ನವದೆಹಲಿ: ಗಣೇಶನ ವಿಗ್ರಹಗಳನ್ನು (Ganesha Idols) ಮುಳುಗಿಸುವಾಗ 6 ಜನರು ನೀರಿನಲ್ಲಿ ಮುಳುಗಿರುವ ದುರಂತ ಘಟನೆ ಶುಕ್ರವಾರ ಸಂಜೆ ಹರಿಯಾಣದ (Haryana) ಮಹೇಂದರ್‌ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹೇಂದರ್‌ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದ್ದು, ಇಬ್ಬರು ಸೋನಿಪತ್‌ನ ಯಮುನಾ ನದಿಯಲ್ಲಿ (Yamuna River) ಮುಳುಗಿ ಸಾವನ್ನಪ್ಪಿದ್ದಾರೆ.
ಮಹೇಂದರ್‌ಗಢ್ ಘಟನೆಯ ಬಗ್ಗೆ ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೀರಿನಲ್ಲಿ ಮುಳುಗಿದ್ದ ನಾಲ್ಕು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಸುಮಾರು 7 ಅಡಿಯ ಗಣಪತಿಯ ವಿಗ್ರಹವನ್ನು ನೀರಿನಲ್ಲಿ ಬಿಡಲು ಕೊಂಡೊಯ್ಯುತ್ತಿದ್ದಾಗ ಮಹೇಂದರ್‌ಗಢದಲ್ಲಿ ಕಾಲುವೆಯಲ್ಲಿ 9 ಯುವಕರು ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಎನ್‌ಡಿಆರ್‌ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ನಾಲ್ವರು ಮೃತಪಟ್ಟಿದ್ದು, ಇತರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಭಾರಿ ಮಳೆಗೆ ಮುಳುಗಿದ ಸ್ಮಶಾನ: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ 2 ದಿನ ಮನೆಯಲ್ಲೇ ಉಳಿದ ಮೃತದೇಹ
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದು, “ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಅನೇಕ ಜನರು ಮೃತಪಟ್ಟಿರುವ ಸುದ್ದಿ ಕೇಳಿ ಮನಸು ಭಾರವಾಗಿದೆ” ಎಂದು ಹೇಳಿದ್ದಾರೆ.
महेंद्रगढ़ और सोनीपत जिले में गणपति विसर्जन के दौरान नहर में डूबने से कई लोगों की असामयिक मृत्यु का समाचार हृदयविदारक है।
इस कठिन समय में हम सभी मृतकों के परिजनों के साथ खड़े हैं।
NDRF की टीम ने कई लोगों को डूबने से बचा लिया है, मैं उनके शीघ्र स्वस्थ होने की प्रार्थना करता हूँ।
— Manohar Lal (@mlkhattar) September 9, 2022
“ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಮೃತಪಟ್ಟವರ ಕುಟುಂಬಗಳೊಂದಿಗೆ ನಿಂತಿದ್ದೇವೆ. NDRF ತಂಡವು ಅನೇಕ ಜನರನ್ನು ನೀರಿನಿಂದ ರಕ್ಷಿಸಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಮನೋಹರ್ ಲಾಲ್ ಖಟ್ಟರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Published On - 8:30 am, Sat, 10 September 22