K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ

ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿ ಯುವ ರಾಜಕಾರಣಿಯಾಗಬಲ್ಲರು ಅನ್ನುತ್ತಿದೆ ತಮಿಳುನಾಡು ಬಿಜೆಪಿ ವಲಯ.

K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ
ಅಣ್ಣಾಮಲೈ
Follow us
| Edited By: guruganesh bhat

Updated on:Jul 08, 2021 | 7:47 PM

ದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು  ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಈ ಕುರಿತು ಬಿಜೆಪಿ ಹೈಕಮಾಂಡ್  ಅಧಿಕೃತ ಆದೇಶ ಹೊರಡಿಸಿದೆ .ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ ಅವರಿಗೆ ಇದೀಗ ಮಹತ್ವದ ಹುದ್ದೆ ದೊರೆತಂತಾಗಿದೆ.

2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ ಬಿಜೆಪಿ ಪಕ್ಷವು ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್​ ಮುರುಗನ್ (Dr. L. Murugan)​ ಅವರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಖಾತೆ ಸಚಿವರನ್ನಾಗಿ (MoS Ministry of Fisheries, Animal Husbandry and Dairying) ಪ್ರಧಾನಿ ಮೋದಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಕೆ. ಅಣ್ಣಾಮಲೈ ಉಚಿತ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಅದಂತೆಯೇ ಅಣ್ಣಾಮಲೈ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೋಲುಂಡ ಅಣ್ಣಾಮಲೈಗೂ ಬೇಕಿದೆ ಪೊಲಿಟಿಕಲ್​ ಟಾನಿಕ್: ಕಳೆದ ವಿಧಾಸನಭೆ ಚುನಾವಣೆಯಲ್ಲಿ ಪಕ್ಷ ಮತ್ತು ವೈಯಕ್ತಿವಾಗಿ ಸೋಲುಂಡ ಅಣ್ಣಾಮಲೈ (K Annamalai) ಒಂದಷ್ಟು ಭ್ರಮನಿರಸಗೊಂಡಿರುವುದಂತೂ ದಿಟ. ಆದರೆ ಅವರೊಬ್ಬ ಸಮರ್ಥ ನಾಯಕ ರೂಪುಗೊಳ್ಳುತ್ತಿದ್ದಾನೆ ಅನ್ನುತ್ತಿದೆ ತಮಿಳುನಾಡು ಬಿಜೆಪಿ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಕಟ್ಟುವಲ್ಲಿ ಕಟ್ಟಾಳಾಗಿ ಅಣ್ಣಾಮಲೈರನ್ನು ತೊಡಗಿಸಬಹುದು ಎಂಬುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ಅನಿವಾರ್ಯವಾಗಿ ಅದು ದಿಲ್ಲಿ ನಾಯಕರ ಅನಿಸಿಕೆಯೂ ಆಗಿರಬಹುದು. ಹಾಗಾಗಿ ಸದ್ಯದಲ್ಲೆ ಮಾಜಿ ಐಪಿಎಸ್​ ಕೆ. ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ (TN BJP) ಒಲಿದು ಬಂದರೆ ಅಚ್ಚರಿಯಿಲ್ಲ.

ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿ ಯುವ ರಾಜಕಾರಣಿಯಾಗಬಲ್ಲರು ಅನ್ನುತ್ತಿದೆ ತಮಿಳುನಾಡು ಬಿಜೆಪಿ ವಲಯ.

ಇದನ್ನೂ ಓದಿ:

 K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?

Tamil Nadu Elections 2021: ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ: ಬಿಜೆಪಿ ಅಭ್ಯರ್ಥಿ;ಸಿಂಗಂ; ಅಣ್ಣಾಮಲೈ

(K Annamalai appointed as Tamil Nadu BJP President after PM Narendra Modi cabinet expansion)

Published On - 7:39 pm, Thu, 8 July 21

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ