಸಿಸ್ಟಂ ಹ್ಯಾಕ್​ ಮಾಡಿ ಕಷ್ಟಕ್ಕೆ ಸಿಲುಕಿದ ಪತಿ

ಪತ್ನಿಯನ್ನು ಇಂಪ್ರೆಸ್ ಮಾಡಲು ಪಾಸ್​ಪೋರ್ಟ್​ ಸಿಸ್ಟಂ ಹ್ಯಾಕ್​ ಮಾಡಿ ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಪೊಲೀಸರ ಪಾಸ್​ಪೋರ್ಟ್​ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್​ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪತ್ನಿಯನ್ನು ಇಂಪ್ರೆಸ್​ ಮಾಡಲು ಪಾಸ್​ಪೋರ್ಟ್​ ಸಿಸ್ಟಂ ಹ್ಯಾಕ್​ ಮಾಡಿ ಕಷ್ಟಕ್ಕೆ ಸಿಲುಕಿದ ಪತಿ
ಸೈಬರ್ ಕ್ರೈಂ
ನಯನಾ ರಾಜೀವ್
|

Updated on: Feb 17, 2023 | 9:25 AM

Share

ಪತ್ನಿಯನ್ನು ಇಂಪ್ರೆಸ್ ಮಾಡಲು ಪಾಸ್​ಪೋರ್ಟ್​ ಸಿಸ್ಟಂ ಹ್ಯಾಕ್​ ಮಾಡಿ ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಪೊಲೀಸರ ಪಾಸ್​ಪೋರ್ಟ್​ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್​ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಆತ ಪಾಸ್​ಪೋರ್ಟ್​ ಪರಿಶೀಲನೆ ವೇಳೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ತನ್ನ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಪಾಸ್​ಪೋರ್ಟ್​ ವಿಚಾರಣೆಯನ್ನು ತೆರವುಗೊಳಿಸಿದ್ದಾರೆ.

ಆತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಬಂಧಿಸಲಾಗಿದ್ದು, ಆರೋಪಿ ರಾಜಾ ಬಾಬು ಷಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿ ಪ್ರಕಾರ, ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದ ಪತ್ನಿಯನ್ನು ಮೆಚ್ಚಿಸಲು ಆರೋಪಿ ಪಾಸ್​ಪೋರ್ಟ್​ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಯತ್ನಿಸಿದ್ದ.

ಆರೋಪಿಯ ಪತ್ನಿಯ ದಾಖಲೆಗಳು ಸರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ, ಆಕೆಯ ಪಾಸ್​ಪೋರ್ಟ್​ ಅನ್ನು ಸದ್ಯ ತಡೆಹಿಡಿಯಲಾಗಿದೆ. ರಾಜಾ ಬಾಬು ಷಾ ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದ,ಇದಕ್ಕಾಗಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ನಡುವೆ ತನ್ನ ಪತ್ನಿಯನ್ನು ಮೆಚ್ಚಿಸುವ ನಿಟ್ಟಿನಲ್ಲಿ ಪಾಸ್​ಪೋರ್ಟ್​ ವ್ಯವಸ್ಥೆಯನ್ನೇ ಆತ ಹ್ಯಾಕ್ ಮಾಡಿದ್ದ.

ಮೂರು ಪಾಸ್​ಪೋರ್ಟ್​ ಅರ್ಜಿಗಳು ಕ್ಲಿಯರೆನ್ಸ್​ಗಾಗಿ ಬಾಕಿ ಉಳಿದಿದ್ದವು. ಪಾಸ್​ಪೋರ್ಟ್​ ಫೈಲ್​ಗಳನ್ನು ಪ್ರಾದೇಶಿಕ ಪಾಸ್​ಪೋರ್ಟ್​ ಕಚೇರಿಯಿಂದ ನಗರ ಪೊಲೀಸ್ ಇಲಾಖೆಯ ವಿಶೇಷ ಶಾಖೆಗೆ ಕಳುಹಿಸಬೇಕಿತ್ತು. ವಿಶೇಷ ಶಾಖೆ ನಂತರ ಸ್ಥಳೀಯ ಪೊಲೀಸರಿಗೆ ಅರ್ಜಿದಾರರ ಕುರಿತು ವರದಿಯನ್ನು ಸಲ್ಲಿಸುವಂತೆ ಕೇಳಬೇಕಾಗಿತ್ತು.

ಬಳಿಕ ಅದರ ಆಧಾರದ ಮೇಲೆ ಪಾಸ್​ಪೋರ್ಟ್​ ಮಂಜೂರು ಮಾಡುವ ನಿರ್ಧಾರ ತೆಗೆದುಕೊಳ್ಲಬೇಕಿತ್ತು, ಜತೆಗೆ ಮುಂದಿನ ಕ್ರಮಕ್ಕಾಗಿ ಪಾಸ್​ಪೋರ್ಟ್​ ಕಚೇರಿಗೆ ರವಾನಿಸಬೇಕಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!