Ganga Vilas Cruise : ವಿಶ್ವದ ಅತಿ ಉದ್ದದ ಜಲಮಾರ್ಗ ಪ್ರಯಾಣಕ್ಕೆ ಜ. 13ರಂದು ಪ್ರಧಾನಿ ಮೋದಿ ಚಾಲನೆ, ವಿಶೇಷತೆ ಏನು?

| Updated By: ನಯನಾ ರಾಜೀವ್

Updated on: Jan 08, 2023 | 12:37 PM

ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ಹೊಸ ಜಲಮಾರ್ಗಗಳನ್ನು ನಿರ್ಮಿಸುತ್ತಿದೆ. ಅದರ ಭಾಗವಾಗಿ, ಗಂಗಾ ವಿಲಾಸ್ ಕ್ರೂಸ್​ನಲ್ಲಿ ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

Ganga Vilas Cruise : ವಿಶ್ವದ  ಅತಿ ಉದ್ದದ ಜಲಮಾರ್ಗ ಪ್ರಯಾಣಕ್ಕೆ ಜ. 13ರಂದು ಪ್ರಧಾನಿ ಮೋದಿ ಚಾಲನೆ, ವಿಶೇಷತೆ ಏನು?
ಗಂಗಾ ವಿಲಾಸ್ ಕ್ರೂಸ್
Follow us on

ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ಹೊಸ ಜಲಮಾರ್ಗಗಳನ್ನು ನಿರ್ಮಿಸುತ್ತಿದೆ. ಅದರ ಭಾಗವಾಗಿ, ಗಂಗಾ ವಿಲಾಸ್ ಕ್ರೂಸ್​ನಲ್ಲಿ ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಗಂಗಾ ವಿಲಾಸ್ ಕ್ರೂಸ್‌ನ ಪ್ರಯಾಣವು ವಾರಾಣಸಿಯಿಂದ ದಿಬ್ರುಗಢದವರೆಗೆ ಇರಲಿದೆ. ಗಂಗಾ ವಿಲಾಸ್ ಕ್ರೂಸ್ ನದಿಯಲ್ಲಿ ತೇಲುತ್ತಿರುವ ಪಂಚತಾರಾ ಹೋಟೆಲ್‌ನಂತೆ ಇರಲಿದ್ದು, ಗಂಗಾ ವಿಲಾಸ್ ಕ್ರೂಸ್ ತನ್ನ ಪ್ರಯಾಣದ ಸಮಯದಲ್ಲಿ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ಗಂಗಾ ವಿಲಾಸ್ ಕ್ರೂಸ್ 50 ದಿನಗಳ ಪ್ರಯಾಣದಲ್ಲಿ ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳ ಮೂಲಕ 3200 ಕಿ.ಮೀ ಪ್ರಯಾಣಿಸಲಿದೆ. ಗಂಗಾ ವಿಲಾಸ್ ಕ್ರೂಸ್‌ನಲ್ಲಿ ಪ್ರವಾಸಿಗರು ಅನೇಕ ಐಷಾರಾಮಿ ಸೌಲಭ್ಯಗಳನ್ನು ಆನಂದಿಸಲಿದ್ದಾರೆ. ವಿಹಾರದಲ್ಲಿ ಐಷಾರಾಮಿ ರೆಸ್ಟೋರೆಂಟ್, ಸ್ಪಾ, ಜಿಮ್ ಮತ್ತು ಸಂಡೆಕ್ ಸೌಲಭ್ಯಗಳೂ ಇವೆ. ರೆಸ್ಟೋರೆಂಟ್ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕಪದ್ಧತಿಗಳನ್ನು ಒದಗಿಸುವ ಬಫೆ ಕೌಂಟರ್ ಅನ್ನು ಹೊಂದಿದೆ.

ಮತ್ತಷ್ಟು ಓದಿ: Europa 2: ನವಮಂಗಳೂರು ಬಂದರಿಗೆ ಆಗಮಿಸಿದ ಕ್ರೂಸ್ ಹಡಗು

ಕ್ರೂಸ್‌ನ ಮೇಲಿನ ಡೆಕ್‌ನಲ್ಲಿ ಪ್ರಯಾಣಿಕರಿಗಾಗಿ ಬಾರ್ ಅನ್ನು ಸಹ ಮಾಡಲಾಗಿದೆ, ಇದರಲ್ಲಿ ಆರಾಮದಾಯಕ ಕುರ್ಚಿಗಳೊಂದಿಗೆ ಕಾಫಿ ಟೇಬಲ್‌ಗಳನ್ನು ಸಹ ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಪಂಚತಾರಾ ಹೋಟೆಲ್‌ಗಳಂತಹ ಸೌಲಭ್ಯಗಳನ್ನು ಒದಗಿಸಲು, ಕ್ರೂಸ್‌ನಲ್ಲಿ ತೆರೆದ ಡೆಕ್‌ನಲ್ಲಿ ಬಿಸಿಲಿನ ಸ್ನಾನ ಮತ್ತು ಪಾರ್ಟಿ ಮಾಡಲು ಸಹ ಸೌಲಭ್ಯಗಳನ್ನು ನೀಡಲಾಗಿದೆ.

ವಾರಾಣಸಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ಘಾಜಿಪುರ, ಬುಕ್ಸಾರ್‌ ಮತ್ತು ಪಾಟ್ನಾ ಮೂಲಕ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿಕ ಗುವಾಹಟಿ ಮೂಲಕ ದಿಬ್ರುಗಢಕ್ಕೆ ಹಿಂತುರುಗಲಿದೆ. ಗಂಗಾ ವಿಲ್ಲಾಸ್‌ ಕ್ರೂಸ್‌ ಭಾರತದ ಎರಡು ಪ್ರಮುಖ ನದಿಗಳಾದ ಗಂಗಾ ಮತ್ತು ಬ್ರಹ್ಮಪುತ್ರದಲ್ಲಿ ಪ್ರಯಾಣ ಕೈಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಈ ಗಂಗಾ ವಿಲಾಸ್‌ ಎಂಬ ವಿಶ್ವದ ಅತಿ ಉದ್ದದ ನದಿ ಕ್ರೂಸ್‌ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. ಈ ಯಾನವು ಉತ್ತರ ಪ್ರದೇಶದ ವಾರಣಾಸಿ ಮತ್ತು ಅಸ್ಸಾಂನ ದಿಬ್ರುಗಢ ನಡುವೆ ನದಿಯಲ್ಲಿ 50 ದಿನಗಳಲ್ಲಿ 3200 ಕಿ.ಮೀ. ಕ್ರಮಿಸಲಿದೆ.

ಎಲ್ಲಾ ಪ್ಯಾಕೇಜ್‌ಗಳ ಬೆಲೆಯನ್ನು ಅಂತರಾ ಕ್ರೂಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೆ, 4 ದಿನಗಳ ವಿಹಾರದ ‘ಇನ್‌ಕ್ರೆಡಿಬಲ್ ಬನಾರಸ್’ ಹೆಸರಿನ ಪ್ಯಾಕೇಜ್‌ನಲ್ಲಿ ವಾರಣಾಸಿಯಿಂದ ಕ್ಯಾಥಿಗೆ ಪ್ರಯಾಣಿಸಲು ಪ್ರಯಾಣಿಕರು 1.12 ಲಕ್ಷ ರೂ. ನೀಡಬೇಕಾಗುತ್ತದೆ.
ಅದೇ ಸಮಯದಲ್ಲಿ, ಕೋಲ್ಕತ್ತಾದಿಂದ ಢಾಕಾಗೆ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ವ್ಯಕ್ತಿಗೆ 4,37,250 ರೂ., ಸೀಕ್ರೆಟ್ ಆಫ್ ಸುಂದರಬನ್ಸ್ ಹೆಸರಿನ ಪ್ಯಾಕೇಜ್‌ನ ಬೆಲೆ 1.20 ಲಕ್ಷ ರೂ., ಅಗ್ಗದ ಪ್ಯಾಕೇಜ್ ರಿವರ್ ಸೂತ್ರ ಮೂರು ದಿನಗಳು ಮತ್ತು ಅದರ ಬೆಲೆ 15000 ರೂ.ನಲ್ಲಿ ಲಭ್ಯವಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ