ಗಂಗೆಯ ಪಾವಿತ್ರ್ಯಕ್ಕೆ ಸಾಟಿಯೆಲ್ಲಿ! : ಸಾಲುಸಾಲುಗಳು ಶವಗಳು ತೇಲಿಬಂದಿದ್ದರೂ ನದಿಯಲ್ಲಿ ಇಲ್ಲ ಕೊರೊನಾ ಸೋಂಕಿನ ಅಂಶ

ಲಖನೌದ ಬೀರ್ಬಲ್​ ಸಾಹ್ನಿ ಇನ್​ಸ್ಟಿಟ್ಯೂಟ್ ಆಫ್​ ಪ್ಯಾಲಿಯೋಸೈನ್ಸ್​ ವಿಜ್ಞಾನಿಗಳು ಇತ್ತೀಚೆಗೆ ಲಖನೌನಲ್ಲಿ ಗೋಮತಿ ನದಿ ನೀರಿನ ಪರಿಶೀಲನೆ ನಡೆಸಿದಾಗ ಅದರಲ್ಲಿ ಕೊರೊನಾ ವೈರಸ್​ನ ಕುರುಹು ಕಾಣಿಸಿಕೊಂಡಿತ್ತು.

ಗಂಗೆಯ ಪಾವಿತ್ರ್ಯಕ್ಕೆ ಸಾಟಿಯೆಲ್ಲಿ! : ಸಾಲುಸಾಲುಗಳು ಶವಗಳು ತೇಲಿಬಂದಿದ್ದರೂ ನದಿಯಲ್ಲಿ ಇಲ್ಲ ಕೊರೊನಾ ಸೋಂಕಿನ ಅಂಶ
ಗಂಗಾ ನದಿ
Edited By:

Updated on: Jul 08, 2021 | 6:58 PM

ಕೊವಿಡ್​ 19 ಎರಡನೇ ಅಲೆ ಉಲ್ಬಣದ ಹೊತ್ತಲ್ಲಿ ಗಂಗಾನದಿಯಲ್ಲಿ ಸಾಲುಸಾಲು ಹೆಣಗಳು ತೇಲಿಬಂದು ಆತಂಕ ಸೃಷ್ಟಿಸಿತ್ತು. ಹೀಗೆ ಕೊವಿಡ್​ 19 ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲಿಬರುವುದು ಜಾಸ್ತಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೂಡ ಸ್ಥಳೀಯ ಆಡಳಿತಕ್ಕೆ ಖಡಕ್​ ಎಚ್ಚರಿಕೆ ಕೊಟ್ಟಿತ್ತು. ಈ ಮಧ್ಯೆಯೂ ಒಂದು ಒಳ್ಳೆ ಸುದ್ದಿ ಏನೆಂದರೆ, ಹೀಗೆ ರಾಶಿರಾಶಿ ಕೊವಿಡ್​ 19 ಸೋಂಕಿತ ಹೆಣಗಳು ತೇಲಿಬಂದ ನಂತರವೂ ಗಂಗೆ ತನ್ನ ಪಾವಿತ್ರ್ಯತೆ ಉಳಿಸಿಕೊಂಡಿದೆ. ಅದರ ನೀರಿನಲ್ಲಿ ಕೊರೊನಾ ಸೋಂಕಿನ ಚೂರೇಚೂರು ಅಂಶವೂ ಉಳಿದಿಲ್ಲ.

ಲಖನೌದ ಬೀರ್ಬಲ್​ ಸಾಹ್ನಿ ಇನ್​ಸ್ಟಿಟ್ಯೂಟ್ ಆಫ್​ ಪ್ಯಾಲಿಯೋಸೈನ್ಸ್​ ವಿಜ್ಞಾನಿಗಳು ಇತ್ತೀಚೆಗೆ ಲಖನೌನಲ್ಲಿ ಗೋಮತಿ ನದಿ ನೀರಿನ ಪರಿಶೀಲನೆ ನಡೆಸಿದಾಗ ಅದರಲ್ಲಿ ಕೊರೊನಾ ವೈರಸ್​ನ ಕುರುಹು ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಲಕ್ನೋದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು), ವಾರಾಣಸಿ ಮತ್ತು ಬಿರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೊ ಸೈನ್ಸಸ್ (ಬಿಎಸ್‌ಐಪಿ) ಯ ವೈದ್ಯಕೀಯ ಮತ್ತು ಆನುವಂಶಿಕ ತಜ್ಞರ ತಂಡ ಸತತ ಎರಡು ತಿಂಗಳ ಕಾಲ ಗಂಗಾ ನದಿ ನೀರಿನ ಮೇಲೆ ಸಂಶೋಧನೆ ನಡೆಸಿತ್ತು. ಆದರೆ ಗಂಗಾ ನದಿಯಲ್ಲಿ ಕೊರೊನಾ ಸೋಂಕಿನ ಲವಲೇಶವೂ ಕಾಣಿಸಿಲ್ಲ ಎಂದು ವರದಿ ನೀಡಿದ್ದಾರೆ.

ಗೋಮತಿ ನದಿ ನೀರಿನಲ್ಲಿ ಕಳೆದ ಬಾರಿಯೂ ಕೊರೊನಾ ಕುರುಹು ಕಾಣಿಸಿಕೊಂಡಿತ್ತು. ಈ ಬಾರಿ ಮೇ ತಿಂಗಳಲ್ಲಿ ನದಿ ನೀರಿನ ಮಾದರಿ ಪರಿಶೀಲನೆ ಮಾಡಿದಾಗಲೂ ಪಾಸಿಟಿವ್​ ವರದಿ ಬಂದಿತ್ತು. ಆದರೆ ಗಂಗಾನದಿ ನೀರಿನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿಲ್ಲ. ಇದು ನಿಜಕ್ಕೂ ಅಚ್ಚರಿಯ ವಿಚಾರ ಎಂದು ಬಿಎಸ್​​ಐಪಿ ವಿಜ್ಞಾನಿ ನೀರಜ್​ ರೈ ತಿಳಿಸಿದ್ದಾರೆ.

ಇದನ್ನೂ ಓದಿ: Modi Cabinet Reshuffle: ನೂತನ ಕ್ರೀಡಾ ಸಚಿವರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅಧಿಕಾರ ಸ್ವೀಕಾರ

Ganga River is Covid 19 Free Declared By Scientists