ಉತ್ತರಾಖಂಡ್ ಅರಣ್ಯದಲ್ಲಿ ಭೀಕರ ಬೆಂಕಿ; ನಾಲ್ವರ ಜೀವ ಆಹುತಿ, ಘಟನೆಯ ವರದಿ ಕೇಳಿದ ಅಮಿತ್ ಶಾ

|

Updated on: Apr 04, 2021 | 2:44 PM

ಈ ಕಾಡ್ಗಿಚ್ಚು ಈಗಾಗಲೇ ಸುಮಾರು 37 ಲಕ್ಷ ರೂ.ಮೌಲ್ಯದ ಆಸ್ತಿಯನ್ನು ನಾಶ ಮಾಡಿದ್ದು, ರಾಜ್ಯದ ಅರಣ್ಯ ಇಲಾಖೆಯ ಸುಮಾರು 12,000 ಗಾರ್ಡ್​ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಉತ್ತರಾಖಂಡ್ ಅರಣ್ಯದಲ್ಲಿ ಭೀಕರ ಬೆಂಕಿ; ನಾಲ್ವರ ಜೀವ ಆಹುತಿ, ಘಟನೆಯ ವರದಿ ಕೇಳಿದ ಅಮಿತ್ ಶಾ
ಉತ್ತರಾಖಂಡ್ ಬೆಂಕಿ (ಚಿತ್ರಕೃಪೆ-ಎಎನ್​​ಐ)
Follow us on

ನವದೆಹಲಿ: ಇತ್ತೀಚೆಗಷ್ಟೇ ಹಿಮನದಿ ಸ್ಫೋಟದ ದುರಂತಕ್ಕೆ ತುತ್ತಾಗಿದ್ದ ಉತ್ತರಾಖಂಡ್​ಗೆ ಇದೀಗ ಬೆಂಕಿ ಆಘಾತ ಉಂಟಾಗಿದೆ. ಇಲ್ಲಿನ ಸುಮಾರು 62 ಹೆಕ್ಟೇರ್​ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಈ ಅವಘಡದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ.

ಈ ಕಾಡ್ಗಿಚ್ಚು ಈಗಾಗಲೇ ಸುಮಾರು 37 ಲಕ್ಷ ರೂ.ಮೌಲ್ಯದ ಆಸ್ತಿಯನ್ನು ನಾಶ ಮಾಡಿದ್ದು, ರಾಜ್ಯದ ಅರಣ್ಯ ಇಲಾಖೆಯ ಸುಮಾರು 12,000 ಗಾರ್ಡ್​ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಎನ್​ಡಿಆರ್​ಎಫ್​ ತಂಡವನ್ನು ನಿಯೋಜಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇನ್ನು ಗೃಹ ಸಚಿವ ಅಮಿತ್​ ಶಾ ಅವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಹಾಗೇ, ಮುಖ್ಯಮಂತ್ರಿ ತೀರಥ್​ ಸಿಂಗ್ ರಾವತ್​ ಅವರು ತುರ್ತು ಸಭೆ ಕರೆದಿದ್ದಾರೆ. ಉತ್ತರಾಖಂಡ್​ನಲ್ಲಿ ಇತ್ತೀಚೆಗಷ್ಟೇ ಹಿಮನದಿ ಸ್ಫೋಟವಾಗಿ ವಿನಾಶ ಉಂಟಾಗಿತ್ತು.

ಇದನ್ನೂ ಓದಿ: Uttarakhand Glacier Burst incident | ಉತ್ತರಾಖಂಡ ಹಿಮಪ್ರವಾಹದಲ್ಲಿ ಮೃತರ ಸಂಖ್ಯೆ 136; ಅಧಿಕೃತ ಘೋಷಣೆ

Uttarakhand glacier burst: ದುರಂತದಲ್ಲಿ 3 ಮರಿ ಕಳೆದುಕೊಂಡ ಶ್ವಾನ, 7 ದಿನಗಳಿಂದ ಕಣ್ಣೀರಿಡುತ್ತಾ ಹುಡುಕುತಿದೆ.. Photos

Published On - 2:44 pm, Sun, 4 April 21