ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ಉಚಿತ: ಅರವಿಂದ್ ಕೇಜ್ರಿವಾಲ್
Arvind Kejriwal: ದೆಹಲಿ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಲಸಿಕೆ ಲಭ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯ ಬಯಸುವವರು ಲಸಿಕೆಗೆ ಹಣ ಪಾವತಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ಬೆಲೆಯನ್ನು ಕಡಿಮೆ ಮಾಡಿ ಎಂದು ಕೇಜ್ರಿವಾಲ್ ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡಿದ್ದಾರೆ.
ದೆಹಲಿ: ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡಲಾಗುವುದು. ಲಸಿಕೆ ವಿತರಣೆ ಶನಿವಾರದಿಂದ ಆರಂಭವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಕೊವಿಡ್ ಲಸಿಕೆ ಉಚಿತವಾಗಿ ನೀಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ನಾವು ಇವತ್ತು 1.34 ಕೋಟಿ ಲಸಿಕೆ ಖರೀದಿಸಲು ಅನುಮತಿ ನೀಡಿದ್ದೇವೆ. ಖರೀದಿಸಿದ ಲಸಿಕೆಗಳು ಶೀಘ್ರದಲ್ಲಿಯೇ ಜನರಿಗೆ ವಿತರಣೆಯಾಗುವಂತೆ ನಾವು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಲಸಿಕೆ ಲಭ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯ ಬಯಸುವವರು ಲಸಿಕೆಗೆ ಹಣ ಪಾವತಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ಬೆಲೆಯನ್ನು ಕಡಿಮೆ ಮಾಡಿ ಎಂದು ಕೇಜ್ರಿವಾಲ್ ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡಿದ್ದಾರೆ.
ಒಂದು ಡೋಸ್ ಲಸಿಕೆಯ ಬೆಲೆಯನ್ನು ರೂ 150ಕ್ಕೆ ಇಳಿಸಿ ಎಂದು ನಾನು ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡುತ್ತಿದ್ದೇನೆ. ಲಾಭಗಳಿಸಲು ನಿಮಗೆ ಇಡೀ ಜೀವಮಾನವೇ ಉಳಿದಿದೆ. ಜನರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಲಾಭ ಮಾಡುವ ಕೆಲಸ ಸರಿಯಲ್ಲ. ಕೇಂದ್ರ ಸರ್ಕಾರವು ಈ ಲಸಿಕೆ ದರವನ್ನು ಇಳಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಒಂದು ಲಸಿಕೆ ಉತ್ಪಾದಕರು ಅವರು ರಾಜ್ಯ ಸರ್ಕಾರಗಳಿಗೆ ಡೋಸ್ ಗೆ ₹ 400 ನೀಡುತ್ತಾರೆ ಎಂದು ಹೇಳಿದರು. ಎರಡನೇ ಉತ್ಪಾದಕರು ಡೋಸ್ಗೆ ₹ 600ನಂತೆ ನೀಡುವುದಾಗಿ ಹೇಳಿದರು. ಇಬ್ಬರೂ ಬೆಲೆಯನ್ನು ಕೇಂದ್ರ ಸರ್ಕಾರಕ್ಕಾಗಿ ಡೋಸ್ಗೆ ₹ 150ರಂತೆ ಇಡುತ್ತಾರೆ.ಈ ಬೆಲೆಗಳು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಕೇಜ್ರಿವಾಲ್.
दुनिया के कई देशों के अनुभवों से पता चलता है कि कोरोना से छुटकारा पाने में वैक्सीन एक प्रभावी हथियार है। दिल्ली में 18 साल से ज़्यादा उम्र के सभी लोगों को आने वाले दिनों में सरकार मुफ़्त वैक्सीन लगाएगी। pic.twitter.com/5kEVddPOQ5
— Arvind Kejriwal (@ArvindKejriwal) April 26, 2021
ಮೇ 1ರಂದು ಲಸಿಕೆ ವಿತರಣೆ ಆರಂಭವಾಗಲಿದ್ದು, ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಉತ್ಪಾದಕರಿಂದಲೇ ಖರೀದಿಸಲಿ ಎಂದು ಕೇಂದ್ರ ಸರ್ಕಾರ ಹೇಳಿದೆ.
कोरोना वैक्सीन पर एक महत्वपूर्ण प्रेस कॉंफ्रेंस | LIVE https://t.co/cJWHUOZgoQ
— Arvind Kejriwal (@ArvindKejriwal) April 26, 2021
ಕೊವ್ಯಾಕ್ಸಿನ್ ಮತ್ತ ಕೊವಿಶೀಲ್ಡ್ ಲಸಿಕೆ ತಯಾರಕರು ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಯಲ್ಲಿ ಲಸಿಕೆ ನೀಡುವುದಾಗಿ ಹೇಳಿದ್ದು, ಕೇಂದ್ರ ಸರ್ಕಾರಕ್ಕೆ ಡೋಸ್ಗೆ ₹ 150ರಂತೆ ನೀಡಲಿವೆ. ಸಿರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ರಾಜ್ಯ ಸರ್ಕಾರಗಳಿಗೆ ಕೊವಿಶೀಲ್ಡ್ ಲಸಿಕೆಯನ್ನು ಡೋಸ್ಗೆ ₹ 400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 600ರಂತೆ ನೀಡಲಾಗುವುದು ಎಂದು ಹೇಳಿದೆ. ಅದೇ ವೇಳೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ರಾಜ್ಯ ಸರ್ಕಾರಗಳಿಗೆ ಡೋಸ್ಗೆ ₹ 600 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 1,200 ನಂತೆ ನೀಡಲಿದೆ. ಕೇಂದ್ರವು ರಾಜ್ಯಗಳಿಗಿಂತ ಲಸಿಕೆಗಳನ್ನು ಅಗ್ಗವಾಗಿ ಪಡೆಯುತ್ತಿದೆ ಎಂಬ ವಾದವು “ಸುಳ್ಳು” ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್
(Free Covid Vaccine In Delhi To All Above 18 announces Delhi CM Arvind Kejriwal )