ನಾಪತ್ತೆಯಾಗಿದ್ದ ಬಾಲಕಿ 15 ವರ್ಷಗಳ ಬಳಿಕ ಪತ್ತೆಯಾಗಿದ್ದೇಗೆ?
ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ […]
ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ.
ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ ಹೋಗ್ತೀನಿ ಅಂತಾ ಬೆನ್ನತ್ತಿ ಹೋಗಿದ್ದಳು. ಆದ್ರೆ ದುರಾದೃಷ್ಟವಶಾತ್ ಅಲ್ಲಿ ನಡೆದಿದ್ದೇ ಬೇರೆ. ತನ್ನ ಹಿಂದೆ ಬರುತ್ತಿದ್ದ ತಂಗಿಗೆ, ಶಾಲೆಯಲ್ಲಿ ಸೇರಿಸಿಕೊಳ್ಳೋದಿಲ್ಲ ಅಂತಾ ಹೇಳಿದ್ದ ಅಣ್ಣ ಮನೆಗೆ ಹೋಗಲು ಹೇಳಿದ್ದ.
ಆಗ ಸುಮಾರು 3 ವರ್ಷದವಳಾಗಿದ್ದ ಈ ಭವಾನಿ ಮನೆಗೆ ಹಿಂತಿರುಗಲೇ ಇಲ್ಲ. ಕಡೆಗೆ ಹೈದರಾಬಾದ್ಗೆ ತಲುಪಿದ್ದ ಬಾಲಕಿಯನ್ನ, ಜಡಿ ಮಳೆಯಲ್ಲಿ ಅಲ್ಲಿನ ಸ್ಥಳೀಯರೊಬ್ಬರು ರಕ್ಷಿಸಿದ್ದರು. ಆದ್ರೆ ಆಕೆಯ ಬಾಳಲ್ಲಿ ಕೆಲ ತಿಂಗಳ ಹಿಂದೆ ಬಹುದೊಡ್ಡ ತಿರುವೊಂದು ಸಿಕ್ಕಿತ್ತು.
ಮನೆಗೆಲಸಕ್ಕೆ ಸೇರಿದಾಗ ಸತ್ಯ ರಿವೀಲ್! ಕೆಲ ತಿಂಗಳ ಹಿಂದೆ ವಿಜಯವಾಡದಲ್ಲಿ ಕೆಲಸಕ್ಕೆ ಸೇರಿದ್ದ ಯುವತಿಗೆ ಮನೆ ಮಾಲೀಕ ಐಡಿ ಕಾರ್ಡ್ ತರಲು ಕೇಳಿದ್ದರು. ಯುವತಿ ಅಪ್ರಾಪ್ತಳಾಗಿದ್ದರೆ ತೊಂದರೆ ಎಂಬ ಕಾರಣಕ್ಕೆ, ಐಡಿ ಕಾರ್ಡ್ ಕೇಳಿದ್ದರಂತೆ. ಈ ವೇಳೆ ಯುವತಿ ತನ್ನ ಬಾಳಲ್ಲಿ ನಡೆದಿದ್ದ ಘಟನೆಯನ್ನ ಬಿಡಿಸಿಟ್ಟಿದ್ದಾಳೆ. ವಿಷಯ ತಿಳಿದ ಮನೆ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಜಾಲಾಡಿದ್ದಾರೆ.
ಕಡೆಗೆ ಯುವತಿಯ ಅಣ್ಣನ ಸಂಪರ್ಕ ಸಿಕ್ಕಿದ್ದು, ಕಡೆಗೂ ಭವಾನಿ ಕುಟುಂಬ ಸೇರಿದ್ದಾಳೆ. ಒಟ್ನಲ್ಲಿ ದಾರಿ ಗೊತ್ತಾಗದೆ ಮನೆಯವರಿಂದ ದೂರವಾಗಿದ್ದ ಯುವತಿ, ಕಡೆಗೂ 15 ವರ್ಷಗಳ ನಂತರ ತನ್ನ ಕುಟುಂಬ ಸೇರಿದ್ದಾಳೆ. ಊರಿನ ಮಗಳು ಮರಳಿದ್ದಕ್ಕೆ ಗ್ರಾಮದ ಜನರು ಖುಷ್ ಆಗಿದ್ದು, ಆಂಧ್ರ-ತೆಲಂಗಾಣದಲ್ಲಿ ಈ ಘಟನೆ ಸಾಕಷ್ಟು ಸದ್ದು ಮಾಡ್ತಿದೆ.
Published On - 1:40 pm, Sun, 8 December 19