AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Elections 2021: ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ: ಬಿಜೆಪಿ ಅಭ್ಯರ್ಥಿ ‘ಸಿಂಗಂ’ ಅಣ್ಣಾಮಲೈ

K Annamalai : ಚುನಾವಣಾ ಫಲಿತಾಂಶ ಏನೇ ಆಗಿರಲಿ, ನಾನು ರಾಜಕಾರಣ ಮುಂದುವರಿಸುವೆ. ನಾನು ಒಂದು ಬಾರಿ ಸ್ಪರ್ಧಿಸುವುದಕ್ಕಾಗಿ ಐಪಿಎಸ್ ತೊರೆದಿಲ್ಲ. ನಾನು ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಬಯಸುತ್ತೇನೆ ಎಂದಿದ್ದಾರೆ ಅಣ್ಣಾಮಲೈ.

Tamil Nadu Elections 2021: ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ: ಬಿಜೆಪಿ ಅಭ್ಯರ್ಥಿ 'ಸಿಂಗಂ' ಅಣ್ಣಾಮಲೈ
ಚುನಾವಣಾ ಪ್ರಚಾರದಲ್ಲಿ ಅಣ್ಣಾಮಲೈ
ರಶ್ಮಿ ಕಲ್ಲಕಟ್ಟ
|

Updated on: Mar 23, 2021 | 4:20 PM

Share

ಚೆನ್ನೈ: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಿಂಗಂ ಅಣ್ಣಾಮಲೈ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದೆ ಎಂಬುದು ಗೊತ್ತು. ಈ ಹಿಂದೆ ಇಲ್ಲಿ ಹಣ ಪ್ರಧಾನ ಪಾತ್ರ ವಹಿಸುತ್ತಿತ್ತು. ನಮ್ಮ ಚುನಾವಣಾ ಕ್ಷೇತ್ರದಲ್ಲಿ ಪ್ರಾಮಾಣಿಕ ರಾಜಕಾರಣವನ್ನು ತರಲು ನಾನು ಬಯಸುತ್ತೇನೆ. ಹಾಗಾಗಿಯೇ ನಾನು ಅರವಕುರಿಚಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ ಎಂದು ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈ ಜತೆ ಭರ್ಜರಿ ಪ್ರಚಾರ ಮಾಡುವಂತೆ ಎಐಎಡಿಎಂಕೆಯ ಪ್ರಮುಖ ನಾಯಕರು ಸ್ಥಳೀಯ ನಾಯಕರಿಗೆ ಹೇಳಿದ್ದಾರೆ. ಅಲ್ಲಿನ ಸ್ಥಳೀಯ ಎಐಎಡಿಎಂಕೆ ನಾಯಕರೊಂದಿಗೆ ಅಣ್ಣಾಮಲೈ ತಮ್ಮ ಚುನಾವಣಾ ಕ್ಷೇತ್ರದ ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಿದ್ದಾರೆ. ಪ್ರತಿದಿನ ಕನಿಷ್ಟ 25-30 ಸಭೆಗಳಲ್ಲಿ ಭಾಗಿಯಾಗುತ್ತಾಕೆ. ಸಾವಿರಾರು ಯುವಜನರನ್ನು ಭೇಟಿ ಮಾಡುತ್ತಾರೆ, ಸೆಲ್ಫಿಗೆ ಪೋಸ್ ಕೊಡುತ್ತಾರೆ.

ತಾನು ಚುನಾವಣೆಯಲ್ಲಿ ಗೆದ್ದರೆ ಜನರಿಗಾಗಿ ಏನೆಲ್ಲಾ ಮಾಡುತ್ತೇನೆ ಎಂಬುದರ ಬಗ್ಗೆ ಅಣ್ಣಾಮಲೈ ಜನರಿಗೆ ಚೊಕ್ಕವಾಗಿ ವಿವರಿಸುತ್ತಾರೆ. ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಆ ಹುದ್ದೆ ತೊರೆದು ರಾಜಕೀಯಕ್ಕಿಳಿದಿರುವ ನಿರ್ಧಾರವನ್ನು ಹಲವಾರು ಮಂದಿ ಮೆಚ್ಚಿದ್ದಾರೆ.

‘ಇಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಆದರೆ ಅಣ್ಣಾಮಲೈ ಸ್ಥಳೀಯ ಹೀರೊ. ಐಪಿಎಸ್ ಹುದ್ದೆ ತೊರೆದು ಬಿಜೆಪಿ ಟಿಕೆಟ್ ನಿಂದ ಇಲ್ಲಿ ಯಾರು ಸ್ಪರ್ಧಿಸುತ್ತಾರೆ? ಅವರು ದೊಡ್ಡಮಟ್ಟದ ರಿಸ್ಕ್ ತೆಗೆದುಕೊಂಡಿದ್ದಾರೆ. ಎಐಎಡಿಎಂಕೆ ಮೈತ್ರಿಕೂಟದ ಪ್ರತಿನಿಧಿ. ಅವರ ವ್ಯಕ್ತಿತ್ವ, ನಡವಳಿಕೆ, ವಯಸ್ಸು, ಐಪಿಎಸ್  ಹಿನ್ನೆಲೆ ಎಲ್ಲವೂ ಯುವಜನಾಂಗ ಮತ್ತು ಮಹಿಳೆಯರನ್ನು ಆಕರ್ಷಿಸಿದೆ’ ಎಂದು 21ರ ಹರೆಯದ ಶಿವ ಎಂಬ ಮತದಾರ ಅಭಿಪ್ರಾಯ ಪಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಖಾಕಿ ಯುನಿಫಾರಂ ತೊಟ್ಟು ಕರ್ತವ್ಯ ನಿರತರಾಗಿದ್ದ ಐಪಿಎಸ್ ಅಧಿಕಾರಿ ಈಗ ಬಿಳಿ ಧೋತಿ, ಹಾಫ್ ಸ್ಲೀವ್ ಶರ್ಟ್ ಧರಿಸಿ ಕೈಯಲ್ಲಿ ಮೈಕ್ರೊಫೋನ್ ಹಿಡಿದು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗ 35ರ ಹರೆಯದ ಕೆ.ಅಣ್ಣಾಮಲೈ ಅವರ ಜೀವನ ಸಂಪೂರ್ಣ ಬದಲಾಗಿದೆ.

2011ರ ಬ್ಯಾಚ್ ನಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2019ರಲ್ಲಿ ಬಿಜೆಪಿ ಸೇರಿದ್ದರು. ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವ ಅಪಾರ ನಿರೀಕ್ಷೆ ಹೊಂದಿರುವ ಬಿಜೆಪಿ ಪಕ್ಷ ಅಣ್ಣಾಮಲೈಗೆ ಟಿಕೆಟ್ ನೀಡಿತ್ತು. ತಮಿಳುನಾಡಿನ ಕೊಂಗನಾಡು ಪ್ರದೇಶದ ಕರೂರ್ ಜಿಲ್ಲೆಯ ನಿವಾಸಿಯಾಗಿರುವ ಅಣ್ಣಾಮಲೈ ಐಐಟಿ ಕಾನ್ಪುರ್​ನ ಹಳೆ ವಿದ್ಯಾರ್ಥಿ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಸುಪರಿಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ಇವರು ಬೆಂಗಳೂರು ದಕ್ಷಿಣದಲ್ಲಿ ಡಿಸಿಪಿಯಾಗಿದ್ದರು.

ತಮಿಳುನಾಡಿನ ಕರೂರ್ ಜಿಲ್ಲೆಯ ಅರವಕುರಿಚಿ ವಿಧಾನಸಭೆ ಕ್ಷೇತ್ರ ಸೂಕ್ಷ್ಮ ಚುನಾವಣಾ ಕ್ಷೇತ್ರ ಎಂದೇ ಹೇಳಲಾಗುತ್ತಿದೆ. ಈ ಬಾರಿ ಅಣ್ಣಾಮಲೈ ವಿರುದ್ಧ ಡಿಎಂಕೆ ಪಕ್ಷದ ವಿ.ಸೆಂಥಿಲ್ ಬಾಲಾಜಿ ಸ್ಪರ್ಧಿಸುತ್ತಿದ್ದಾರೆ.  ಪಲ್ಲಪಟ್ಟಿ ಗ್ರಾಮಕ್ಕೆ ಅಣ್ಣಾಮಲೈ ಬರಬಾರದು ಎಂದು ಜಮಾತ್ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ , ಚುನಾವಣೆ ಪ್ರಚಾರ ಮಾಡಲು ನನಗೆ ಯಾರ ಅನುಮತಿಯೂ ಬೇಡ. ಮುಸ್ಲಿಂ ಮಹಿಳೆಯರು ನನಗೆ ಮತ ನೀಡಲಿದ್ದಾರೆ. ಅವರು ನನ್ನ ಜತೆಗಿದ್ದಾರೆ ಎಂಬುದು ಗೊತ್ತು ಎಂದಿದ್ದಾರೆ.

ಚುನಾವಣಾ ಫಲಿತಾಂಶ ಏನೇ ಆಗಿರಲಿ, ನಾನು ರಾಜಕಾರಣ ಮುಂದುವರಿಸುವೆ. ನಾನು ಒಂದು ಬಾರಿ ಸ್ಪರ್ಧಿಸುವುದಕ್ಕಾಗಿ ಐಪಿಎಸ್ ತೊರೆದಿಲ್ಲ. ನಾನು ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಬಯಸುತ್ತೇನೆ. ಬಿಜೆಪಿ ಇಲ್ಲಿ ವೇಗವಾಗಿ ಬೆಳೆಯುತ್ತಿದೆ, ನಾನು ಅದನ್ನು ಬೆಳೆಸಲು ಬಯಸುತ್ತೇವೆ ಎಂದಿದ್ದಾರೆ.

234 ವಿಧಾನಸಭೆ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಏಪ್ರಿಲ್ 6ಕ್ಕೆ ಮತದಾನ ನಡೆಯಲಿದೆ. ಎಐಎಡಿಎಂಕೆ ಮೈತ್ರಿ ಪಕ್ಷವಾಗಿರುವ ಬಿಜೆಪಿ 20 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ.

 ಇದನ್ನೂ ಓದಿ:  ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!

ಅಣ್ಣಾಮಲೈ ನಾಮಪತ್ರಕ್ಕೆ ತಡೆ; ಅಪರಾಧ ಪ್ರಕರಣಗಳ ಸ್ಪಷ್ಟೀಕರಣ ನೀಡಲು ಚುನಾವಣಾ ಆಯೋಗ ಸೂಚನೆ

Follow Us
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?