ಗ್ಯಾಂಗ್​​​ಸ್ಟಾರ್​ ಲಾರೆನ್ಸ್ ಬಿಷ್ಣೋಯ್​​ಗೆ ಬಿಗ್​​​ ರಿಲೀಫ್, ಆ ಒಂದು ಪ್ರಕರಣ ಖುಲಾಸೆ

|

Updated on: Oct 26, 2024 | 10:17 AM

ಗ್ಯಾಂಗ್​​ ಸ್ಟಾರ್​​​ ಲಾರೆನ್ಸ್ ಬಿಷ್ಣೋಯ್​​ಗೆ ಬಿಗ್​​​​ ರಿಲೀಫ್​​​ ಸಿಕ್ಕಿದೆ. ಈಗಾಗಲೇ ಹಲವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಅವರಿಗೆ ಫೆಬ್ರವರಿ 5, 2011ರಲ್ಲಿ ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಮುಕ್ತಿ ನೀಡಲಾಗಿದೆ. ಇನ್ನು ಭಾರೀ ಸುದ್ದಿಯಲ್ಲಿರುವುದು ಬಾಲಿವುಡ್​​​ನ ಖ್ಯಾತ ನಟ ಸಲ್ಮಾನ್ ಖಾನ್ ಹತ್ಯೆ ಪ್ರಯತ್ನ, ಈಗಾಗಲೇ ಅನೇಕ ಕಡೆ ಈ ಬಗ್ಗೆ ಪರ ವಿರೋಧಗಳು ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಗ್ಯಾಂಗ್​​​ಸ್ಟಾರ್​ ಲಾರೆನ್ಸ್ ಬಿಷ್ಣೋಯ್​​ಗೆ ಬಿಗ್​​​ ರಿಲೀಫ್, ಆ ಒಂದು ಪ್ರಕರಣ ಖುಲಾಸೆ
ಸಾಂದರ್ಭಿಕ ಚಿತ್ರ
Follow us on

ಬಾಲಿವುಡ್ ಚಿತ್ರರಂಗಕ್ಕೆ ಗ್ಯಾಂಗ್​​​ಸ್ಟಾರ್​ ಲಾರೆನ್ಸ್ ಬಿಷ್ಣೋಯ್ ದೊಡ್ಡ ತಲೆನೋವಾಗಿದೆ. ಬಿಷ್ಣೋಯ್ ಸಮುದಾಯಕ್ಕೆ ಬಾಲಿವುಡ್​​​ನ ನಟ ಸಲ್ಮಾನ್ ಖಾನ್ ಹಾಗೂ ಮೂಲಗಳ ಪ್ರಕಾರ ಬಾಲಿವುಡ್​​​ನ ಅನೇಕ ನಟರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಈ ರೀತಿ ಸೇಡು ತೀರುಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಸೇರಿದಂತೆ ಅನೇಕರನ್ನು ಹತ್ಯೆ ಮಾಡಲು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅಲ್ಲಿಯೇ ಕೂತು ಈ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ಇದೆ. ಈ ಪೈಕಿ ಅವರ ಮೇಲಿದ್ದ ಪಂಜಾಬ್‌ನ ಮೊಹಾಲಿಯಲ್ಲಿ ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ಪ್ರಕರಣದಲ್ಲಿ ಖುಲಾಸೆಯಾಗಿದೆ.

ಲಾರೆನ್ಸ್ ಬಿಷ್ಣೋಯ್ ಅವರಿಗೆ ಈ ಪ್ರಕರಣ ದೊಡ್ಡ ತಲೆನೋವು ಆಗಿತ್ತು. ಫೆಬ್ರವರಿ 5, 2011 ರಂದು ಲಾರೆನ್ಸ್ ಬಿಷ್ಣೋಯ್ ಅವರು ಖಾಲ್ಸಾ ಕಾಲೇಜು ವಿದ್ಯಾರ್ಥಿ ಸತ್ವಿಂದರ್ ಅವರ ನಿವಾಸಕ್ಕೆ ಬಲವಂತವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಪ್ರಕರಣದಿಂದು ಮುಕ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಪ್ರಕರಣ; ಹೆಚ್ಚುವರಿ ಎಎಸ್‌ಐ ಸಮೀಕ್ಷೆಗೆ ಹಿಂದೂ ಕಡೆಯ ಮನವಿ ತಿರಸ್ಕರಿಸಿದ ವಾರಾಣಸಿ ನ್ಯಾಯಾಲಯ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಗೆ ಸಂಬಂಧಿಸಿದ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಗ್ಯಾಂಗ್​​​ಗಳ ಕೈವಾಡವಿದೆ ಎಂದು ಸಾಬೀತು ಕೂಡ ಆಗಿದೆ. ಏಳು ‘ಶೂಟರ್‌ಗಳನ್ನು’ ಈ ಹಿಂದೆ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಾದ್ಯಂತ ಬಂಧಿಸಲಾಗಿದೆ.

ಇದನ್ನೂ ಓದಿ: ಜ್ಞಾನವಾಪಿ ಪ್ರಕರಣ; ಹೆಚ್ಚುವರಿ ಎಎಸ್‌ಐ ಸಮೀಕ್ಷೆಗೆ ಹಿಂದೂ ಕಡೆಯ ಮನವಿ ತಿರಸ್ಕರಿಸಿದ ವಾರಾಣಸಿ ನ್ಯಾಯಾಲಯ