Kannada Bhavan: ಕನ್ನಡ ಭವನಕ್ಕೆ ಕನ್ನಡಿಗರೇ ಜಮೀನು ಖರೀದಿಸಿ; ಗೋವಾ ಸಿಎಂ ಪ್ರಮೋದ್ ಸಾವಂತ್

| Updated By: ಸುಷ್ಮಾ ಚಕ್ರೆ

Updated on: Nov 14, 2022 | 12:15 PM

ಕರ್ನಾಟಕ ಸರ್ಕಾರವು ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸುಮಾರು 2 ಎಕರೆ ಜಾಗ ನೀಡುವಂತೆ ಕೋರಿ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು.

Kannada Bhavan: ಕನ್ನಡ ಭವನಕ್ಕೆ ಕನ್ನಡಿಗರೇ ಜಮೀನು ಖರೀದಿಸಿ; ಗೋವಾ ಸಿಎಂ ಪ್ರಮೋದ್ ಸಾವಂತ್
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Follow us on

ಪಣಜಿ: ಗೋವಾದಲ್ಲಿ ಕನ್ನಡ ಭವನ (Kannada Bhavan) ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕನ್ನಡಿಗರ ಬೇಡಿಕೆಯಾಗಿದೆ ಎಂಬುದು ನಮಗೆ ತಿಳಿದಿದೆ. ಆದರೆ, ಇಲ್ಲಿನ ಸರ್ಕಾರದ ವತಿಯಿಂದ ಕನ್ನಡ ಭವನಕ್ಕೆ ಜಾಗ ನೀಡಲು ಸರ್ಕಾರದ ಬಳಿ ಅಷ್ಟೊಂದು ಜಾಗವಿಲ್ಲ. ಹೀಗಾಗಿ, ಕನ್ನಡಿಗರೇ ಜಾಗವನ್ನು ಖರೀದಿಸಿ, ಕನ್ನಡ ಭವನ ನಿರ್ಮಾಣ ಮಾಡಬಹುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (CM Pramod Sawant) ಹೇಳಿದ್ದಾರೆ.

ಗೋವಾದ ಬಿಚೋಲಿಯಲ್ಲಿ ನಡೆದ ಕಮ್ಮಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದಲ್ಲಿ ಕನ್ನಡ ಭವನ ಮತ್ತು ವಸತಿ ಸೌಕರ್ಯಗಳನ್ನು ನಿರ್ಮಿಸಲು ನಮ್ಮ ಸರ್ಕಾರದ ಬಳಿ ಭೂಮಿಗಾಗಿ ಮನವಿ ಮಾಡುವ ಬದಲು ಸ್ವಂತವಾಗಿ ಭೂಮಿ ಖರೀದಿಸುವಂತೆ ಕನ್ನಡಿಗರನ್ನು ಒತ್ತಾಯಿಸಿದ್ದಾರೆ.

“ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋವಾದಲ್ಲಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿರುತ್ತಾರೆ. ಅವರು ಕನ್ನಡ ಭವನದ ತಮ್ಮ ಬೇಡಿಕೆಯನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ಸರ್ಕಾರದ ಬಳಿ ಜಮೀನಿನ ಕೊರತೆಯಿದೆ. ನಿಮ್ಮಲ್ಲಿರುವ ಭೂಮಿಯಲ್ಲಿ ನೀವು ಭವನವನ್ನು ನಿರ್ಮಿಸಬಹುದು. ಅಥವಾ ನೀವೇ ಜಾಗ ಖರೀದಿಸಿ ಕನ್ನಡ ಭವನ ನಿರ್ಮಿಸಿಕೊಳ್ಳಬಹುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

ಇದನ್ನೂ ಓದಿ: ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುವ ವೇಳೆ ರಸ್ತೆ ಪಕ್ಕದ ಅಂಗಡಿಯಲ್ಲಿ ಟೀ ಕುಡಿದ ಸಚಿನ್‌ ತೆಂಡೂಲ್ಕರ್‌: ವಿಡಿಯೋ ವೈರಲ್​

ಈ ಹಿಂದೆ, ಕರ್ನಾಟಕ ಸರ್ಕಾರವು ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸುಮಾರು 2 ಎಕರೆ ಜಾಗ ನೀಡುವಂತೆ ಕೋರಿ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು. ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಸುಮಾರು 4 ದಶಕಗಳಿಂದ ಕನ್ನಡ ಭವನ ಬೇಕೆಂದು ಆಗ್ರಹಿಸುತ್ತಿದ್ದಾರೆ. ಕಳೆದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋವಾದಲ್ಲಿ ಕನ್ನಡ ಭವನ ಸ್ಥಾಪಿಸಲು 10 ಕೋಟಿ ರೂ. ಮೀಸಲಿಟ್ಟಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ