AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಾಷೆಗೆ ಗುದನಾಳದಲ್ಲಿ ಗಾಳಿ ಪಂಪ್ ಮಾಡಿದ ಸಹೋದ್ಯೋಗಿ; ಕುಸಿದುಬಿದ್ದು ವ್ಯಕ್ತಿ ಸಾವು

ಹಿಟ್ಟಿನ ಗಿರಣಿಯಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಂಪ್ರೆಸರ್ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದರಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತಮಾಷೆಗೆ ಗುದನಾಳದಲ್ಲಿ ಗಾಳಿ ಪಂಪ್ ಮಾಡಿದ ಸಹೋದ್ಯೋಗಿ; ಕುಸಿದುಬಿದ್ದು ವ್ಯಕ್ತಿ ಸಾವು
ಪೊಲೀಸ್Image Credit source: India.com
TV9 Web
| Updated By: ಸುಷ್ಮಾ ಚಕ್ರೆ|

Updated on:Sep 10, 2022 | 10:21 AM

Share

ಭೂಪಾಲ್: ಮಧ್ಯಪ್ರದೇಶದ (Madhya Pradesh) ಸತ್ನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು (Shocking News) ನಡೆದಿದ್ದು, ಧೂಳನ್ನು ಸ್ವಚ್ಛಗೊಳಿಸಲು ಬಳಸುವ ಕಂಪ್ರೆಸರ್ ಮೂಲಕ ಸಹೋದ್ಯೋಗಿಯೊಬ್ಬರು ವ್ಯಕ್ತಿಯ ಗುದನಾಳಕ್ಕೆ ಗಾಳಿಯನ್ನು ಪಂಪ್ ಹಿನ್ನೆಲೆಯಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತರನ್ನು ಲಲ್ಲು ಸಿಂಗ್ ಠಾಕೂರ್ ಎಂದು ಗುರುತಿಸಲಾಗಿದೆ.

ಕೋಲ್ಗಾವಾನ್‌ನ ಹಿಟ್ಟಿನ ಗಿರಣಿಯಲ್ಲಿ ಆಗಸ್ಟ್ 31ರಂದು ಈ ಘಟನೆ ನಡೆದಿದೆ. ಜೊತೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಂಪ್ರೆಸರ್ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದರಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೃತ ವ್ಯಕ್ತಿ ಮನೆಗೆ ಹೊರಡುವ ಮೊದಲು ಏರ್ ಕಂಪ್ರೆಸರ್‌ನಿಂದ ಮೈಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಪತಿ

ಹಿಟ್ಟಿನ ಗಿರಣಿಯ ಕಾರ್ಮಿಕರು ಆ ಜಾಗವನ್ನು ಸ್ವಚ್ಛಗೊಳಿಸಲು ಹೆಚ್ಚಿನ ಒತ್ತಡದ ಏರ್ ಕಂಪ್ರೆಸರ್ ಅನ್ನು ಬಳಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 24 ವರ್ಷದ ಗಬ್ಬರ್ ಕೋಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರ ಪ್ರಕಾರ, ಲಲ್ಲು ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾಗ, ತನ್ನ ಬೆನ್ನನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವಂತೆ ಸಹೋದ್ಯೋಗಿ ಕೋಲ್​ಗೆ ಮನವಿ ಮಾಡಿದ್ದರು. ಆಗ ಆತ ಒತ್ತಡದ ಪಂಪ್ ಅನ್ನು ಅವನ ಗುದನಾಳಕ್ಕೆ ಹಾಕಿದ್ದರಿಂದ ಲಲ್ಲು ಕುಸಿದು ಬಿದ್ದಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 2ರಂದು ಅವರು ನಿಧನರಾದರು. ಆರೋಪಿಗಳು ತಮಾಷೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಲಲ್ಲು ಅವರ ಗುದನಾಳದಲ್ಲಿ ಗಾಳಿ ತುಂಬಿದ ತಕ್ಷಣ ಅವರು ಕೆಳಗೆ ಬೀಳುವುದನ್ನು ಕಾಣಬಹುದು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 am, Sat, 10 September 22