ರಕ್ತಸ್ರಾವದಿಂದ ಬಳಲಿ ನಿಸ್ತೇಜಳಾಗಿದ್ದ ಬಾಲಕಿಗೆ ಸಹಾಯ ಮಾಡದೆ ವಿಡಿಯೊ ಮಾಡಿಕೊಳ್ಳುತ್ತಿದ್ದ ಜನ

ದುರ್ಬಲ ಬಾಲಕಿಯ ಹೆಸರು ಮತ್ತು ಆಕೆ ಅಂಥ ಅಸಹಾಯಕ ಸ್ಥಿತಿಗೆ ತಲುಪಲು ಏನು ಕಾರಣ ಎಂಬುದೂ ತಿಳಿದು ಬಂದಿಲ್ಲ

ರಕ್ತಸ್ರಾವದಿಂದ ಬಳಲಿ ನಿಸ್ತೇಜಳಾಗಿದ್ದ ಬಾಲಕಿಗೆ ಸಹಾಯ ಮಾಡದೆ ವಿಡಿಯೊ ಮಾಡಿಕೊಳ್ಳುತ್ತಿದ್ದ ಜನ
ಬಾಲಕಿಗೆ ಸಹಾಯ ಮಾಡದೆ ವಿಡಿಯೊ ಮಾಡಿಕೊಳ್ಳುತ್ತಿದ್ದ ಜನ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 25, 2022 | 2:32 PM

ಲಖನೌ: ತೀವ್ರ ರಕ್ತಸ್ರಾವದಿಂದ ಬಳಲಿ ನಿಸ್ತೇಜಳಾಗಿದ್ದ ಬಾಲಕಿಗೆ ಸಹಾಯ ಮಾಡದೆ ಆಕೆಯ ಸುತ್ತಲೂ ನಿಂತಿದ್ದ ಗಂಡಸರು ವಿಡಿಯೊ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲಗಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಕನೌಜ್​ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನೂರಾರು ಮಂದಿ ಈ ಹೃದಯ ವಿದ್ರಾವಕ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 24 ಸೆಕೆಂಡುಗಳ ಕ್ಲಿಪ್​ನಲ್ಲಿ ಯುವತಿಯು ನೆಲದ ಮೇಲೆ ಮಲಗಿ ದುರ್ಬಲವಾಗಿರು ತನ್ನ ಕೈಗಳನ್ನು ಅಸಹಾಯಕವಾಗಿ ಮೇಲೆತ್ತಿ ಸಹಾಯಕ್ಕಾಗಿ ಯಾಚಿಸುತ್ತಿದ್ದಾಳೆ. ಆದರೆ ಸ್ಥಳದಲ್ಲಿದ್ದ ಯಾರೊಬ್ಬರೂ ಆಕೆಯ ನೆರವಿಗೆ ಮುಂದೆ ಬಂದಿಲ್ಲ.

ಕೆಲವರು ಮಾತ್ರ ತುರ್ತಾಗಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ನಂತರವಷ್ಟೇ ಬಾಲಕಿಗೆ ವೈದ್ಯಕೀಯ ನೆರವು ಸಿಕ್ಕಿದೆ. ಪೊಲೀಸ್ ಹೊರಠಾಣೆಯ ಉಸ್ತುವಾರಿ ಸಿಬ್ಬಂದಿ ಮನೋಜ್ ಪಾಂಡೆ ಬಾಲಕಿಯನ್ನು ಆಟೊ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯಲಾಯಿತು.

ವೈರಲ್ ಆಗಿರುವ ವಿಡಿಯೊ ಹೀಗಿದೆ. ದುರ್ಬಲ ಬಾಲಕಿಯ ಹೆಸರು ಮತ್ತು ಆಕೆ ಅಂಥ ಅಸಹಾಯಕ ಸ್ಥಿತಿಗೆ ತಲುಪಲು ಏನು ಕಾರಣ ಎಂಬುದೂ ತಿಳಿದು ಬಂದಿಲ್ಲ. ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲಿಸಿರುವ ಪೊಲೀಸರು ಆಕೆಯು ಗೆಳೆಯನೊಬ್ಬನ ಜೊತೆಗೆ ಗೆಸ್ಟ್​ಹೌಸ್​ಗೆ ಹೋಗುವುದನ್ನು ಪತ್ತೆ ಮಾಡಿದ್ದಾರೆ.

Published On - 2:06 pm, Tue, 25 October 22