ಗಜಿಯಾಬಾದ್: ಹೌಸಿಂಗ್ ಸೊಸೈಟಿ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಮಗುವಿಗೆ ನಾಯಿ (Pet Dog) ಕಚ್ಚಿದ ಹಿನ್ನೆಲೆಯಲ್ಲಿ ಆ ಸಾಕು ನಾಯಿಯ ಮಾಲೀಕರಾದ ಮಹಿಳೆಗೆ ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ. ಲಿಫ್ಟ್‌ನಲ್ಲಿ ಮಹಿಳೆ ನಾಯಿಯನ್ನು ಕರೆದುಕೊಂಡು ಹೋಗುವಾಗ ಆ ಲಿಫ್ಟ್ನಲ್ಲಿದ್ದ ಬಾಲಕನಿಗೆ ನಾಯಿ ಕಚ್ಚಿರುವ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಮಾಲೀಕರು ನಾಯಿಯನ್ನು ಲಿಫ್ಟ್ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿದ್ದ ಬಾಲಕನನ್ನು ನೋಡಿ ಬೊಗಳಲಾರಂಭಿಸಿದ ನಾಯಿ ಆತನ ಕಾಲಿಗೆ ಕಚ್ಚಿತ್ತು. ಲಿಫ್ಟ್ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು. ಗಜಿಯಾಬಾದ್‌ನ ರಾಜ್‌ನಗರ ಎಕ್ಸ್‌ಟೆನ್ಶನ್ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿತ್ತು. ಮಹಿಳೆಯೊಂದಿಗೆ ಸಾಕು ನಾಯಿ ಲಿಫ್ಟ್‌ಗೆ ಪ್ರವೇಶಿಸಿದ್ದು, ಕೆಲವು ಸೆಕೆಂಡುಗಳ ನಂತರ ನಾಯಿ ಹಾರಿ ಹುಡುಗನನ್ನು ಕಚ್ಚುತ್ತದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ನಾಯಿ ಕಚ್ಚಿದ್ದರಿಂದ ಭಯಗೊಂಡು ನೋವಿನಿಂದ ಅಳುತ್ತಿದ್ದ ಆ ಬಾಲಕನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಆ ಮಹಿಳೆ ತನ್ನ ನಾಯಿಯನ್ನು ಕರೆದುಕೊಂಡು ಲಿಫ್ಟ್ನಿಂದ ಹೊರಗೆ ಹೋಗುತ್ತಾಳೆ.
Another video from #Ghaziabad The woman whose #dog had bitten the child in the #Lift, the video of the argument between the child’s father and the woman pic.twitter.com/DEZg3xUXZL
— Himanshu dixit ??? (@HimanshuDixitt) September 6, 2022
ಇದನ್ನೂ ಓದಿ: Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ
Shocking video from Ghaziabad, The dog suddenly bitten the child in ongoing lift but the dog’s owner did nothing. pic.twitter.com/LaLrGlS8Ds
— Nikhil Choudhary (@NikhilCh_) September 6, 2022
ಈ ಸಿಸಿಟಿವಿ ದೃಶ್ಯಾವಳಿಯನ್ನು ಇಟ್ಟುಕೊಂಡು ಆ ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಘಟನೆಯ ನಂತರ, ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಹೋದಾಗ ಆ ಸಾಕು ನಾಯಿಯನ್ನು ರಿಜಿಸ್ಟರ್ ಮಾಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ಆಕೆಗೆ 5,000 ರೂ. ದಂಡ ವಿಧಿಸಲಾಗಿದೆ.