ಬೀಚ್​​ ರೆಸ್ಟೋರೆಂಟ್​​ಗಳಲ್ಲಿ ‘ಮೀನು ಕರಿ-ರೈಸ್’ ಕಡ್ಡಾಯಗೊಳಿಸಿದ ಗೋವಾ ಸರ್ಕಾರ

|

Updated on: Oct 09, 2023 | 11:32 AM

ಗೋವಾದ ಬೀಚ್​​​​ಗಳ ಎಲ್ಲ ರೆಸ್ಟೋರೆಂಟ್​​ಗಳಲ್ಲಿ ರಾಜ್ಯದ ಪ್ರಮುಖ ಆಹಾರವಾದ 'ಮೀನು ಕರಿ-ರೈಸ್'ನ್ನು ತಮ್ಮ ಮೆನುಗಳಲ್ಲಿ ಸೇರಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. 'ಮೀನು ಕರಿ-ರೈಸ್' ರಾಜ್ಯದಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಪ್ರಸಿದ್ಧತೆಯನ್ನು ಪಡೆಯಬೇಕು ಎಂದು ಹೇಳಿದ್ದಾರೆ.

ಬೀಚ್​​ ರೆಸ್ಟೋರೆಂಟ್​​ಗಳಲ್ಲಿ ಮೀನು ಕರಿ-ರೈಸ್ ಕಡ್ಡಾಯಗೊಳಿಸಿದ ಗೋವಾ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ಪಣಜಿ, ಅ.9: ಇನ್ನು ಮುಂದೆ ಗೋವಾದ ಬೀಚ್​​​​ಗಳ ಎಲ್ಲ ರೆಸ್ಟೋರೆಂಟ್​​ಗಳಲ್ಲಿ ರಾಜ್ಯದ ಪ್ರಮುಖ ಆಹಾರವಾದ ‘ಮೀನು ಕರಿ-ರೈಸ್’ನ್ನು(fish curry-rice) ತಮ್ಮ ಮೆನುಗಳಲ್ಲಿ ಸೇರಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ‘ಮೀನು ಕರಿ-ರೈಸ್’ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಪ್ರಸಿದ್ಧತೆಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಗೋವಾದ ರೆಸ್ಟೋರೆಂಟ್​​ಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಾಕಪದ್ಧತಿಗಳನ್ನು ಅಂದರೆ ಈ ಮೆನುಗಳಲ್ಲಿ ನಮ್ಮ ರಾಜ್ಯದ ‘ಮೀನು ಕರಿ-ರೈಸ್’ ನ್ನು ಕೂಡ ನೀಡಬೇಕು ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ. ತೆಂಗಿನಕಾಯಿ, ರುಚಿಯಾದ ಮಸಾಲೆ ಹಾಕಿ ಮಾಡಿದ ಮೀನು ಕರಿಯನ್ನು ಪ್ರವಾಸಿಗರಿಗೆ ನೀಡಬೇಕು. ಇದರ ಜತೆಗೆ ದೇಶ- ವಿದೇಶದಲ್ಲಿ ನಮ್ಮ ಆಹಾರ ಪರಿಚಯವಾಗಬೇಕು, ಅದಕ್ಕಾಗಿ ನಿಮ್ಮ ರೆಸ್ಟೋರೆಂಟ್ ಮೆನುಗಳಲ್ಲಿ ಇದನ್ನು ಸೇರಿಸಿ ಎಂದು ಹೇಳಲಾಗಿದೆ.

ಈ ಹಿಂದೆ ಗೋವಾ ಬೀಚ್​​ಗಳ ಹೊಟೇಲ್​​ಗಳಲ್ಲಿ ಉತ್ತರ ಭಾರತದ ಆಹಾರಗಳನ್ನು ಮಾತ್ರ ನೀಡಲಾಗಿತ್ತು. ಗೋವಾದ ಭಕ್ಷ್ಯಗಳು ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಎಲ್ಲ ರೆಸ್ಟೋರೆಂಟ್​​ಗಳಲ್ಲಿ ಗೋವಾದ ಆಹಾರಗಳನ್ನು ನೀಡಬೇಕು ಹಾಗೂ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ.

ನಾವು ನಮ್ಮ ರಾಜ್ಯದ ಶ್ರೀಮಂತ ಪಾಕವಿಧಾನಗಳನ್ನು ದೇಶಕ್ಕೆ ಮತ್ತು ವಿದೇಶಗಳಿಗೆ ತಿಳಿಸಬೇಕು. ಈ ಬಗ್ಗೆ ಇತ್ತೀಚೆಗೆ ಕ್ಯಾಬಿನೆಟ್​​ನಲ್ಲೂ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಅಕ್ರಮ ಮಾರಾಟಗಳನ್ನು ಮಾಡಲಾಗುತ್ತಿದೆ ಎಂಬ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಗೋವಾದಲ್ಲಿ ಶಾನ್ವಿ ಮೋಜು ಮಸ್ತಿಯ ಫೋಟೋ ಗ್ಯಾಲರಿ

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಬೀಚ್​​ಗಳಲ್ಲಿ ಕಳ್ಳಭಟ್ಟಿ ಮತ್ತು ಅಕ್ರಮ ಮಧ್ಯ ಮಾರಾಟ ನಡೆಸುವ ಮಹಿಳೆಯರನ್ನು ಬಂಧಿಸಿದ್ದಾರೆ. ಸರ್ಕಾರದ ಹೊಸ ನೀತಿಯ ಪ್ರಕಾರ ಎಲ್ಲ ರೆಸ್ಟೋರೆಂಟ್​​ಗಳಲ್ಲಿ ಗೋವಾದ ಆಹಾರಗಳನ್ನು ನೀಡುವಂತೆ ವ್ಯವಸ್ಥೆ ಮಾಡಬೇಕು. ಇದರ ಜತೆಗೆ ಅಕ್ರಮವಾಗಿ ಕಳ್ಳಭಟ್ಟಿ ಮತ್ತು ಮಧ್ಯ ಮಾರಾಟ ಮಾಡುವವರ ವಿರೋಧ ಕ್ರಮಕೈಗೊಳ್ಳವಂತೆ ಹೇಳಿದೆ.

ಇನ್ನು ಗೋವಾದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯಗಳ ಬಗ್ಗೆ ಹಾಗೂ ಬೀಚ್​​ಗಳಲ್ಲಿ, ಪ್ರವಾಸೋದ್ಯಮ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ದುಡಿಯುತ್ತಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಜನರ ಸುರಕ್ಷತೆ ಕೂಡ ನಮ್ಮ ಮೂಲ ಆದ್ಯತೆ ಎಂದು ಸಚಿವರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ