ಪಣಜಿ: ಗೋವಾಗೆ ಹೋಗಬೇಕು. ಅಲ್ಲಿರುವ ಬೀಚ್ಗಳ ಅಂಚಿನಲ್ಲಿ ಕುಳಿತು ಮದ್ಯ ಹೀರುತ್ತಾ ಸಮುದ್ರ ಕಣ್ತುಂಬಿಕೊಳ್ಳಬೇಕು ಎನ್ನುವುದು ಅನೇಕರ ಕನಸು. ಆದರೆ, ಇನ್ನು ಈ ಕನಸು ಈಡೇರಲು ಸಾಧ್ಯವಿಲ್ಲ. ಒಂದೊಮ್ಮೆ ನೀವು ಈ ಪ್ರಯತ್ನಕ್ಕೆ ಮುಂದಾದರೆ ಭಾರೀ ದಂಡ ಕಟ್ಟಬೇಕಾಗುತ್ತದೆ!
ಹೌದು, ಗೋವಾ ಬೀಚ್ಗಳಲ್ಲಿ ಕುಳಿತು ಮದ್ಯ ಕುಡಿದರೆ ಇನ್ಮುಂದೆ ಒಂದಲ್ಲ ಎರಡಲ್ಲ ಬರೋಬ್ಬರಿ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಅಲ್ಲಿನ ರಾಜ್ಯ ಸರ್ಕಾರ ಹೀಗೊಂದು ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಲಕ್ಷಾಂತರ ಮಂದಿ ಗೋವಾಗೆ ತೆರಳಿದ್ದರು. ಈ ವೇಳೆ ಬೀಚ್ನಲ್ಲಿ ಕುಳಿತು ಕುಡಿದಿದ್ದರು. ಅಷ್ಟೇ ಅಲ್ಲ, ಚಿಪ್ಸ್ ಪ್ಯಾಕ್ಗಳು, ಬಾಟಲಿಗಳನ್ನು ಬೀಚ್ನಲ್ಲಿಯೇ ಎಸೆದು ಹೋಗಿದ್ದರು. ಈ ಮೂಲಕ ಪರಿಸರವನ್ನು ಸಂಪೂರ್ಣವಾಗಿ ಹೊಲಸು ಮಾಡಿದ್ದರು. ಹೀಗಾಗಿ, ಬೀಚ್ನಲ್ಲಿ ಕುಳಿತು ಕುಡಿಯುವವರಿಗೆ 10 ಸಾವಿರ ದಂಡ ವಿಧಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಬೀಚ್ಗಳಲ್ಲಿ ಈ ಬಗ್ಗೆ ಎಚ್ಚರಿಕೆ ಕೂಡ ಹಾಕಲಾಗಿದೆ.
ರಾಜ್ಯದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ಗೆ ಬ್ರೇಕ್.. ಗೋವಾದತ್ತ ಮುಖಮಾಡಿದ ಪಾರ್ಟಿ ಪ್ರಿಯರು!