Delhi Chalo ಪ್ರತಿಭಟನಾ ನಿರತ ರೈತರಿಗಾಗಿ ಉಚಿತ ಶೂ ಪಾಲಿಷ್ ಸೇವೆ, ಕುಸ್ತಿ ಪಂದ್ಯಾವಳಿ!

|

Updated on: Jan 10, 2021 | 11:56 PM

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್​ ರೈತರು ತಮ್ಮ ದೆಹಲಿ ಚಲೋ ಪ್ರತಿಭಟನೆಯಿಂದ ಹಿಂದೆ ಸರಿಯುವ ಯಾವುದೇ ಸೂಚನೆ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಏಳು ಬಾರಿ ಮಾತುಕತೆ ವಿಫಲವಾಗಿದೆ. ಆದರೂ ಕೃಷಿ ಕಾಯ್ದೆಯನ್ನ ಸಂಪೂರ್ಣವಾಗಿ ರದ್ದುಪಡಿಸುವವರೆಗೂ ಧರಣಿ ವಾಪಸ್​ ಪಡೆಯೋದಿಲ್ಲ ಎಂದು ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Delhi Chalo ಪ್ರತಿಭಟನಾ ನಿರತ ರೈತರಿಗಾಗಿ ಉಚಿತ ಶೂ ಪಾಲಿಷ್ ಸೇವೆ, ಕುಸ್ತಿ ಪಂದ್ಯಾವಳಿ!
ರೈತರಿಗಾಗಿ ಉಚಿತ ಶೂ ಪಾಲಿಷ್, ಕುಸ್ತಿ ಪಂದ್ಯಾವಳಿ!
Follow us on

ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್​ ರೈತರು ತಮ್ಮ ದೆಹಲಿ ಚಲೋ ಪ್ರತಿಭಟನೆಯಿಂದ ಹಿಂದೆ ಸರಿಯುವ ಯಾವುದೇ ಸೂಚನೆ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಏಳು ಬಾರಿ ಮಾತುಕತೆ ವಿಫಲವಾಗಿದೆ. ಆದರೂ ಕೃಷಿ ಕಾಯ್ದೆಯನ್ನ ಸಂಪೂರ್ಣವಾಗಿ ರದ್ದುಪಡಿಸುವವರೆಗೂ ಧರಣಿ ವಾಪಸ್​ ಪಡೆಯೋದಿಲ್ಲ ಎಂದು ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತ, ಘಾಜಿಪುರ್​ ಬಳಿ ಪ್ರತಿಭಟನಾ ನಿರತ ರೈತರ ನೆರವಿಗೆ ಹಲವರು ಮುಂದಾಗಿದ್ದಾರೆ. ಅನ್ನದಾತರ ಅಳಲನ್ನು ಸರ್ಕಾರ ಆಲಿಸುವವರೆಗೂ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಲು ಸ್ವಸಹಾಯಕರು ಮುಂದಾಗಿದ್ದಾರೆ.

ಹಾಗಾಗಿ, ಇಂದು ರೈತರಿಗೆ ಹತ್ತಿರದ ಗುರುದ್ವಾರ ಸಿಸ್​ ಗಂಜ್​ ಸಾಹೀಬ್​ನ ಸ್ವಸಹಾಯಕರು ಉಚಿತ ಶೂ ಪಾಲಿಷ್​ ಸೇವೆಯನ್ನು ಒದಗಿಸಿದರು. ನಮ್ಮ ರೈತ ಬಾಂಧವರು ಬಲು ದೂರದಿಂದ ಮಳೆ, ಚಳಿಯನ್ನು ಲೆಕ್ಕಿಸದೆ ಇಲ್ಲಿಯವರೆಗೆ ನಡೆದುಕೊಂಡೇ ಬಂದು ಧರಣಿ ನಡೆಸುತ್ತಿದ್ದಾರೆ. ಹೀಗಾಗಿ, ಕೆಸರಿನಲ್ಲಿ ಕೊಳಕಾದ ಅವರ ಶೂಗಳನ್ನು ಸ್ವಚ್ಛಗೊಳಿಸಿ, ಪಾಲಿಷ್​ ಮಾಡಲು ಬಂದಿದ್ದೇವೆ ಎಂದು ಸ್ವಸಹಾಯಕರೊಬ್ಬರು ಹೇಳಿದರು. ಜೊತೆಗೆ, ಅನ್ನದಾತರ ಋಣ ತೀರಿಸಲು ನಾವು ಇದನ್ನು ಮಾಡುತ್ತಿದ್ದೇವೆ ಎಂದು ಸಹ ಹೇಳಿದರು.

ಇದಲ್ಲದೆ, ರೈತರ ಮನರಂಜನೆಗಾಗಿ ಇಂದು ಘಾಜಿಪುರ್ ಬಳಿ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕುಸ್ತಿಪಟುಗಳ ಜಬರ್​ದಸ್ತ್​ ದಂಗಲ್​ನ ವೀಕ್ಷಿಸಿದ ರೈತರು ಸಖತ್​ ಖುಷಿಪಟ್ಟರು.

Published On - 11:54 pm, Sun, 10 January 21