TV9 Festival Of India: ನಾಲ್ಕನೇ ದಿನಕ್ಕೆ ಕಾಲಿಟ್ಟ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ವರ್ಣರಂಚಿತ ಕಾರ್ಯಕ್ರಮಗಳ ವೈಭವ

|

Updated on: Oct 23, 2023 | 11:06 AM

ಟಿವಿ9 ನೆಟ್​ವರ್ಕ್​ ದೆಹಲಿಯ ಮೇಜರ್ ಧ್ಯಾನ್​ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸುಪ್ರಸಿದ್ಧ ಕಲಾವಿದರಿಂದ ವರ್ಣರಂಜಿತ ಕಾರ್ಯಕ್ರಮಗಳು ಮೂಡಿಬರಲಿವೆ. ಮೂರನೇ ದಿನ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ದುರ್ಗೆಯ ಆಶೀರ್ವಾದ ಪಡೆದಿದ್ದಾರೆ.

TV9 Festival Of India: ನಾಲ್ಕನೇ ದಿನಕ್ಕೆ ಕಾಲಿಟ್ಟ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ವರ್ಣರಂಚಿತ ಕಾರ್ಯಕ್ರಮಗಳ ವೈಭವ
ದುರ್ಗೆ
Image Credit source: TV9 Bharatvarsh
Follow us on

ಟಿವಿ9 ನೆಟ್​ವರ್ಕ್​ ದೆಹಲಿಯ ಮೇಜರ್ ಧ್ಯಾನ್​ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸುಪ್ರಸಿದ್ಧ ಕಲಾವಿದರಿಂದ ವರ್ಣರಂಜಿತ ಕಾರ್ಯಕ್ರಮಗಳು ಮೂಡಿಬರಲಿವೆ. ಮೂರನೇ ದಿನ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ದುರ್ಗೆಯ ಆಶೀರ್ವಾದ ಪಡೆದರು.

ಕಾರ್ಯಕ್ರಮವು ಅಕ್ಟೋಬರ್ 24 ರವರೆಗೆ ಅಂದರೆ ನಾಳೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಮ್ಮ ಓದುಗರು ತಮ್ಮ ಕುಟುಂಬ ಸಮೇತ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ನಮ್ಮ ಸವಿನಯ ಪ್ರಾರ್ಥನೆ. ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ದೆಹಲಿಯ ಅತಿದೊಡ್ಡ ದುರ್ಗೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಲಾದ TV9 ನ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ದುರ್ಗೆಯ ದರ್ಶನ ಪಡೆಯಲು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಮತ್ತು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಕುಟುಂಬದೊಂದಿಗೆ ಆಗಮಿಸಿದ್ದರು. ದೆಹಲಿ ಸರ್ಕಾರದ ಸಚಿವ ಇಮ್ರಾನ್ ಹುಸೇನ್ ಕೂಡ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು.

ಮತ್ತಷ್ಟು ಓದಿ: TV9 Festival Of India: ದುರ್ಗಾ ಪೂಜೆ ಮಾಡಿ, ದೇವಿಯ ಆಶೀರ್ವಾದ ಪಡೆದ ಗಣ್ಯರು

ಗಾಯಕಿ ಮೈಥಿಲಿ ಠಾಕೂರ್ ಕೂಡ ತಮ್ಮ ಸಹೋದರರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಹಾಡುಗಳ ಮೂಲಕ ಜನರ ಮನ ಗೆದ್ದರು.
ಇಂಡಿಯಾ ಗೇಟ್‌ನ ಸಮೀಪದಲ್ಲಿ ಆಯೋಜಿಸಲಾದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಜನಸಾಗರವೇ ಹರಿದುಬರುತ್ತಿದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಜನರು ದುರ್ಗಾದೇವಿಯನ್ನು ಪೂಜಿಸಿದ ನಂತರ ದಾಂಡಿಯಾ ಆಡುತ್ತಿರುವ ದೃಶ್ಯ ಕಂಡುಬಂತು.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ನಡೆಯುತ್ತಿರುವುದೆಲ್ಲಿ?
ಸ್ಥಳ: ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂ, ಇಂಡಿಯಾ ಗೇಟ್ ಹತ್ತಿರ, ನವದೆಹಲಿ
ಪ್ರವೇಶ: ಗೇಟ್ ಸಂಖ್ಯೆ ಎರಡು ಮತ್ತು ಮೂರು, ಪಾರ್ಕಿಂಗ್ ಉಚಿತ.

ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು
1. https://insider.in/tv9-festival-of-india-durga-puja-2023/event

2. https://www.facebook.com/events/s/tv9-festival-of-india/707603687464379/

3. https://in.bookmyshow.com/activities/tv9-festival-of-india/ET00372862?webview=true

ಟಿವಿ9ನ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಮನರಂಜನೆಯ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಅವಕಾಶವೂ ಜನರಿಗೆ ಸಿಗುತ್ತಿದೆ.

ಲೈವ್ ಮ್ಯೂಸಿಕ್ ಶೋನಲ್ಲಿ ಜನರ ಬೇಡಿಕೆಯ ಮೇರೆಗೆ ಹಾಡುಗಳನ್ನು ಹಾಡಲಾಯಿತು. ಪುಟ್ಟ ಮಕ್ಕಳ ನೃತ್ಯ ಜನಮನ ಸೂರೆಗೊಂಡಿತು. ಅಕ್ಟೋಬರ್ 24ರವರೆಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಪ್ರವೇಶ ಮತ್ತು ಪಾರ್ಕಿಂಗ್ ಉಚಿತವಾಗಿರುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ