- Kannada News Photo gallery TV9 Festival of India, After the puja, blessings of Maa Durga were taken, the second day of the festival was celebrated see Photos
TV9 Festival Of India: ದುರ್ಗಾ ಪೂಜೆ ಮಾಡಿ, ದೇವಿಯ ಆಶೀರ್ವಾದ ಪಡೆದ ಗಣ್ಯರು
ಟಿವಿ9 ನೆಟ್ವರ್ಕ್ ಪ್ರಸ್ತುತ ಪಡಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಸಚಿವ ಗೋಪಾಲ ರೈ, ಬಿಜೆಪಿ ನಾಯಕ ತರುಣ್ ಚುಗ್, ಸಂಸದ ಗೌತಮ್ ಗಂಭೀರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ ಉತ್ಸವಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆದರು.
Updated on: Oct 22, 2023 | 9:09 AM

ದೆಹಲಿ ಸರ್ಕಾರದ ಸಚಿವರು ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರೈ ಕೂಡ ಉತ್ಸವದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ದುರ್ಗಾ ಮಾತೆಯ ಆರತಿ ನೆರವೇರಿಸಿ ಆಶೀರ್ವಾದ ಪಡೆದರು.

ಬಿಜೆಪಿ ಮುಖಂಡ ತರುಣ್ ಚುಗ್ ಕೂಡ ಉತ್ಸವಕ್ಕೆ ಆಗಮಿಸಿ ಮಾತೆ ದುರ್ಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು. ಅಲ್ಲದೆ ಉತ್ಸವದಲ್ಲಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಖರೀದಿ ಮಾಡಿದರು.

ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ ಭಾಗವಹಿಸಿದ್ದರು. ಈ ವೇಳೆ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ'ದ ಎರಡನೇ ದಿನದಂದು ಭಾಗವಹಿಸಿದ್ದರು. ಉತ್ಸವಕ್ಕೆ ಆಗಮಿಸಿದ ಅವರು ದುರ್ಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾಕ್ಕೆ ಆಗಮಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಇದೊಂದು ಅದ್ಭುತ ಪ್ರಯೋಗ ಎಂದಿದ್ದಾರೆ. ದೆಹಲಿ-ಎನ್‌ಸಿಆರ್‌ನ ಜನರಿಗೆ, ಇದು ದುರ್ಗಾ ದೇವಿಯನ್ನು ಪೂಜಿಸುವ ಜೊತೆಗೆ, ನಾವು ದೈನಂದಿನ ಬಳಕೆಯ ವಸ್ತುಗಳನ್ನು ಸಹ ಖರೀದಿಸಬಹುದಾದ ಸ್ಥಳವಾಗಿದೆ ಎಂದರು.

ಟಿವಿ9 ಗ್ರೂಪ್‌ನ ಫುಲ್ ಟೈಮ್ ಡೈರೆಕ್ಟರ್ ಹೇಮಂತ್ ಶರ್ಮಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಬ್ಬದ ಎರಡನೇ ದಿನವೂ ಜನರು ದುರ್ಗೆಯ ದರ್ಶನ ಪಡೆದಿದ್ದಲ್ಲದೆ, ಸಾಕಷ್ಟು ಶಾಪಿಂಗ್ ಮಾಡಿ ವಿವಿಧ ಬಗೆಯ ಖಾದ್ಯಗಳನ್ನು ಸವಿದರು.

ಉತ್ಸವದ ಎರಡನೇ ದಿನವಾದ ಶನಿವಾರ ಮೇಜರ್ ಧ್ಯಾನಚಂದ್ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಅವಧಿಯಲ್ಲಿ ಹಾಡುಗಳು ಮತ್ತು ಸಂಗೀತದ ಜೊತೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಎರಡನೇ ದಿನದಂದು ವೇದಿಕೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಅಪಾರ ಜನಸ್ತೋಮ ನೆರೆದಿತ್ತು.




