ಆತ್ಮಹತ್ಯೆಗೆ ಯತ್ನ, ತಾನು ಸಾಯುವ ಮೊದಲು ತಮ್ಮನಿಗೆ ರಾಖಿ ಕಟ್ಟಿದ ಅಕ್ಕ

ಸಾಯುವ ಮೊದಲು ಆಸ್ಪತ್ರೆಯ ಹಾಸಿಗೆ ಮೇಲೆಯೇ ಅಕ್ಕ ತಮ್ಮನಿಗೆ ರಾಖಿ ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಮಹಬೂಬಾಬಾದ್‌ ಮೂಲದ ಬಾಲಕಿ ತನ್ನ ಪ್ರಾಣ ಕಳೆದುಕೊಳ್ಳಲು ಪ್ರಯತ್ನ ಪಟ್ಟಿದ್ದಳು, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆತ್ಮಹತ್ಯೆಗೆ ಯತ್ನ, ತಾನು ಸಾಯುವ ಮೊದಲು ತಮ್ಮನಿಗೆ ರಾಖಿ ಕಟ್ಟಿದ ಅಕ್ಕ
ರಾಖಿ
Image Credit source: India Today

Updated on: Aug 19, 2024 | 3:33 PM

ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ತಾನು ಸಾಯುವ ಮುನ್ನ ತಮ್ಮನಿಗೆ ರಾಖಿ ಕಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಸಾಯುವ ಸ್ವಲ್ಪ ಸಮಯಕ್ಕೂ ಮುನ್ನ ಆಕೆ ತಮ್ಮನಿಗೆ ರಾಖಿ ಕಟ್ಟಿದ್ದಾಳೆ. ತೆಲಂಗಾಣದ ಮಹಬೂಬಾಬಾದ್‌ ಮೂಲದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿ ಅಂತಿಮವಾಗಿ ಸಾವನ್ನಪ್ಪಿದ್ದಾಳೆ.

ಅವಳು ಕೊಡಾಡ್‌ನಲ್ಲಿ ಡಿಪ್ಲೊಮಾ ಮಾಡುತ್ತಿದ್ದಳು, ಅಲ್ಲಿ ಒಬ್ಬ ವ್ಯಕ್ತಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದ. ಆಕೆ ಪ್ರಸ್ತಾಪವನ್ನು ನಿರಾಕರಿಸಿದ್ದಳು ಅದರ ನಂತರ ಆ ವ್ಯಕ್ತಿ ತನ್ನ ಕೆಲವು ಸ್ನೇಹಿತರ ಜೊತೆಗೂಡಿ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ.

ಕಿರುಕುಳವನ್ನು ತಾಳಲಾರದೆ ಆಕೆ ಆಗಸ್ಟ್ 15 ರಂದು ತನ್ನ ಜೀವನವನ್ನು ಕೊನೆಗೊಳಿಸಬೇಕೆಂಬ ನಿರ್ಧಾರ ಮಾಡಿ ವಿಷ ಸೇವಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆ ಪಡೆಯುತ್ತಿದ್ದರೂ, ಆಕೆಯ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು ಮತ್ತು ಆಕೆ ಆಗಸ್ಟ್ 17 ರಂದು ನಿಧನರಾದರು.

ಮತ್ತಷ್ಟು ಓದಿ: ರಕ್ಷಾ ಬಂಧನ: ಸೋದರನಿಂದ ಸೋದರಿಗೆ ಕೊಡಬಹುದಾದ ಒಳ್ಳೆಯ ಹಣಕಾಸು ಉಡುಗೊರೆಗಳು…

ಅಪ್ರಾಪ್ತ ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಬಳಿಕ ಅಂತಿಮ ವಿಧಿ ವಿಧಾನವನ್ನು ಕೈಗೊಳ್ಳಲಾಯಿತು. ನರಸಿಂಹಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:32 pm, Mon, 19 August 24