G-20 Summit: ಅಡುಗೆಯಿಂದ ತೊಡಗಿ ಸಿರಿಧಾನ್ಯ ಕೃಷಿ ವರೆಗೆ ಹಲವು ಮಾಹಿತಿ ಪಡೆಯಲಿರುವ ಜಿ20 ದೇಶಗಳ ಮುಖ್ಯಸ್ಥರ ಪತ್ನಿಯರು

ಪ್ರಥಮ ಮಹಿಳೆಯರನ್ನು, ಸೆಪ್ಟೆಂಬರ್ 9 ರಂದು ಭಾರತದ ಪ್ರಸಿದ್ಧ ‘ಪೂಸಾ ಇನ್ಸ್ಟಿಟ್ಯೂಟ್' ಎಂದು ಜನಪ್ರಿಯವಾಗಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸಿರಿಧಾನ್ಯ ಫಾರ್ಮ್​​ಗೆ ಕರೆದೊಯ್ಯಲು ಸರ್ಕಾರ ನಿರ್ಧರಿಸಿದೆ. ಅಲ್ಲಿ ಅವರು ಸುಮಾರು 15 ನಿಮಿಷಗಳ ಕಾಲ ಅಲ್ಲಿರಲಿದ್ದು, ‘ಪೂಸಾ ಇನ್‌ಸ್ಟಿಟ್ಯೂಟ್‌'ನಲ್ಲಿ ಭಾರತದಲ್ಲಿ ಬೆಳೆಯುವ ಒಂಬತ್ತು ಬಗೆಯ ಸಿರಿಧಾನ್ಯ ಕುರಿತು ಮಾಹಿತಿ ಪಡೆಯಲಿದ್ದಾರೆ.

G-20 Summit: ಅಡುಗೆಯಿಂದ ತೊಡಗಿ ಸಿರಿಧಾನ್ಯ ಕೃಷಿ ವರೆಗೆ ಹಲವು ಮಾಹಿತಿ ಪಡೆಯಲಿರುವ ಜಿ20 ದೇಶಗಳ ಮುಖ್ಯಸ್ಥರ ಪತ್ನಿಯರು
ಜಿ-20 ಶೃಂಗಸಭೆ
Follow us
|

Updated on: Sep 05, 2023 | 3:10 PM

ನವದೆಹಲಿ, ಸೆಪ್ಟೆಂಬರ್ 5: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9-10 ರವರೆಗೆ ಜಿ-20 ಶೃಂಗಸಭೆ (G-20 Summit) ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ 20 ದೇಶಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ. ಅವರ ಜೊತೆಗೆ ಅವರ ಪತ್ನಿಯರೂ ಭಾರತಕ್ಕೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹಲವು ದೇಶಗಳಲ್ಲಿ ಮುಖ್ಯಸ್ಥರ ಪತ್ನಿಯರನ್ನು ಪ್ರಥಮ ಮಹಿಳೆ ಎಂದು ಕರೆಯಲಾಗುತ್ತದೆ. ಜಿ20 ದೇಶಗಳ ಮುಖ್ಯಸ್ಥರ ಜತೆ ಬರುವ ಅವರ ಪತ್ನಿಯರ ಬಗ್ಗೆಯೂ ಸರ್ಕಾರ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದೆ. ಭಾರತಕ್ಕೆ ಬರುವ ಎಲ್ಲಾ ಪ್ರಥಮ ಮಹಿಳೆಯರಿಗೆ ದೆಹಲಿಯಲ್ಲಿ ಎರಡು ದಿನಗಳ ಕಾಲ ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಇದರೊಂದಿಗೆ ಸಿರಿಧಾನ್ಯ ಅಥವಾ ಮಿಲೆಟ್, ಜೋಳ, ರಾಗಿ ಇತ್ಯಾದಿಗಳ ಬೆಳೆಯುವ ಕ್ಷೇತ್ರಗಳಿಗೆ ಅವರನ್ನು ಕರೆದೊಯ್ದು ಅವುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ವರದಿಗಳ ಪ್ರಕಾರ, ಒಂದೆಡೆ ಪ್ರಗತಿ ಮೈದಾನದ ಮಂಟಪದಲ್ಲಿ ಜಿ20 ರಾಷ್ಟ್ರಗಳ ಮುಖ್ಯಸ್ಥರು ಜಗತ್ತಿನ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದರೆ, ಅದೇ ಸಮಯದಲ್ಲಿ ಪ್ರಥಮ ಮಹಿಳೆಯರು ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಥಮ ಮಹಿಳೆಯರನ್ನು, ಸೆಪ್ಟೆಂಬರ್ 9 ರಂದು ಭಾರತದ ಪ್ರಸಿದ್ಧ ‘ಪೂಸಾ ಇನ್ಸ್ಟಿಟ್ಯೂಟ್’ ಎಂದು ಜನಪ್ರಿಯವಾಗಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸಿರಿಧಾನ್ಯ ಫಾರ್ಮ್​​ಗೆ ಕರೆದೊಯ್ಯಲು ಸರ್ಕಾರ ನಿರ್ಧರಿಸಿದೆ. ಇಡೀ ವಿಶ್ವವೇ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿರುವುದು ಗಮನಾರ್ಹ.

ಸಿರಿಧಾನ್ಯ ಬೇಸಾಯ ಮಾಡಲಿರುವ ನಾಯಕರ ಪತ್ನಿಯರು!

ಪ್ರಥಮ ಮಹಿಳೆಯರನ್ನು ಸಿರಿಧಾನ್ಯ ಫಾರ್ಮ್‌ಗೆ ಕರೆದೊಯ್ಯಲಾಗುತ್ತದೆ. ಅವರು ಸುಮಾರು 15 ನಿಮಿಷಗಳ ಕಾಲ ಅಲ್ಲಿರಲಿದ್ದು, ‘ಪೂಸಾ ಇನ್‌ಸ್ಟಿಟ್ಯೂಟ್‌’ನಲ್ಲಿ ಭಾರತದಲ್ಲಿ ಬೆಳೆಯುವ ಒಂಬತ್ತು ಬಗೆಯ ಸಿರಿಧಾನ್ಯ ಕುರಿತು ಮಾಹಿತಿ ಪಡೆಯಲಿದ್ದಾರೆ.

ಸಿರಿಧಾನ್ಯಗಳು ಅವುಗಳ ಪೋಷಕಾಂಶಗಳಿಗೆ ಹೆಸರುವಾಸಿಯಾಗಿದೆ. ಭಾರತ ಸರ್ಕಾರವು ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಸಿರಿಧಾನ್ಯಗಳೆಂದರೆ ಜೋಳ, ರಾಗಿ, ಕಂಗಣಿ, ಕುಟ್ಕಿ, ಕೊಡೋ, ಸಾವನ್ ಮತ್ತು ಚೆನಾ ಇತ್ಯಾದಿಗಳಾಗಿವೆ.

ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲ ರಾಜ್ಯಗಳಿಂದ ತಲಾ ಒಬ್ಬ ರೈತರನ್ನು ಆಹ್ವಾನಿಸಲಾಗಿದ್ದು, ಅವರು ಪ್ರಥಮ ಮಹಿಳೆಯರನ್ನು ಭೇಟಿಯಾಗಿ ಮಾತನಾಡುವ ಅವಕಾಶವನ್ನು ಪಡೆಯಲಿದ್ದಾರೆ. ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗುತ್ತದೆ.

ಇದನ್ನೂ ಓದಿ: G-20 Summit: ದೆಹಲಿಗೆ ಹೋಗುತ್ತಿದ್ದಿರಾ? ನವದೆಹಲಿ, ದೆಹಲಿ, ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ತೆರಳುವವರಿಗೆ ಇಲ್ಲಿದೆ ಸಲಹೆ

ಈ ಎಲ್ಲಾ ಸಿರಿಧಾನ್ಯಗಳ ಬಗ್ಗೆ ಪ್ರಥಮ ಮಹಿಳೆಯರಿಗೆ ವಿವರವಾದ ಮಾಹಿತಿಯನ್ನು ನೀಡಲಾಗುವುದು. ಅವುಗಳ ಪೋಷಕಾಂಶಗಳು ಮತ್ತು ಉಪಯುಕ್ತತೆಯ ಬಗ್ಗೆ ವಿವರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭದ್ರತಾ ಸಿಬ್ಬಂದಿ ಈಗಾಗಲೇ ಸಂಪೂರ್ಣ ಸಂಸ್ಥೆಯ ಮೇಲೆ ನಿಗಾ ಇರಿಸಿದ್ದಾರೆ. ಮೂಲಗಳ ಪ್ರಕಾರ, ಶಿಷ್ಟಾಚಾರದಂತೆ ಅನುಮತಿ ದೊರೆತರೆ, ಪ್ರಥಮ ಮಹಿಳೆಯರು ಸಿರಿಧಾನ್ಯದಿಂದ ತಯಾರಿಸಿದ ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ಅವಕಾಶ ನೀಡಬಹುದು ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ