
ಕೋಲ್ಕತ್ತಾ, ಅಕ್ಟೋಬರ್ 12: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ (Durgapur Rape Case) ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊನೆಗೂ ಮೌನ ಮುರಿದಿದ್ದಾರೆ. ಆದರೆ, ಅವರು ಇಂದು ನೀಡಿರುವ ಪ್ರತಿಕ್ರಿಯೆಗೆ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, “ಒಬ್ಬ ಹುಡುಗಿಯನ್ನು ರಾತ್ರಿಯಲ್ಲಿ ಹೊರಗೆ ಹೋಗಲು ಬಿಡಬಾರದು. ಹೆಣ್ಣುಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿಯಾದವರು ಈ ರೀತಿ ಬೇಜವಾಬ್ದಾರಿಯ ಹೇಳಿಕೆ ನೀಡಬಾರದು ಎಂದು ಹಲವರು ಟೀಕಿಸಿದ್ದಾರೆ.
“ಈ ಅತ್ಯಾಚಾರ ನಡೆದಿರುವುದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ. ಹೀಗಾಗಿ, ಇದಕ್ಕೆ ನಮ್ಮ ಸರ್ಕಾರವನ್ನು ದೂಷಿಸುವುದು ಅನ್ಯಾಯ. ಖಾಸಗಿ ಕಾಲೇಜು ಅಧಿಕಾರಿಗಳು ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಮಧ್ಯರಾತ್ರಿ 12.30ಕ್ಕೆ ಆ ಹುಡುಗಿ ಏಕೆ ಹೊರಗೆ ಬಂದಳು? ಹಾಗಾದರೆ, ಕಾಲೇಜಿನಲ್ಲಿ ಭದ್ರತೆ ವ್ಯವಸ್ಥೆ ಇಲ್ಲವೇ? ಆ ದಿನ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಹುಡುಗಿಯರು ರಾತ್ರಿ ವೇಳೆ ಕಾಲೇಜಿನಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ” ಎಂದು ಅವರು ಹೇಳಿದ್ದಾರೆ.
#WATCH | Kolkata, WB: On the alleged gangrape of an MBBS student in Durgapur, CM Mamata Banerjee says, “… The girls should not be allowed to go outside (college) at night. They have to protect themselves also. There is a forest area. Police are searching all the people. Nobody… https://t.co/9cck7wwxcn pic.twitter.com/OnuFiFSIAz
— ANI (@ANI) October 12, 2025
ಇದನ್ನೂ ಓದಿ: ಬಂಗಾಳದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ
“ಹುಡುಗಿಯರು ರಾತ್ರಿಯಲ್ಲಿ ಹೊರಗೆ ಹೋಗಲು ಕಾಲೇಜಿನವರು ಬಿಡಬಾರದು. ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಸುತ್ತ ಅರಣ್ಯ ಪ್ರದೇಶವಿದೆ. ಪೊಲೀಸರು ಎಲ್ಲ ಜನರನ್ನು ಶೋಧಿಸುತ್ತಿದ್ದಾರೆ. ಯಾರನ್ನೂ ಕ್ಷಮಿಸಲಾಗುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಣಿಪುರ, ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಆಗ ಅಲ್ಲಿನ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಂಡಿತ್ತು? ನಮ್ಮ ರಾಜ್ಯದಲ್ಲಿ, ನಾವು 1-2 ತಿಂಗಳೊಳಗೆ ಜನರ ವಿರುದ್ಧ ಚಾರ್ಜ್‌ಶೀಟ್ ಹಾಕಿದ್ದೇವೆ ಮತ್ತು ಕೆಳ ನ್ಯಾಯಾಲಯವು ಆರೋಪಿಗಳನ್ನು ಗಲ್ಲಿಗೇರಿಸಲು ಆದೇಶ ನೀಡಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳ ಅತ್ಯಾಚಾರ ಪ್ರಕರಣ; ಕಠಿಣ ಕ್ರಮಕ್ಕೆ ಮಮತಾ ಸರ್ಕಾರಕ್ಕೆ ಒಡಿಶಾ ಸಿಎಂ ಒತ್ತಾಯ
ಶುಕ್ರವಾರ ತಡರಾತ್ರಿ ಕೋಲ್ಕತ್ತಾದಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ದುರ್ಗಾಪುರದ ಶೋಭಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಆವರಣದ ಬಳಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಒಡಿಶಾದ ಜಲೇಶ್ವರ ಮೂಲದ 23 ವರ್ಷದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ದಾಳಿ ನಡೆಸಲಾಗಿತ್ತು. ಮೂವರು ವ್ಯಕ್ತಿಗಳು ಸಂತ್ರಸ್ತೆಯ ಬಳಿಗೆ ಬಂದು, ಆಕೆಯ ಫೋನ್ ಕಸಿದುಕೊಂಡು, ಹತ್ತಿರದ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಹಲ್ಲೆಯ ನಂತರ, ಆರೋಪಿಗಳು ಆಕೆಯ ಫೋನ್ ಹಿಂತಿರುಗಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
#WATCH | Kolkata, WB: On the alleged gangrape of an MBBS student in Durgapur, CM Mamata Banerjee says, “This is a private college. Three weeks ago, three girls were raped on the beach in Odisha. What action is being taken by the Odisha government?… The girl was studying in a… pic.twitter.com/ugQrQwNeW7
— ANI (@ANI) October 12, 2025
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳ ಬಂಧನವನ್ನು ಪಶ್ಚಿಮ ಬಂಗಾಳ ಪೊಲೀಸರು ದೃಢಪಡಿಸಿದ್ದಾರೆ ಮತ್ತು ಇನ್ನೂ ಇಬ್ಬರು ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಈ ಘಟನೆಯು ಕಳೆದ ವರ್ಷದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಪ್ರಕರಣದ ನೆನಪುಗಳನ್ನು ಮತ್ತೆ ಹುಟ್ಟುಹಾಕಿದೆ, ಇದು ವ್ಯಾಪಕ ಖಂಡನೆ ಮತ್ತು ರಾಜಕೀಯ ಪ್ರತಿಭಟನೆಗಳಿಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Sun, 12 October 25