ಡಿಜಿಟಲ್​ ಕ್ಯಾಲೆಂಡರ್​ ಮತ್ತು ಡೈರಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಉಳಿದ ಡಿಜಿಟಲ್​ ಕ್ಯಾಲೆಂಡರ್​ ಆ್ಯಪ್​ಗಳಿಗೆ ಹೋಲಿಕೆ ಮಾಡಿದರೆ ಈ ಆ್ಯಪ್​ ತುಂಬಾನೇ ಅಭಿವೃದ್ಧಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್​ ಇಂಡಿಯಾ ಕನಸಿಗೆ ಸಾಕಾರ ನೀಡಲು ಈ ಆ್ಯಪ್​ ಸಹಕಾರಿ ಎಂದು ಪ್ರಕಾಶ್​ ಜಾವ್ಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ಡೈರಿ-ಕ್ಯಾಲೆಂಡರ್​ ಬಿಡುಗಡೆ ಮಾಡಿದ ಪ್ರಕಾಶ್​ ಜಾವ್ಡೇಕರ್
Follow us
ರಾಜೇಶ್ ದುಗ್ಗುಮನೆ
|

Updated on: Jan 08, 2021 | 8:54 PM

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್​ ಜಾವ್ಡೇಕರ್​ ಶುಕ್ರವಾರ ಡಿಜಿಟಲ್​ ಕ್ಯಾಲೆಂಡರ್​ ಹಾಗೂ ಡಿಜಿಟಲ್​ ಡೈರಿಯನ್ನು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್​ ಜಾವ್ಡೇಕರ್​ ಪಾಲ್ಗೊಂಡಿದ್ದರು. ಈ ವೇಳೆ, ಆ್ಯಂಡ್ರಾಯ್ಡ್​ ಹಾಗೂ ಐಒಎಸ್​ ಮೊಬೈಲ್​ಗಳಲ್ಲಿ ಕ್ಯಾಲೆಂಡರ್​ ಹಾಗೂ ಡೈರಿ ಲಭ್ಯವಾಗುವಂತೆ ನೋಡಿಕೊಳ್ಳಲು ಅಪ್ಲಿಕೇಷನ್​ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಪ್ರಕಾಶ್​ ಜಾವ್ಡೇಕರ್​, ಜನವರಿ 15ರಿಂದ ಒಟ್ಟು 11 ಭಾಷೆಗಳಲ್ಲಿ ಈ ಉಚಿತ ಆ್ಯಪ್​ ಲಭ್ಯವಿದೆ. ಪ್ರತಿ ವರ್ಷ ಈ ಆ್ಯಪ್​ನಲ್ಲಿ ಹೊಸ ಹೊಸ ಕ್ಯಾಲೆಂಡರ್​ ಸಿಗಲಿದೆ. ಅಲ್ಲದೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಪ್ರಕಾಶ್​ ಜಾವ್ಡೇಕರ್ ತಿಳಿಸಿದರು.

ಉಳಿದ ಡಿಜಿಟಲ್​ ಕ್ಯಾಲೆಂಡರ್​ ಆ್ಯಪ್​ಗಳಿಗೆ ಹೋಲಿಕೆ ಮಾಡಿದರೆ ಈ ಆ್ಯಪ್​ ತುಂಬಾನೇ ಅಭಿವೃದ್ಧಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್​ ಇಂಡಿಯಾ ಕನಸಿಗೆ ಸಾಕಾರ ನೀಡಲು ಈ ಆ್ಯಪ್​ ಸಹಕಾರಿ ಎಂದು ಪ್ರಕಾಶ್​ ಜಾವ್ಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮೊದಲಿನಿಂದಲೂ ಡಿಜಿಟಲ್​ ಇಂಡಿಯಾಗೆ ಮಹತ್ವ ನೀಡುತ್ತಲೇ ಬಂದಿದೆ. ಅಲ್ಲದೆ, ಸಾಕಷ್ಟು ಕ್ಷೇತ್ರಗಳಲ್ಲಿ ಡಿಜಿಟಲ್​  ಕ್ರಾಂತಿ ಮಾಡಿದೆ.

ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ