AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sergey Lavrov: ಭಾರತದ ಕ್ಷಮೆ ಕೋರಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್

ಜಿ20 ಸಭೆಯಲ್ಲಿ ವಿವಿಧ ವಿದೇಶಾಂಗ ಸಚಿವರು ಪ್ರಮುಖ ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸಿದರು. ಅಮೆರಿಕ, ಪಾಶ್ಚಾತ್ಯ ದೇಶಗಳು ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಬಿರುಕು, ಉಕ್ರೇನ್​ ಯುದ್ಧಕ್ಕೆ ಸಂಬಂಧಿಸಿ ರಷ್ಯಾ-ಚೀನಾ ಮೈತ್ರಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

Sergey Lavrov: ಭಾರತದ ಕ್ಷಮೆ ಕೋರಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್
ಸೆರ್ಗೆ ಲಾವ್ರೊವ್Image Credit source: ANI
Ganapathi Sharma
|

Updated on: Mar 02, 2023 | 4:46 PM

Share

ನವದೆಹಲಿ: ಪಾಶ್ಚಾತ್ಯ ರಾಯಭಾರಿಗಳ ನಿಯೋಗಗಳ ಅಸಮರ್ಪಕವಲ್ಲದ ನಡವಳಿಕೆಗಳಿಗಾಗಿ ಭಾರತದ ಕ್ಷಮೆ ಯಾಚಿಸುತ್ತೇನೆ ಎಂದು ರಷ್ಯಾ (Russia) ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ (Sergey Lavrov) ಗುರುವಾರ ಹೇಳಿದರು. ಜಿ20 (G20 Meet) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಬಳಿಕ ಮಾತನಾಡಿದ ಅವರು, ಪಶ್ಚಿಮಾತ್ಯ ದೇಶಗಳ ನಿಯೋಗಗಳು ಜಿ20 ಕಾರ್ಯಸೂಚಿಯನ್ನು ಒಂದು ಪ್ರಹಸನವನ್ನಾಗಿ ಪರಿವರ್ತಿಸಿ ಅಸಭ್ಯ ನಡವಳಿಕೆ ಪ್ರದರ್ಶಿಸಿದರು. ಇದಕ್ಕಾಗಿ ಭಾರತದ ಮತ್ತು ದಕ್ಷಿಣದ ದೇಶಗಳ ಪ್ರತಿನಿಧಿಗಳ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.

ಜಿ20 ಸಭೆಯಲ್ಲಿ ವಿವಿಧ ವಿದೇಶಾಂಗ ಸಚಿವರು ಪ್ರಮುಖ ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸಿದರು. ಅಮೆರಿಕ, ಪಾಶ್ಚಾತ್ಯ ದೇಶಗಳು ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಬಿರುಕು, ಉಕ್ರೇನ್​ ಯುದ್ಧಕ್ಕೆ ಸಂಬಂಧಿಸಿ ರಷ್ಯಾ-ಚೀನಾ ಮೈತ್ರಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿದೇಶಾಂಹಗ ಸಚಿವ ಎಸ್. ಜೈಶಂಕರ್, ಅಮೆರಿಕದ ಆಂಟನಿ ಬ್ಲಿಂಕನ್, ಸೆರ್ಗೆ ಲಾವ್ರೊವ್, ಚೀನಾದ ಕ್ವಿನ್ ಗಾಂಗ್, ಬ್ರಿಟನ್​​ನ ಜೇಮ್ಸ್ ಕ್ಲೆವೆರ್ಲಿ ಹಾಗೂ ಯುರೋಪಿಯನ್ ಒಕ್ಕೂಟದ ವಿದೇಶಾಂಗ ಸಚಿವರ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಸಭೆಯಲ್ಲಿ ಭಾಗಿಯಾದರು.

ಜಿ20 ಸಭೆಯ ಪೂರ್ವಭಾವಿಯಾಗಿ ವಿವಿಧ ದೇಶಗಳ ವಿದೇಶಾಂಗ ಸಚಿವರ ಜತೆ ಜೈಶಂಕರ್ ಸಭೆ ನಡೆಸಿದ್ದರು. ಬುಧವಾರ ರಷ್ಯಾ ವಿದೇಶಾಂಗ ಸಚಿವರ ಜತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಬ್ರಿಟನ್​ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವೆರ್ಲಿ ಜತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: Volodymyr Zelensky: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ: ವೊಲೊಡಿಮಿರ್ ಝೆಲೆನ್ಸ್ಕಿ

ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು ಇಲ್ಲಿನ ಕಾನೂನನ್ನು ಪಾಲಿಸಲೇಬೇಕು. ಬಿಬಿಸಿ ಕೂಡ ಇದಕ್ಕೆ ಹೊರತಲ್ಲ ಎಂದು ಬ್ರಿಟನ್​​ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರಿಗೆ ಬುಧವಾರ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಎಸ್. ಜೈಶಂಕರ್ ಹೇಳಿದ್ದರು. ದ್ವಿಪಕ್ಷೀಯ ಮಾತುಕತೆ ವೇಳೆ  ಬಿಬಿಸಿ ಕಚೇರಿ ಮೇಲಿನ ಐಟಿ ದಾಳಿ ವಿಚಾರವಾಗಿ ಕ್ಲೆವರ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸ್ಪಷ್ಟವಾಗಿ ಜೈಶಂಕರ್ ಉತ್ತರ ನೀಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?