
ಬಹು ನಿರೀಕ್ಷಿತ G20 ಶೃಂಗಸಭೆ ಭಾನುವಾರ ಅಂತ್ಯವಾಗಿದೆ. ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಸುವುದರ ಕುರಿತಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಮುಂದಿನ ವರ್ಷ ಬ್ರೆಜಿಲ್ನಲ್ಲಿ ಜಿ20 ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಹಾಗಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾಗೆ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ. ವಿಶ್ವದ ಬಲಿಷ್ಠ ದೇಶಗಳ ನಾಯಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು. ಮೊದಲ ದಿನ ಜಿ20 ಒಕ್ಕೂಟಕ್ಕೆ ಆಫ್ರೀಕನ್ ಯೂನಿಯನ್ ಸೇರಿದ್ದು, ಬಳಿಕ ನಡೆದ ಅಧಿವೇಶಗಳಲ್ಲಿ ಒನ್ ಅರ್ಥ್ ಮತ್ತು ಒನ್ ಫ್ಯಾಮಿಲಿ ಬಗ್ಗೆ ಚರ್ಚೆ ನಡೆದಿತ್ತು. ಮೊದಲ ದಿನ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅದ್ಧೂರಿ ಔತನ ನೀಡಿದ್ದರು. ದೆಹಲಿಯ ಪ್ರಗತಿ ಮೈದಾನ್ ನಲ್ಲಿರುವ ಭಾರತ್ ಮಂಟಪ್ನಲ್ಲಿ ಸಭೆ ಆಯೋಜಿಸಲಾಗಿತ್ತು.
ಕೆನಡಾ ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಎಂಜಿನಿಯರಿಂಗ್ ತಂಡವು ಸಮಸ್ಯೆಯನ್ನು ಸರಿಪಡಿಸುತ್ತಿದ್ದಾರೆ. ಅಲ್ಲಿಯವರೆಗೂ ಕೆನಡಾದ ನಿಯೋಗವು ಭಾರತದಲ್ಲಿಯೇ ಉಳಿಯಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ದೆಹಲಿಯ ಭಾರತ್ ಮಂಟಪದಲ್ಲಿ ಡಿಜಿಟಲ್ ಇಂಡಿಯಾ ಪೆವಿಲಿಯನ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.
ಭಾರತದಲ್ಲಿ ಜಿ 20 ಹಿನ್ನೆಲೆ ದೆಹಲಿಯ ಭಾರತ್ ಮಂಟಪದಲ್ಲಿ ‘ಕರಕುಶಲ ಮೇಳ’ ವಸ್ತುಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿ, ವಿಕ್ಷಣೆ ಮಾಡಿದ್ದಾರೆ.
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಹಭಾಗಿತ್ವವು ಮಹಾತ್ಮ ಗಾಂಧಿಯವರ ಧರ್ಮದರ್ಶಿತ್ವದ ಪ್ರಧಾನ ತತ್ವದಲ್ಲಿ ಬೇರೂರಿದೆ. ಇಂದು ನಮ್ಮನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ 2 ದಿನಗಳ ಕಾಲ ನಡೆದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ಮಾಡಿ, ಧನ್ಯವಾದ ಹೇಳಿದ ಹೇಳಿದ್ದಾರೆ.
ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಅತ್ಯುತ್ತಮ ಭೇಟಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ನಾವು ಮಾತನಾಡಿದ್ದೇವೆ. ನಮ್ಮ ವ್ಯವಹಾರಗಳಿಗೆ ಸಹಕಾರದ ವ್ಯಾಪ್ತಿ ಅಪಾರವಾಗಿದೆ. ಶುದ್ಧ ಇಂಧನ, ಅರೆವಾಹಕಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಹೆಚ್ಚಿನವುಗಳಲ್ಲಿ ಬಲವಾದ ಸಂಬಂಧಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಟ್ವೀಟ್ ಮಾಡಿದ್ದು, ಭಾರತದೊಂದಿಗಿನ ಬಲವಾದ ಪಾಲುದಾರಿಕೆ ಯುರೋಪ್ಗೆ ಉಪಯುಕ್ತವಾಗಲಿದೆ. ನಮ್ಮ ಟ್ರೇಡ್ & ಟೆಕ್ ಕೌನ್ಸಿಲ್ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಿ ಸಂತೋಷವಾಗಿದೆ. ಭಾರತ – ಮಧ್ಯಪ್ರಾಚ್ಯ – ಯುರೋಪ್ ಆರ್ಥಿಕ ಕಾರಿಡಾರ್ ಎಂಬ ಐತಿಹಾಸಿಕ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ನಾವು ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಎದುರು ನೋಡುತ್ತಿದ್ದೇವೆ. ಜಿ 20 ಯ ನಿಮ್ಮ ಕೌಶಲ್ಯಯುತ ನಾಯಕತ್ವಕ್ಕೆ ಧನ್ಯವಾದಗಳು ಎಂದಿದ್ದಾರೆ.
ದೆಹಲಿಯಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಿ20 ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸುದ್ದಿಗೋಷ್ಠಿ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅವರನ್ನು ಜಿ 20 ಶೃಂಗಸಭೆಯ ಹೊರತಾಗಿ ಭೇಟಿಯಾಗಿದ್ದಾರೆ. ಒಲಾಫ್ ಶೋಲ್ಜ್ ಅವರೊಂದಿಗೆ ಸಭೆ ಮಾಡಿದ್ದು, ತಮ್ಮ ಅಭಿಪ್ರಾಯಗಳಿಂದ ಜಿ -20 ಶೃಂಗಸಭೆಯನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಜರ್ಮನಿ ಶುದ್ಧ ಇಂಧನ, ನಾವೀನ್ಯತೆ ಮತ್ತು ಉತ್ತಮ ಗ್ರಹದ ಕಡೆಗೆ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಜಿ -20 ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ, ಟರ್ಕಿ ಅಧ್ಯಕ್ಷ ಎರ್ಡೊಗನ್ ಅವರನ್ನು ಭೇಟಿ ಮಾಡಿದ್ದಾರೆ. ನಾವು ವಿವಿಧ ಕ್ಷೇತ್ರಗಳಲ್ಲಿ ಭಾರತ-ಕೆನಡಾ ಸಂಬಂಧಗಳ ಪೂರ್ಣ ಶ್ರೇಣಿಯ ಬಗ್ಗೆ ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಪಾನ್ ಪ್ರಧಾನಿ ಕಿಶಿಡಾ ಮೆಚ್ಚು ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಅರ್ಥಪೂರ್ಣ ಸಾಧನೆ. ನವದೆಹಲಿಯ ಜಿ 20 ಶೃಂಗಸಭೆಯ ಹಲವು ನಿರ್ಣಯಗಳನ್ನು ಸಮರ್ಥವಾಗಿ ಒಪ್ಪಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಯನ್ನು ಬೆಂಬಲಿಸುತ್ತೇವೆ. ಇದರಿಂದ ಅವು ಪ್ರಪಂಚದ ಪ್ರಸ್ತುತ ವಾಸ್ತವತೆಯನ್ನು ಪ್ರತಿಬಿಂಬಿಸುತ್ತವೆ. ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿದ ಅವರು, ಜಿ 20 ದೇಶಗಳು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಡಿದರು.
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದ್ದು, ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದಾಗ ಭಾರತವು ಶಾಂತಿ ಮತ್ತು ಏಕತೆಯ ಸಂದೇಶವನ್ನು ರವಾನಿಸಲು ಪ್ರಯತ್ನಿಸಿತ್ತು ಎಂದು ಹೇಳಿದ್ದಾರೆ.
ಜಿ 20 ಶೃಂಗಸಭೆ ಒಂದು ಮೈಲಿಗಲ್ಲು. ಸಭೆಯಲ್ಲಿ ಸಾಕಷ್ಟು ಉತ್ತಮ ಚರ್ಚೆಗಳಾಗಿದ್ದು, ಆರೋಗ್ಯಕರ ಪರಿಹಾರ ಕಂಡುಬಂದಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಹೇಳಿದ್ದಾರೆ.
ಜಿ 20 ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ 3 ಆದ್ಯತೆಗಳಿವೆ ಎಂದು ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಹೇಳಿದ್ದಾರೆ.
ನವೆಂಬರ್ನಲ್ಲಿ ಜಿ 20 ವರ್ಚುವಲ್ ಅಧಿವೇಶನ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. “ನವೆಂಬರ್ವರೆಗೆ ಜಿ 20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕೆ ಇದೆ. ಈ ಎರಡು ದಿನಗಳಲ್ಲಿ, ನೀವು (ವಿಶ್ವ ನಾಯಕರು) ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ ಮತ್ತು ವಿವಿಧ ಪ್ರಸ್ತಾಪಗಳನ್ನು ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರಿಸುವ ಮೂಲಕ ನವದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಮುಕ್ತಾಯಗೊಳಿಸಿದರು. ಹೀಗಾಗಿ ಮುಂದಿನ ಜಿ20 ದೇಶಗಳ ಶೃಂಗಸಭೆ ಬ್ರೆಜಿಲ್ನಲ್ಲಿ ನಡೆಯಲಿದೆ. ಇನ್ನು “ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಬಯಸುತ್ತೇನೆ” ಎಂದು ಜಿ20 ಶೃಂಗಸಭೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ನರೇಂದ್ರ ಮೋದಿ
ಜಗತ್ತಿನ 65 ದೇಶಗಳನ್ನು ಸಂಪರ್ಕಿಸುವ ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್ ಅನ್ನ ಜಿ20 ಸಭೆಯಲ್ಲಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, ಅದಕ್ಕೆ ಪರ್ಯಾಯವಾದ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ ಅನ್ನು ಘೋಷಿಸಿದೆ.
ದಕ್ಷಿಣ ಆಫ್ರಿಕಾದ ಜೊಡ್ವಾ ಲಲ್ಲಿಯ ಪ್ರತಿನಿಧಿ ಭಾರತ್ ಮಂಟಪದ ಕ್ರಾಫ್ಟ್ ಎಕ್ಸ್ಪೋಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಇದು ಅದ್ಭುತವಾಗಿದೆ. ಇದು ಕರಕುಶಲತೆಯ ಸಂಪೂರ್ಣ ಪ್ರದರ್ಶನ ಮತ್ತು ಕೈಯಿಂದ ತಯಾರಿಸಿದ ವಸ್ತುಗಳ ಸೌಂದರ್ಯ ನೋಡಿ ಖುಷಿಯಾಯಿತು ಎಂದರು.
G20 ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾತು.
ದೆಹಲಿಯಲ್ಲಿ ಜಿ20 ಶೃಂಗಸಭೆಯ 3ನೇ ಸಭೆ ನಡೆಯುತ್ತಿದೆ. ಒಂದು ಭವಿಷ್ಯ ವಿಚಾರವಾಗಿ ಸಭೆ ನಡೆಯಲಿದ್ದು ಜಗತ್ತಿನ ಬಲಿಷ್ಠ ನಾಯಕರು ಚರ್ಚಿಸಲಿದ್ದಾರೆ. ಜಿ20 ಶೃಂಗಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ ಆಗಲಿದ್ದು ಹಲವು ಒಪ್ಪಂದಗಳಿಗೆ ಒಪ್ಪಿಗೆ ಸಿಗಲಿದೆ. ಮುಂದಿನ G20 ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ ಆಗಲಿದೆ.
ಜಿ20 ಶೃಂಗಸಭೆ ಮುಗಿಸಿದ ನಂತರ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ದೆಹಲಿಯಿಂದ ವಿಯೆಟ್ನಾಂಗೆ ತೆರಳಿದರು.
ಇಂದು ಮುಂಜಾನೆ ಅಕ್ಷರಧಾಮಕ್ಕೆ ರಿಷಿ ಸುನಕ್ ದಂಪತಿ ಭೇಟಿ ನೀಡಿದರು.
ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರು ಭೇಟಿ ನೀಡಿದ್ದಾರೆ. ಅಕ್ಷರಧಾಮದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅತಿಥಿಗಳನ್ನು ಸ್ವಾಗತಿಸಿದರು. ಆತಿಥ್ಯದ ಸಂಕೇತವಾಗಿ ರುದ್ರಾಕ್ಷಿ, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾ ನೀಡಿ ಗೌರವಿಸಲಾಯಿತು. ರಿಷಿ ಸುನಕ್ ದಂಪತಿ ದೇವಸ್ಥಾನದಲ್ಲಿ ಆರತಿ ಮಾಡಿದರು. ಅಕ್ಷರಧಾಮದ ಸಂತರನ್ನು ಭೇಟಿ ಮಾಡಿ ಕೆಲ ಹೊತ್ತು ಸಮಾಲೋಚನೆ ನಡೆಸಿದರು.
ದೆಹಲಿಯ ರಾಜ್ಘಾಟ್ಗೆ ಜಿ20 ದೇಶಗಳ ನಾಯಕರು ಭೇಟಿ ನೀಡಿದ್ದು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು. ರಾಜ್ಘಾಟ್ನ ಗಾಂಧೀಜಿ ಸಮಾಧಿ ಬಳಿ ಶಾಂತಿಗೀತೆ ಗಾಯನದಲ್ಲಿ ಭಾಗಿಯಾದ್ರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ದೇಶಗಳ ಶೃಂಗಸಭೆ ನಡೆಯುತ್ತಿದೆ. ರಾಜ್ಘಾಟ್ಗೆ ಜಿ20 ದೇಶಗಳ ನಾಯಕರು ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ20 ದೇಶಗಳ ನಾಯಕರನ್ನು ಸ್ವಾಗತಿಸುತ್ತಿದ್ದಾರೆ. ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಅತಿಥಿಗಳು ನಮಿಸಿದ್ದಾರೆ.
ದೆಹಲಿಯ ಅಕ್ಷರಧಾಮಕ್ಕೆ ಇಂದು ಪತ್ನಿ ಅಕ್ಷತಾ ಜೊತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ ನೀಡಿದರು. ಪತ್ನಿ ಅಕ್ಷತಾ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇಂದು ಬೆಳಗ್ಗೆ 8.15ಕ್ಕೆ ರಾಜ್ಘಾಟ್ಗೆ ತೆರಳಲಿರುವ ಅತಿಥಿಗಳು
ಇಂದು ಬೆಳಗ್ಗೆ 9 ಗಂಟೆವರೆಗೆ ರಾಜ್ಘಾಟ್ಗೆ ಆಗಮಿಸುವ ಅತಿಥಿಗಳು
ಇಂದು ಬೆಳಗ್ಗೆ 9ರಿಂದ 9.20ರವರೆಗೆ ಗಾಂಧಿ ಸಮಾಧಿಗೆ ಅತಿಥಿಗಳ ನಮನ
ರಾಜ್ಘಾಟ್ನ ಮಹಾತ್ಮ ಗಾಂಧಿ ಸಮಾಧಿ ಬಳಿ ಶಾಂತಿ ಗೀತೆ ಗಾಯನ
ನಂತರ ‘ಭಾರತ್ ಮಂಟಪಂ’ನತ್ತ ತೆರಳಲಿರುವ ಅತಿಥಿಗಳು
ಬೆಳಗ್ಗೆ 9.40ರಿಂದ 10.15ರವರೆಗೆ ಭಾರತ್ ಮಂಟಪಂಗೆ ಆಗಮನ
ಬೆಳಗ್ಗೆ 10.15-10.30ರವರೆಗೆ G20 ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ
ಭಾರತ್ ಮಂಟಪಂ ಆವರಣದ ಸೌತ್ ಪ್ಲಾಜಾದಲ್ಲಿ ಸಸಿ ನೆಡುವ ಕಾರ್ಯಕ್ರಮ
ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಜಿ20 ಶೃಂಗಸಭೆಯ 3ನೇ ಸಭೆ
‘ಒಂದು ಭವಿಷ್ಯ’ ವಿಚಾರವಾಗಿ ನಡೆಯಲಿರುವ ಸಭೆ
ಜಿ20 ಶೃಂಗಸಭೆಯ ಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ, ಒಪ್ಪಿಗೆ
ಮುಂದಿನ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ
Published On - 8:30 am, Sun, 10 September 23