ಮುಂಬೈ: 21 ವರ್ಷದ ಯುವತಿಯೊಬ್ಬಳು ತನ್ನ 11 ವರ್ಷದ ಗೆಳತಿಯ ಮೇಲೆ ಅತ್ಯಾಚಾರ (Rape) ನಡೆಸಲು ಮೂವರು ಪುರುಷರನ್ನು ಕರೆದುಕೊಂಡು ಬಂದಿದ್ದು, ಆಕೆಯ ಸಂಚಿನಿಂದಾಗಿ ಆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಲಾಗಿದೆ. ಬುಧವಾರ ಮುಂಜಾನೆ ಮುಂಬೈನ (Mumbai) ವಿರಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಸೇರಿದಂತೆ 21 ವರ್ಷದ ಮಹಿಳೆಯನ್ನು 6 ಗಂಟೆಗಳಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 7 ಗಂಟೆಗೆ 11 ವರ್ಷದ ಬಾಲಕಿ ತನ್ನ ಮೊಬೈಲ್ ಫೋನ್ ರಿಪೇರಿ ಮಾಡಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಅಲ್ಲಿ ಆಕೆ ತನ್ನ 21 ವರ್ಷದ ಗೆಳತಿಯನ್ನು ಭೇಟಿಯಾದಳು. ಆಗ ಆಕೆ ಆ ಬಾಲಕಿಯನ್ನು ವಾಕಿಂಗ್ಗೆಂದು ಕರೆದುಕೊಂಡು ಹೋದಳು. ಆಗ ಅಲ್ಲಿಗೆ ಮೂವರು ಪುರುಷರನ್ನು ಬರಲು ಹೇಳಿದ ಆ ಯುವತಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಸೂಚಿಸಿದ್ದಾಳೆ.
ಇದನ್ನೂ ಓದಿ: ಅತ್ಯಾಚಾರ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯಿಂದಾಗಿಯೇ ಸಂತ್ರಸ್ತರ ಹತ್ಯೆಗಳು ಹೆಚ್ಚಾಗಿದ್ದು: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅಲ್ಲಿಗೆ ತನ್ನ ಮೂವರು ಸ್ನೇಹಿತರನ್ನು ಕರೆಸಿಕೊಂಡಿದ್ದಾಳೆ. ಅವರು ಮಧ್ಯರಾತ್ರಿಯ ನಂತರ ಆ ಸ್ಥಳಕ್ಕೆ ತಲುಪಿದ್ದಾರೆ. ಮುಂಬರುವ ಗಣೇಶ ಹಬ್ಬಕ್ಕಾಗಿ ಸ್ಥಾಪಿಸಲಾದ ಪೆಂಡಾಲ್‌ನ ಹಿಂದಿನ ಸ್ಥಳಕ್ಕೆ ಹುಡುಗಿಯನ್ನು ಕರೆದೊಯ್ದು ಅಲ್ಲಿ ಒಬ್ಬರಾದ ನಂತರ ಒಬ್ಬರು ಅತ್ಯಾಚಾರ ನಡೆಸಿದ್ದಾರೆ.
ಈ ವಿಷಯವನ್ನು ಯಾರಿಗೂ ಹೇಳದಂತೆ ಅವರು ಆ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅಲ್ಲಿದ್ದ ಪುರುಷರಲ್ಲಿ ಒಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಆಕೆ ಒಪ್ಪದಿದ್ದಾಗ ಮೂವರು ಗಂಡಸರು ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದಾರೆ. ಬಾಲಕಿಯ ಸ್ನೇಹಿತೆ ಅಲ್ಲೇ ನಿಂತು ಈ ಲೈಂಗಿಕ ದೌರ್ಜನ್ಯವನ್ನು ವೀಕ್ಷಿಸಿದ್ದಾಳೆ. ಬುಧವಾರ ಮುಂಜಾನೆ ಆ ಬಾಲಕಿಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: Rape Case: 10 ರೂ. ಆಮಿಷವೊಡ್ಡಿ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ
ಬಾಲಕಿ ಮನೆಗೆ ಬಂದು ನಡೆದ ಘಟನೆಯನ್ನು ವಿವರಿಸಿದಾಗ, ಆಕೆಯ ತಾಯಿ ವಿರಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಆರೋಪಿಯನ್ನು ಹಿಡಿಯಲು ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ಆರೋಪಿ ಯುವತಿಯ ಜಾಡು ಹಿಡಿದಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿಗಳಲ್ಲಿ ಒಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಮತ್ತೊಬ್ಬ ತರಕಾರಿ ವ್ಯಾಪಾರಿ, ಇನ್ನೊಬ್ಬಾತ ಡ್ರಗ್ ಡೀಲರ್ ಆಗಿದ್ದ. ಮೂವರನ್ನೂ 6 ಗಂಟೆಗಳೊಳಗೆ ಬಂಧಿಸಲಾಗಿದೆ.