TV9 Festival Of India: ದುರ್ಗಾ ಪೂಜೆ ಮಾಡಿ, ದೇವಿಯ ಆಶೀರ್ವಾದ ಪಡೆದ ಗಣ್ಯರು

ಟಿವಿ9 ನೆಟ್​ವರ್ಕ್​ ಪ್ರಸ್ತುತ ಪಡಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್, ಸಚಿವ ಗೋಪಾಲ ರೈ, ಬಿಜೆಪಿ ನಾಯಕ ತರುಣ್ ಚುಗ್, ಸಂಸದ ಗೌತಮ್ ಗಂಭೀರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ ಉತ್ಸವಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆದರು.

ನಯನಾ ರಾಜೀವ್
|

Updated on: Oct 22, 2023 | 9:09 AM

ದೆಹಲಿ ಸರ್ಕಾರದ ಸಚಿವರು ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರೈ ಕೂಡ ಉತ್ಸವದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ದುರ್ಗಾ ಮಾತೆಯ ಆರತಿ ನೆರವೇರಿಸಿ ಆಶೀರ್ವಾದ ಪಡೆದರು.

1 / 8
ಬಿಜೆಪಿ ಮುಖಂಡ ತರುಣ್ ಚುಗ್ ಕೂಡ ಉತ್ಸವಕ್ಕೆ ಆಗಮಿಸಿ ಮಾತೆ ದುರ್ಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು. ಅಲ್ಲದೆ ಉತ್ಸವದಲ್ಲಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಖರೀದಿ ಮಾಡಿದರು.

2 / 8
ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ ಭಾಗವಹಿಸಿದ್ದರು. ಈ ವೇಳೆ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

3 / 8
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ'ದ ಎರಡನೇ ದಿನದಂದು ಭಾಗವಹಿಸಿದ್ದರು. ಉತ್ಸವಕ್ಕೆ ಆಗಮಿಸಿದ ಅವರು ದುರ್ಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು.

4 / 8
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾಕ್ಕೆ ಆಗಮಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಇದೊಂದು ಅದ್ಭುತ ಪ್ರಯೋಗ ಎಂದಿದ್ದಾರೆ. ದೆಹಲಿ-ಎನ್‌ಸಿಆರ್‌ನ ಜನರಿಗೆ, ಇದು ದುರ್ಗಾ ದೇವಿಯನ್ನು ಪೂಜಿಸುವ ಜೊತೆಗೆ, ನಾವು ದೈನಂದಿನ ಬಳಕೆಯ ವಸ್ತುಗಳನ್ನು ಸಹ ಖರೀದಿಸಬಹುದಾದ ಸ್ಥಳವಾಗಿದೆ ಎಂದರು.

5 / 8
ಟಿವಿ9 ಗ್ರೂಪ್‌ನ ಫುಲ್ ಟೈಮ್ ಡೈರೆಕ್ಟರ್ ಹೇಮಂತ್ ಶರ್ಮಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಬ್ಬದ ಎರಡನೇ ದಿನವೂ ಜನರು ದುರ್ಗೆಯ ದರ್ಶನ ಪಡೆದಿದ್ದಲ್ಲದೆ, ಸಾಕಷ್ಟು ಶಾಪಿಂಗ್ ಮಾಡಿ ವಿವಿಧ ಬಗೆಯ ಖಾದ್ಯಗಳನ್ನು ಸವಿದರು.

6 / 8
ಉತ್ಸವದ ಎರಡನೇ ದಿನವಾದ ಶನಿವಾರ ಮೇಜರ್ ಧ್ಯಾನಚಂದ್ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಅವಧಿಯಲ್ಲಿ ಹಾಡುಗಳು ಮತ್ತು ಸಂಗೀತದ ಜೊತೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

7 / 8
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಎರಡನೇ ದಿನದಂದು ವೇದಿಕೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಅಪಾರ ಜನಸ್ತೋಮ ನೆರೆದಿತ್ತು.

8 / 8
Follow us